ಜ.25, 26ರಂದು ಶ್ರೀ ಬೀರಲಿಂಗೇಶ್ವರ ಸ್ವಾಮಿಯ ನೂತನ ದೇವಸ್ಥಾನದ ಪ್ರಾರಂಭೋತ್ಸವ
ದಾವಣಗೆರೆ: ನಗರದ ಹೊಂಡದ ರಸ್ತೆಯಲ್ಲಿರುವ ಶ್ರೀ ಬೀರಲಿಂಗೇಶ್ವರ ಸ್ವಾಮಿಯ ನೂತನ ದೇವಸ್ಥಾನದ ಪ್ರಾರಂಭೋತ್ಸವವು ಜ.25ಮತ್ತು 26ರಂದು ನಡೆಯಲಿದೆ.
ಜ.25ರಂದು ನಗರದ ಪಿಬಿ ರಸ್ತೆಯಲ್ಲಿರುವ ಶ್ರೀ ಹೊರಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಸಂಜೆ 7:30ರಿಂದ ಆಲಯ ಪ್ರವೇಶ, ಗಂಗಾಪೂಜೆ, ಕಲಶಾರಾಧನೆ, ಮಂಡಲಾರಾಧನೆ, ನಿರ್ವಿಘ್ನ, ಗಣಹೋಮ, ವಾಸ್ತು ರಕ್ಷೆಘ್ನ ಹೋಮ ಸೇರಿದಂತೆ ವಿವಿಧ ಪೂಜೆ ಹವನಗಳು ನಡೆಯಲಿದ್ದು, ರಾಥ್ರಿ 8 ಗಂಟೆಗೆ ವಿವಿಧ ಗ್ರಾಮಗಳ ದೇವರುಗಳ ಆಗಮನದ ನಂತರ ಗಂಗಾಪೂಜೆ ಕಾರ್ಯಕ್ರಮ ನೆರವೇರಲಿದ್ದು, ನಂತರ ಪ್ರಸಾದ ವಿನಿಯೋವಿದೆ.
ಜ.26ರಂದು ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ಬೀರಲಿಂಗೇಶ್ವರ ಸ್ವಾಮಿಯ ಪ್ರಾಣ ಪ್ರತಿಷ್ಠಾಪನೆ, ಶಾಂತಿ ಹೋಮ, ರುದ್ರ ಹೋಮ, ಮಹಾಪೂರ್ಣಾಹುತಿ, ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ಇರಲಿದೆ.
ಅಂದು ಬೆಳಿಗ್ಗೆ 11:30ಕ್ಕೆ ಶ್ರೀ ವೇದಮೂರ್ತಿ ಚನ್ನಯ್ಯ ಒಡೆಯರ್ ವೇದಿಕೆಯಲ್ಲಿ ನಡೆಯುವ ಧರ್ಮಸಭೆಯಲ್ಲಿ ಕನಕಗುರುಪೀಠದ ಶ್ರೀ ನಿರಂಜನಾನAದಪುರಿ ಸ್ವಾಮೀಜಿ, ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪ್ರಸನ್ನರೇಣುಕ ವೀರಸೋಮೇಶ್ವರ ಸ್ವಾಮೀಜಿ, ಐರಣಿಹೊಳೆಮಠದ ಶ್ರೀ ಬಸವರಾಜ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಜಡೀ ಸಿದ್ದೇಶ್ವರ ಮಠದ ಶ್ರೀ ಶಿವಾನಂದ ಸ್ವಾಮೀಜಿ ಹಾಗೂ ಚಂದ್ರಗಿರಿ ಮಠದ ಶ್ರೀ ಮುರಳಿಧರ ಸ್ವಾಮೀಜಿ, ಬಿಳಿಚೋಡಿನ ಡಾ. ಉದಯಶಂಕರ ಒಡೆಯರ್, ಡಾ. ನಾ. ಲೋಕೇಶ ಒಡೆಯರ್ ದಿವ್ಯ ಸಾನಿಧ್ಯವನ್ನು ವಹಿಸಲಿದ್ದಾರೆ.
ಮುಖ್ಯಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಶಾಸಕ ಶಾಮನೂರು ಶಿವಶಂಕರಪ್ಪ, ಶಾಸಕ ಎಸ್.ಎ. ರವೀಂದ್ರನಾಥ್, ವಿಪ ಸದಸ್ಯ ಹೆಚ್. ವಿಶ್ವನಾಥ್, ಶಾಸಕ ಎಸ್. ರಾಮಪ್ಪ, ಮಾಜಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್, ಹೆಚ್. ಆಂಜನೇಯ, ರುದ್ರಪ್ಪ ಲಮಾಣಿ, ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಸೇರಿದಂತೆ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಸೇವಾ ಸಮಿತಿ ತಿಳಿಸಿದೆ.