ಜಿಲ್ಲಾ ತಂಬಾಕು ನಿಯಂತ್ರಣ ಕೋಶದಿಂದ ಕಾರ್ಯಾಚರಣೆ

Operated by the District Tobacco Control Cell

Operated by the District Tobacco Control Cell

ದಾವಣಗೆರೆ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತಂಬಾಕು ನಿಯಂತ್ರಣ ಕಾಯ್ದೆಯಡಿ ಪರವಾನಗಿ ಪಡೆಯದೇ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿರುವ ಅಂಗಡಿಗಳ ಮೇಲೆ ದಾಳಿ ನಡೆಸಿ ಪ್ರಕರಣ ದಾಖಲಿಸಲಾಗಿದೆ.

ಮಹಾನಗರ ಪಾಲಿಕೆಯ ತಂಬಾಕು ಮಾರಾಟಗಾರರಿಗೆ ಪ್ರತ್ಯೇಕ ಪರವಾನಗಿಯನ್ನು ಪರಿಣಾಮಕಾರಿಯಾಗಿ ಅನು??ಠನ ಮಾಡುವ ನಿಟ್ಟಿನಲ್ಲಿ ವಲಯ 2 ರ ವ್ಯಾಪ್ತಿಯಲ್ಲಿ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಜಂಟಿ ಕಾರ್ಯಾಚರಣೆ ಕೈಗೊಳ್ಳಲಾಯಿತು.

ಮಹಾನಗರ ಪಾಲಿಕೆ ವ್ಯಾಪ್ತಿಯ ವಾಣಿಜ್ಯ ಪರವಾನಗಿ ಹೊಂದಿದ ತಂಬಾಕು ಉತ್ಪನ್ನಗಳ ಮಾರಾಟಗಾರರಿಗೆ ಈಗಾಗಗಲೇ ನಿರ್ದಿಷ್ಟ ಸಮಯ ನೀಡಲಾಗಿದೆ. ಕೆಲವು ಮಾಲೀಕರು ಆಯಾ ವಾರ್ಡ್‌ ಆರೋಗ್ಯ ನಿರೀಕ್ಷಕರ ಹತ್ತಿರ ಅರ್ಜಿ ನಮೂನೆಗಳನ್ನು ನೀಡಿದ್ದು, ಅದರಂತೆ ಉಳಿದ ಮಾಲೀಕರು ಪರವಾನಗಿ ಪಡೆಯದೆ ಇರುವುದರಿಂದ ದಾಳಿ ಕೈಗೊಂಡು ದಂಡ ವಿಧಿಸಿ ಪಾಲಿಕೆ ವ್ಯಾಪ್ತಿಯ ಎಲ್ಲಾ ವಾಣಿಜ್ಯ ಪರವಾನಗಿ ಹೊಂದಿದ ತಂಬಾಕು ಮಾರಾಟಗಾರರು ಕಡ್ಡಾಯವಾಗಿ ಪರವಾನಗಿಯನ್ನು ಪಡೆಯುವಂತೆ ತಂಡ ಸೂಚಿಸಿತು.

ತಂಡವು ತಂಬಾಕು ಪರವಾನಗಿ ನಿಯಮದಂತೆ 10 ಪ್ರಕರಣಗಳನ್ನು ದಾಖಲಿಸಿ ರೂ.5000 ಹಾಗೂ ಕೋಟ್ಟಾ-2003 ರ ಕಾಯ್ದೆಯಡಿ 4 ಪ್ರಕರಣಗಳನ್ನು ದಾಖಲಿಸಿ ರೂ.600 ಒಟ್ಟು 14 ಪ್ರಕರಣಗಳನ್ನು ದಾಖಲಿಸಿ ರೂ.5600 ದಂಡ ವಿಧಿಸಲಾಯಿತು.

ಮಹಾನಗರ ಪಾಲಿಕೆಯ ಆರೋಗ್ಯ ನಿರೀಕ್ಷಕ ರಾಘವೇಂದ್ರ, ಜಿ, ಸಂತೋಷ, ಹರೀಶ್.ಕೆ.ಎನ್, ನಿಖಿಲ್.ಜೆ.ಹೆಚ್, ರಾಮಪ್ಪ, ಮಲ್ಲಿಕಾ ಗುಡೇಕೋಟೆ, ಉಷಾ.ಹೆಚ್ ಮತ್ತು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಸತೀಶ ಕಲಹಾಳ, ಸಮಾಜ ಕಾರ್ಯಕರ್ತರಾದ ದೇವರಾಜ ಕೆ.ಪಿ ಇದ್ದರು

Leave a Reply

Your email address will not be published. Required fields are marked *

error: Content is protected !!