ಕಾಮಗಾರಿಗಳ ನ್ಯೂನತೆಗೆ ಯಾವುದೇ ಜನ ಪ್ರತಿನಿಧಿ ಕಾರಣರಲ್ಲ – ಉಮಾ ಪ್ರಕಾಶ್, ಮಾಜಿ ಮಹಾಪೌರರು.

ದಾವಣಗೆರೆ: ದಾವಣಗೆರೆ ಡಿಸಿಎಂ ಬಳಿ ಎಸ್ ಮಾದರಿಯ ರೈಲ್ವೆ ಅಂಡರ್ ಬ್ರಿಡ್ಜ್ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆದದ್ದು. ಅದರ ಉದ್ಘಾಟನೆ ಮಾಡಿದ್ದು ಆಗಿನ ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಕೆಎಚ್ ಮುನಿಯಪ್ಪನವರು.

ಯಾವುದೇ ಕಾಮಗಾರಿಗಳನ್ನು ಕೈಗೊಂಡಾಗ ಅದರ ತಾಂತ್ರಿಕ ವಿನ್ಯಾಸವನ್ನು ಮೇಲ್ವಿಚಾರಣೆ ಮಾಡುವುದು ಸಂಬಂಧಪಟ್ಟ ಇಂಜಿನಿಯರುಗಳದ್ದಾಗಿರುತ್ತದೆ. ಯಾವುದೇ ಪಕ್ಷದ ಜನಪ್ರತಿನಿಧಿಗಳು ತಮ್ಮ ಕ್ಷೇತ್ರಕ್ಕೆ ಏನು ಆಗಬೇಕೆಂಬುದನ್ನು ಪಟ್ಟಿ ಮಾಡಿ ಸಂಬಂಧಪಟ್ಟ ಇಲಾಖೆಯಿಂದ ಮಂಜೂರು ಮಾಡಿಸಿ ಹಣ ಬಿಡುಗಡೆ ಮಾಡಲು ಪ್ರಯತ್ನಿಸುತ್ತಾರೆ. ಆದರೆ ತಾಂತ್ರಿಕ ನ್ಯೂನತೆಗೆ ಜನಪ್ರತಿನಿಧಿಗಳು ಕಾರಣರಲ್ಲ. ಡಿಸಿಎಂ ಬಳಿ ರೈಲ್ವೆ ಅಂಡರ್ ಬ್ರಿಡ್ಜ್ 2004 ರಿಂದ 14ರವರೆಗೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಲಾಗಿತ್ತು.

ನಂತರ ನರೇಂದ್ರ ಮೋದಿಯವರ ನೇತೃತ್ವದ ಎನ್.ಡಿ.ಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಂಸದರಾದ ಜಿಎಂ ಸಿದ್ದೇಶ್ವರ ರವರು ಸರಿಪಡಿಸಲು ಕ್ರಮ ಕೈಗೊಂಡಿದ್ದರು. ಅಶೋಕ ರಸ್ತೆ ರೈಲ್ವೆ ಗೇಟಿನ ಸಮಸ್ಯೆ ಬಗೆಹರಿಸಲು ನೀವೇಕೆ ಪ್ರಯತ್ನಿಸಲಿಲ್ಲ? ಜಿ ಮಲ್ಲಿಕಾರ್ಜುನಪ್ಪ ಮತ್ತು ಜಿಎಂ ಸಿದ್ದೇಶ್ವರ್ ಸಂಸದರಾಗಿರುವುದು 26 ವರ್ಷದಿಂದ. ರೈಲ್ವೆ ಇಲಾಖೆ ಕೇಂದ್ರ ಸರ್ಕಾರದ ಅಧೀನದಲ್ಲಿ ಬರುತ್ತದೆ. ದೇಶದಲ್ಲಿ 57 ವರ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ನಿಮ್ಮಿಂದೇಕೆ ರೈಲ್ವೆ ಗೇಟಿನ ಸಮಸ್ಯೆ ಬಗೆಹರಿಸಲು ಸಾಧ್ಯವಾಗಲಿಲ್ಲ.

ಪ್ರಸ್ತುತ ಜಿ ಎಂ ಸಿದ್ದೇಶ್ವರವರ ಅಧಿಕಾರ ಅವಧಿಯಲ್ಲಿ ನಿರ್ಮಿಸಿರುವ ಗೀತಾಂಜಲಿ ಚಿತ್ರಮಂದಿರದ ಎದುರು ಚಿಕ್ಕ ಅಂಡರ್ ಬ್ರಿಡ್ಜ್ ನಿಂದಾಗಿ ವ್ಯಾಪಾರಸ್ಥರಿಗೆ, ಅಲ್ಲಿ ಸಂಚರಿಸುವ ಜನಗಳಿಗೆ, ದ್ವಿಚಕ್ರವಾಹನಗಳು, ಆಟೋಗಳು ಸೇರಿದಂತೆ ಲಘು ವಾಹನಗಳಿಗೆ ತುಂಬಾ ಅನುಕೂಲವಾಗಿದೆ. ಬೇಕಾದರೆ ನಿಮಗೆ ಮತ ನೀಡುವ ಜನರನ್ನು ಕೇಳಿ, ಈಗ ನಿರ್ಮಿಸಿರುವ ರೈಲ್ವೆ ಸೇತುವೆಯಿಂದ ಅನುಕೂಲವಾಗಿದೆಯಾ ಅಂತ.

ಬಾಡ ಕ್ರಾಸ್ ನಿಂದ ಸುವರ್ಣ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿ ಪ್ರಾರಂಭವಾಗಿದ್ದು 2003ರಲ್ಲಿ. 2004 ರಿಂದ 14ರ ವರೆಗೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷದ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಶಿರಮಗೊಂಡನಹಳ್ಳಿ ಬಳಿ ಅವೈಜ್ಞಾನಿಕ ಸೇತುವೆ ನಿರ್ಮಿಸಲಾಗಿದೆ. ಸ್ಮಾರ್ಟ್ ಸಿಟಿ ಮಂಜೂರಾಗಿರುವುದು ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ಅಧಿಕಾರದಲ್ಲಿ. ಮತ್ತು ದೇಶಾದ್ಯಂತ ನೂರು ನಗರಗಳು ಸ್ಮಾರ್ಟ್ ಸಿಟಿ ಆಗಬೇಕು ಎಂಬ ನರೇಂದ್ರ ಮೋದಿಯವರ ಕಲ್ಪನೆಯಿಂದ.
ಸ್ಮಾರ್ಟ್ ಸಿಟಿ 57 ವರ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ನೀವೇಕೆ ಮಾಡಲಿಲ್ಲ?.

ಮಂಜೂರ್ ಆಗಿರುವುದು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ. ಸುವರ್ಣ ಚತುಷ್ಪಥ ರಸ್ತೆ ನೀವೇಕೆ ನಿರ್ಮಿಸಲಿಲ್ಲ? ಅದನ್ನು ಪ್ರಾರಂಭಿಸಿದ್ದು ಕೇಂದ್ರದಲ್ಲಿ ವಾಜಪೇಯಿ ನೇತೃತ್ವದ ಎನ್.ಡಿ.ಎ ಸರ್ಕಾರದ ಅವಧಿಯಲ್ಲಿ. ಗ್ರಾಮ ಸಡಕ್ ಯೋಜನೆ ಯಡಿಯಲ್ಲಿ ಹಳ್ಳಿಗಳಿಗೆ ಉತ್ತಮ ರಸ್ತೆಯ ನಿರ್ಮಾಣ ಪ್ರಾರಂಭವಾಗಿದ್ದು ವಾಜಪೇಯಿ ಅವರ ನೇತೃತ್ವದ ಬಿಜೆಪಿ ಮತ್ತು ಎನ್ ಡಿ ಎ ಸರ್ಕಾರದ ಅವಧಿಯಲ್ಲಿ. 57 ವರ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ನೀವು ಏಕೆ ಮಾಡಲಿಲ್ಲ. ಉಮಾ ಪ್ರಕಾಶ್, ಮಾಜಿ ಮಹಾಪೌರರು ದಾವಣಗೆರೆ.

Leave a Reply

Your email address will not be published. Required fields are marked *

error: Content is protected !!