ಹಳೇ ಹುಬ್ಬಳ್ಳಿ ಕೋಮುಗಲಭೆ : ಸಿಎಂ ಮುಂದೆ ನಮ್ಮ ಮಕ್ಕಳನ್ನು ಬಿಡಿಸಿಕೊಡಿ ಎಂದು ಪೋಷಕರ ಅಳಲು

ಒಂದು ಕಡೆ ಮಹಿಳೆಯರ ಕಣ್ಣೀರು. ಇನ್ನೊಂದು ಕಡೆ ರಾಜ್ಯದ ಮುಖ್ಯಮಂತ್ರಿಗಳ ಮುಂದೆ ಆಕ್ರಂದನ. ಜಿಲ್ಲಾ ಉಸ್ತುವಾರಿ ಸಚಿವರ ಮುಂದೆನೂ ಪೋಷಕರ ಅಳಲು. ಹೌದು ಇವೆಲ್ಲ ದೃಶ್ಯಗಳು ಕಂಡು ಬಂದಿದ್ದು ಹುಬ್ಬಳ್ಳಿ ಏರಪೋರ್ಟ್ ನಲ್ಲಿ. 16 ತಿಂಗಳ ಹಿಂದೆ ನಡೆದ ಗಲಾಟೆ ಕೇಸ್ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಎಸ್ 16.04.2022 ರಲ್ಲಿ ಹುಬ್ಬಳ್ಳಿಯಲ್ಲಿ ವಾಟ್ಸಪ್ ಸ್ಟೇಟಸ್ ವಿಚಾರಕ್ಕೆ ದೊಡ್ಡ ಗಲಾಟೆಯಾಗಿತ್ತು.
ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಮುಂಭಾಗವೇ ದೊಡ್ಡ ಗಲಾಟೆಯಾಗಿತ್ತು. ದೇವಸ್ಥಾನ,ಆಸ್ಪತ್ರೆ ನೋಡದೆ ಕಲ್ಲು ಎಸೆಯಲಾಗಿತ್ತು. ಎಲ್ಲಕ್ಕಿಂತ ಮಿಗಿಲಾಗಿ ಪೊಲೀಸ್ ಜೀಪ್ ಮೇಲೆ ನಿಂತೂ ದರ್ಪ ಮೆರೆದಿದ್ರು. ವಾಟ್ಸಪ್ ಸ್ಟೇಟಸ್ ನಲ್ಲಿ ಒಂದು ಕೋಮಿಗೆ ಅವಹೇಳನ ಆಗಿದೆ ಎಂದು ಇನ್ನೊಂದು ಕೋಮಿನ ಜನ ಗಲಾಟೆ ಮಾಡಿದ್ರು. ನೂರಾರು ಜನ ಗುಂಪು ಗುಂಪಾಗಿ ಗಲಾಟೆ ಮಾಡಿದ್ರು. ತಡರಾತ್ರಿ ನಡೆದ ಗಲಾಟೆ ದೇಶದಲ್ಲಿಯೇ ದೊಡ್ಡ ಸುದ್ದಿಯಾಗಿತ್ತು.
ಹೌದು ಇದು ಹೆಚ್ಚು ಕಡಿಮೆ ವರ್ಷದ ಹಿಂದೆ ನಡೆದ ಗಲಾಟೆ. ಆ ಗಲಾಟೆ ಇಡೀ ದೇಶದಲ್ಲಿ ಸಂಚಲನ ಸೃಷ್ಟಿ ಮಾಡಿತ್ತು. ವಾಟ್ಸಪ್ ಸ್ಟೇಟಸ್ ನಿಂದ ಹೊತ್ತಿಕೊಂಡ ಗಲಾಟೆ ದೊಡ್ಡ ಅವಾಂತರ ಸೃಷ್ಟಿ ಮಾಡಿತ್ತು. ಕಿಡಗೇಡಿಗಳು ಪೊಲೀಸ್ ಜೀಪ್ ಮೇಲೆ ಹತ್ತಿ ಗಲಾಟೆ ಮಾಡಿದ್ರು. ಆ ಜಗಳಕ್ಕೆ ಕೆಲ ಸಂಘಟನೆಗಳು ವಿರೋಧ ಮಾಡಿದ್ರು. ಆ ಗಲಾಟೆ ದೊಡ್ಡ ವಿವಾದ ಹುಟ್ಟು ಹಾಕುತ್ತಲೇ 150 ಕ್ಕೂ ಹೆಚ್ಚು ಜನರನ್ನ ಪೊಲೀಸರು ಅರೆಸ್ಟ್ ಮಾಡಿದ್ರು. ಅಂದಹಾಗೆ ಇದು ನಡೆದಿದ್ದು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಬಳಿ.
ವಾಟ್ಸಪ್ ಸ್ಟೇಟಸ್ ವಿಚಾರಕ್ಕೆ ಹತ್ತಿಕೊಂಡ ಗಲಾಟೆ ಭುಗಿಲೆದ್ದಿತ್ತು. ಅದು ಎಪ್ರಿಲ್ 16 2022 ರಲ್ಲಿ ಹುಬ್ಬಳ್ಳಿಯಲ್ಲಿ ವಾಟ್ಸಪ್ ವಿಚಾರವೊಂದು ಧಗಧಗಿಸಿತ್ತು. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಮುಂಭಾಗವೇ ದೊಡ್ಡ ಗಲಾಟೆಯಾಗಿತ್ತು. ದೇವಸ್ಥಾನ,ಆಸ್ಪತ್ರೆ ಅಂತ ನೋಡದೆ ಕಲ್ಲು ಎಸೆಯಲಾಗಿತ್ತು. ಎಲ್ಲಕ್ಕಿಂತ ಮಿಗಿಲಾಗಿ ಪೊಲೀಸ್ ಜೀಪ್ ಮೇಲೆ ನಿಂತೂ ದರ್ಪ ಮೆರೆದಿದ್ರು. ನೂರಾರು ಜನ ಗುಂಪು ಗುಂಪಾಗಿ ಗಲಾಟೆ ಮಾಡಿದ್ರು.
ತಡರಾತ್ರಿ ನಡೆದ ಗಲಾಟೆ ದೇಶದಲ್ಲಿಯೇ ದೊಡ್ಡ ಸುದ್ದಿಯಾಗಿತ್ತು. ಈ ಗಲಾಟೆಗೆ ಹಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ವು. ಈ ಗಲಾಟೆ ಹಿಂದೆ ಬೇರೆ ಇದೆ ಎಂದು ಆರೋಪ ಮಾಡಿದ್ರು. ಆಕ್ರೋಶ ಹೆಚ್ಚಾದಂತೆ ಪೊಲೀಸರು 152 ಕ್ಕೂ ಹೆಚ್ಚು ಜನರನ್ನ ಅರೆಸ್ಟ್ ಮಾಡಿದ್ರು. ಆದ್ರೆ ಅದರಲ್ಲಿ ಕೇವಲ ಆರು ಜನರಿಗೆ ಬೇಲ್ ಸಿಕ್ಕಿದ್ದು ಬಿಟ್ರೆ ಉಳಿದವರಿಗೆ ಜಾಮೀನು ಸಿಕ್ಕಿಲ್ಲ. ಅದಾಗಲೇ NIA ಕೂಡಾ ಚಾರ್ಜ್ ಸೀಟ್ ಸಲ್ಲಿಕೆ ಮಾಡಿದೆ. ವಾಟ್ಸಪ್ ಸ್ಟೇಟಸ್ ನಲ್ಲಿ ಒಂದು ಕೋಮಿಗೆ ಅವಹೇಳನ ಆಗಿದೆ ಎಂದು ಇನ್ನೊಂದು ( ಮುಸ್ಲಿಂ )ಕೋಮಿನ ಜನ ಗಲಾಟೆ ಮಾಡಿದ್ರು. ಅವರೆಲ್ಲರನ್ನು ಪೊಲೀಸ್ ಎತ್ತಾಕೊಂಡು ಹೋಗಿ ಬೆಂಡೆತ್ತಿದ್ರು. ಗಲಾಟೆಯಲ್ಲಿ 20 ರಿಂದ 25 ವಯಸ್ಸಿನ ಯುವಕರೇ ಹೆಚ್ವಾಗಿದ್ದರು.
ಇದೀಗ ಮತ್ತೆ ಆ ವಿಚಾರ ಬಂದಿರೋದಕ್ಕು ವಿಷ್ಯ ಇದೆ. ಆ ಗಲಾಟೆಯಲ್ಲಿ ಕೇವಲ ಆರು ಜನರಿಗೆ ಜಾಮೀನು ಸಿಕ್ಕಿದ್ದು ಬಿಟ್ರೆ,ಉಳಿದವರು ಇನ್ನು ಜೈಲಿನಲ್ಲಿದ್ದಾರೆ. ಇದೀಗ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಲೇ ಅವರ ಬಿಡುಗಡೆಗೆ ಒತ್ತಾಯ ಹೆಚ್ಚಾಗಿದೆ. ಖುದ್ದು ಸಿಎಂ ಸಿದ್ದರಾಮಯ್ಯ ಮನೆ ಮುಂದೆ ಕಣ್ಣೀರು ಹಾಕುತ್ತಾ ಬಂಧಿತರ ಪೋಷಕರು ಮನವಿ ಮಾಡಿದ್ದಾರೆ.. ಸಿದ್ದರಾಮಯ್ಯ ಹುಬ್ಬಳ್ಳಿ ಬಂದಾಗ ಮಕ್ಕಳನ್ನ ಬಿಡುಗಡೆ ಮಾಡಿ ಎಂದು ಮನವಿ ಕೊಟ್ಟಿದ್ದಾರೆ..
ಮುಖ್ಯಮಂತ್ರಿಗಳ ಮುಂದೆ ಕಣ್ಣೀರು ಹಾಕಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಇದೀಗ ಪೋಷಕರ ಆರೋಪ ಅವರು ಏನೂ ಮಾಡಿಲ್ಲ ಅನ್ನೋದಾಗಿದೆ. ಸುಖಾ ಸುಮ್ಮನೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನಮ್ಮ ಮಕ್ಕಳನ್ನ ಬಿಡಿಸಿ ಎಂದು ಪೋಷಕರು ಸಿಕ್ಕ ಸಿಕ್ಕವರ ಬಳಿ ಮನವಿ ಮಾಡಿದ್ದಾರೆ. ಶಾಸಕರಿಂದ ಹಿಡಿದು ಸಿಎಮ್ ವರೆಗೂ ಬಂಧಿತರ ಪೋಷಕರು ಮನವಿ ಮಾಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಲೇ ಬಂಧಿತರ ಬಿಡುಗಡೆ ಒತ್ತಾಯ ಹೆಚ್ಚಾಗಿದೆ. ಯಾಕಂದ್ತೆ ಕೆಲ ರಾಜಕಾರಣಿಗಳು ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಬಂಧಿತರನ್ನು ಹೊರಗೆ ಕರೆದುಕೊಂಡು ಬರೋದಾಗಿ ಭರವಸೆ ಕೊಟ್ಟಿದ್ದರು. ಹೀಗಾಗಿ ಇದೀಗ ಪೋಷಕರು ಕಾಂಗ್ರೆಸ್ ನಾಯಕರಿಗೆ ದುಂಬಾಲು ಬಿದ್ದಿದ್ದಾರೆ.
ಒಟ್ಟಾರೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಲೇ ಹಳೇ ಹುಬ್ಬಳ್ಳಿ ಗಲಾಟೆ ಮತ್ತೆ ಮುನ್ನಲೆಗೆ ಬಂದಿದೆ. ಪೊಲಿಸ್ ಜೀಪ್ ಮೇಲೆ ನಿಂತು ದರ್ಪ ಮೆರೆದವರಿಗೆ ಇದುವರೆಗೂ ಜಾಮೀನು ಸಿಕ್ಕಿಲ್ಲ. ಆದ್ರೆ ಪೋಷಕರು ಮಾತ್ರ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಲೇ ಆ್ಯಕ್ಟೀವ್ ಆಗಿದ್ದು, ಮಕ್ಕಳನ್ನ ಹೊರಗೆ ಕರೆದುಕೊಂಡು ಬರೋಕೆ ಹರಸಾಹಸ ಪಡುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಇದೀಗ ಗಲಾಟೆಯಲ್ಲಿ ಭಾಗಿಯಾದವರ ಪರ ನಿಲ್ತಾರಾ ಇಲ್ವೋ ಅನ್ನೋದು ಯಕ್ಷ ಪ್ರಶ್ನೆ…
-ಸಂಗಮೇಶ್ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ