ಕರೋನಾದಿಂದ ಪೋಷಕರಿಬ್ಬರನ್ನು ಕಳೆದುಕೊಂಡ ಅನಾಥ ಐದು ಮಕ್ಕಳಲ್ಲಿ, ಒಂದು ಮಗುವಿನ ಉನ್ನತ ಶಿಕ್ಷಣದ ಜವಾಬ್ದಾರಿ ಪಡೆದ ಸಂಸದ ಜಿ.ಎಂ. ಸಿದ್ದೇಶ್ವರ್

ದಾವಣಗೆರೆ: ಕರೋನಾದಿಂದ ಪೋಷಕರಿಬ್ಬರನ್ನು ಕಳೆದುಕೊಂಡು ಅನಾಥವಾದ ಐದು ಮಕ್ಕಳಿದ್ದು, ಅದರಲ್ಲಿ ಒಂದು ಮಗುವಿನ ಉನ್ನತ ಶಿಕ್ಷಣದ ಜವಾಬ್ದಾರಿಯನ್ನು ಸಂಸದ ಜಿ.ಎಂ. ಸಿದ್ದೇಶ್ವರ್ ವಹಿಸಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ಸೋಂಕಿನಿಂದ ತಂದೆ ಅಥವಾ ತಾಯಿ ಕಳೆದುಕೊಂಡ ಏಕಪೋಷಕ ಇರುವ 100 ಮಕ್ಕಳಿದ್ದು, ಐವರು ಮಕ್ಕಳು ಅನಾಥರಾಗಿದ್ದಾರೆ. ಸಂಸದ ಜಿ.ಎಂ. ಸಿದ್ದೇಶ್ವರ್‌, ಓರ್ವ ಅನಾಥ ಮಗುವಿನ ಉನ್ನತ ಶಿಕ್ಷಣದ ಜವಾಬ್ದಾರಿ ಹೊತ್ತಿರುವುದು ಶ್ಲಾಘನೀಯ ‌ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ದಿ ಸಚಿವೆ ಶಶಿಕಲಾ‌ ಜೊಲ್ಲೆ ಸಂಸದರ ಕಾರ್ಯವನ್ನ ಅಭಿನಂದಿಸಿದರು.

ಅನಾಥರಾದ ಐವರು ಮಕ್ಕಳಿಗೂ ಬಾಲ ಹಿತೈಷಿ ಹಾಗೂ ಸಿಎಂ ಬಾಲಸೇವಾ ಯೋಜನೆ ಅಡಿ ಸಹಾಯ ಮಾಡಲಾಗುವುದು ಎಂದರು.

Leave a Reply

Your email address will not be published. Required fields are marked *

error: Content is protected !!