ನ. 25ರಿಂದ ಚಕ್ರವರ್ತಿ ಸೂಲಿಬೆಲೆ ಅವರಿಂದ ಸರಣಿ ಉಪನ್ಯಾಸ ಮಾಲಿಕೆ

ದಾವಣಗೆರೆ :Chakraborty Sulibele ನಮೋ ಬ್ರಿಗೇಡ್ ದಾವಣಗೆರೆ ವತಿಯಿಂದ ಮೂರು ದಿನಗಳ ಕಾಲ ದಾವಣಗೆರೆಯಲ್ಲಿ ಸರಣಿ ಉಪನ್ಯಾಸ ಮಾಲಿಕೆ ಹಮ್ಮಿಕೊಳ್ಳಲಾಗಿದ್ದು, ‘ಇನ್ನೂ ಮಲಗಿದರೆ, ಏಳುವಾಗ ಭಾರತವಿರುವುದಿಲ್ಲ!’ ಎಂಬ ಶೀರ್ಷಿಕೆಯಡಿ ಚಿಂತಕ ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಉಪನ್ಯಾಸ ನೀಡಲಿದ್ದಾರೆ.

ಇದೇ ನವಂಬರ್ 25, 26 ಹಾಗೂ 27 ರ ಸಂಜೆ 6-15 ರಿಂದ 8 ರವರೆಗೆ ಎಮ್.ಸಿ.ಸಿ ಎ ಬ್ಲಾಕ್ ನಲ್ಲಿರುವ “ದಿ ದಾವಣಗೆರೆ ಹರಿಹರ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ. ಚಕ್ರವರ್ತಿ ಸೂಲಿಬೆಲೆಯವರು ಉಪನ್ಯಾಸ ಮಾಲಿಕೆ ಮೂಲಕ ಭಾರತ ಭಂಜನೆಯ ಷಡ್ಯಂತ್ರಗಳ ಕುರಿತು ಬೆಳಕು ಚೆಲ್ಲಲಿದ್ದಾರೆ ಎಂದು ರಾಜ್ಯ ಸಂಚಾಲಕರಾದ ಶಾರದಾ ಡೈಮಂಡ್‌ ಮತ್ತು ಜಿಲ್ಲಾ ಸಂಚಾಲಕ ಚಂದ್ರಮೋಹನ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳೆದ ಒಂದು ದಶಕದಿಂದ ಜಾಗತಿಕವಾಗಿ ಭಾರತ ವಿಶ್ವದ ಬಲಿಷ್ಟ ರಾಷ್ಟ್ರಗಳ ಸಾಲಿನಲ್ಲಿ ರಾರಾಜಿಸುತ್ತಿದೆ. ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಸ್ಪಷ್ಟವಾದ ವಿದೇಶಾಂಗ ನೀತಿಯಿಂದ ಭಾರತ ಹಿಂದೆಂದಿಗಿಂತ ಸಶಕ್ತವಾಗಿ ಸೆಟೆದು ನಿಂತಿದೆ. ಆದರೆ, ಈ ಪ್ರಗತಿಯನ್ನು ಸಹಿಸದ ಒಂದು ದೊಡ್ಡ ಎಡಚರ ಬುದ್ಧಿಜೀವಿಗಳ ವರ್ಗವೊಂದು ಭಾರತದ ಅಖಂಡತೆಗೆ ಮಾರಕವಾಗುವ ದೇಶ ಭಂಜನೆಯ ಕೆಲಸಗಳಲ್ಲಿ ನಿರತವಾಗಿದೆ. ಜಾತಿಯ ವೈಶಮ್ಯ ಹೆಚ್ಚಿಸುವ, ಜನಾಂಗೀಯ ದ್ವೇಷವನ್ನು ಹೆಚ್ಚಿಸುವ, ಮತಾಂತರದ ಕೆಲಸಗಳಿಗೆ ಕುಮ್ಮಕ್ಕು ಕೊಡುವ, ನೈಜ ಇತಿಹಾಸವನ್ನು ತಿರುಚುವ, ಸುಳ್ಳು ವಿವಾದಗಳನ್ನು ಸೃಷ್ಟಿಸಿ ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಷ್ಟೆಗೆ ಕಳಂಕ ತರುವ ಕೆಲಸಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿರುವುದು ಅತ್ಯಂತ ಕಳವಳದ ಸಂಗತಿ ಎಂದು ಹೇಳಿದ್ದಾರೆ

.
ಅಂತರಾಷ್ಟ್ರೀಯ ಖ್ಯಾತಿಯ ಲೇಖಕರಾದ ರಾಜೀವ್ ಮಲ್ಲೋತ್ತರವರು ತಮ್ಮ ಪ್ರಸಿದ್ಧ ಕೃತಿಗಳಾದ “Breaking India” ( ಭಾರತ ಭಂಜನ) ಹಾಗೂ “Snakes in the Ganga” (ಗಂಗೆಯಲ್ಲಿ ವಿಷಸರ್ಪಗಳು) ಗ್ರಂಥಗಳಲ್ಲಿ ಆಧಾರ ಸಹಿತವಾಗಿ ವಿವರಿಸಿದ್ದಾರೆ. ಭಾರತದ ಪ್ರಜಾಪ್ರಭುತ್ವ, ಅಸ್ಮಿತೆಯನ್ನು ಪ್ರೀತಿಸುವ ಭಾರತೀಯರು ಪ್ರಸ್ತುತ ಈ ಕುರಿತಾಗಿ ಜಾಗೃತಗೊಳ್ಳಬೇಕಾಗಿರವ ಅವಶ್ಯಕತೆ ಬಹಳವಾಗಿದೆ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!