ನಮನ ಅಕಾಡೆಮಿ ವತಿಯಿಂದ ಹೋಚಿ ಮಿನ್ ನಗರದಲ್ಲಿ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ ಆಯೋಜನೆ

ದಾವಣಗೆರೆ: ದಾವಣಗೆರೆಯ ಪ್ರತಿಷ್ಠಿತ ಸಾಂಸ್ಕೃತಿಕ ಸಂಸ್ಥೆ ನಮನ ಅಕಾಡೆಮಿ ಯು ಹೊರದೇಶದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಿದ್ದು ವಿಯೆಟ್ನಮ್ ದೇಶದ ವಿಯೋಗ ವರ್ಲ್ಡ್, ದಾವಣಗೆರೆಯ ನಮನ ಅಕಾಡೆಮಿ ಹಾಗೂ ಅಷ್ಟಾಂಗ ವಿನ್ಯಾಸ ಇಂಟರ್ನ್ಯಾಷನಲ್ ಯೋಗ ಅಕಾಡೆಮಿ (ಏವಿಯ) ಸಹಭಾಗತ್ವದಲ್ಲಿ ವಿಶ್ವ ಯೋಗ ದಿನದ ಅಂಗವಾಗಿ ಜೂನ್ 11ರಂದು ಹೋ ಚಿ ಮೀನ್ ನಗರದಲ್ಲಿ ನಡೆಯುತ್ತಿರುವ “ದಿ ವಿಯೋಗ ವರ್ಲ್ಡ್ ಸ್ಟಾರ್ ಆರ್ಟಿಸ್ಟಿಕ್ ಯೋಗ ಅಂಡ್ ಇಂಟರ್ನ್ಯಾಷನಲ್ ಕಲ್ಚರಲ್ ಎಕ್ಸ್ಚೇಂಜ್” ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಿದ್ದಾರೆ.
ಈ ಕಾರ್ಯಕ್ರಮದಲ್ಲಿ ನಮನ ಅಕಾಡೆಮಿಯ ಕಲಾವಿದರಾದ ವಿದುಷಿ ಶ್ರೀಮತಿ ಮಾಧವಿ ಡಿ ಕೆ, ಪೂಜಾ ಆರ್ ಧಾಗೆ, ಪವನ್ ಕುಮಾರ್ ಎನ್ ಟಿ, ಮಂದಿರ ಎಂ, ರಕ್ಷಾ ಹೆಚ್ ಎಂ, ಅಕ್ಷರ ಎನ್, ವಸುಂದರ ಎನ್, ಗೌರಿ ಬಿ ಟಿ, ಹಂಸಿಕ ರವಿಕುಮಾರ್, ರುಹಿಕ ಸತೀಶ್ ಶೆಟ್ಟರ್ ವಚನ ನೃತ್ಯ, ಜನಪದ ನೃತ್ಯ, ಲಘು ಶಾಸ್ತ್ರೀಯ ನೃತ್ಯ ಹಾಗೂ ಶಾಸ್ತ್ರೀಯ ನೃತ್ಯಗಳನ್ನು ಪ್ರಸ್ತುತಪಡಿಸಲಿದ್ದಾರೆ. ಏವಿಯ ತಂಡದವರು ದಾಂಡಿಯ ನೃತ್ಯ ಮಾಡಲಿದ್ದಾರೆ ಜೊತೆಗೆ ವಿವಿಧ ಯೋಗ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ.
ದಾವಣಗೆರೆ, ಹುಬ್ಬಳ್ಳಿ, ಬೆಂಗಳೂರಿನಲ್ಲಿನ ಯೋಗಾಪಟುಗಳು ಹಾಗೂ ಕಲಾವಿದರೊಂದಿಗೆ ಇನ್ನೂ ಅನೇಕ ದೇಶದ ಯೋಗಾಪಟುಗಳು ಹಾಗೂ ಕಲಾವಿದರು ಈ ಅಂತರಾಷ್ಟ್ರೀಯ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಪ್ರತಿಭಾ ಪ್ರದರ್ಶನವನ್ನು ನೀಡಲಿದ್ದಾರೆ. ಸುಮಾರು 2000ಕ್ಕೂ ಹೆಚ್ಚು ಜನ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
ಏವಿಯ ತಂಡದ ಅಂತರರಾಷ್ಟ್ರೀಯ ಯೋಗ ರೆಫ್ರಿ ಹಾಗೂ ಯೋಗ ಕೋಚ್ ಆದ ಯೋಗಾಚಾರ್ಯ ಶ್ರೀ ತೀರ್ಥರಾಜ್ ಹೋಲೂರ್ ಹಾಗೂ ನಮನ ಅಕಾಡೆಮಿಯಾದ ಗುರು ವಿದುಷಿ ಶ್ರೀಮತಿ ಮಾಧವಿ ಡಿ ಕೆ ಅವರು ಈ ಸ್ಪರ್ಧೆಗಳಲ್ಲಿ ಅಂತರರಾಷ್ಟ್ರೀಯ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇವರ ಪಯಣ ಸುಖಕರವಾಗಿರಲಿ, ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ, ದೇಶಕ್ಕೆ, ರಾಜ್ಯಕ್ಕೆ ಹಾಗೂ ನಗರಕ್ಕೆ ಹೆಚ್ಚಿನ ಗೌರವ ತರುವಂತಾಗಲಿ ಎಂದು ಶಾಸಕರಾದ ಡಾಕ್ಟರ್ ಶಾಮನೂರು ಶಿವಶಂಕರಪ್ಪನವರು, ನೂತನ ಸಚಿವರಾದ ಶ್ರೀ ಎಸ್ ಎಸ್ ಮಲ್ಲಿಕಾರ್ಜುನ್ ರವರು, ಶ್ರೀಮತಿ ಡಾಕ್ಟರ್ ಪ್ರಭಾ ಮಲ್ಲಿಕಾರ್ಜುನ್ ರವರು, ದಿನೇಶ್ ಕೆ ಶೆಟ್ಟಿ ಯವರು ನಮನ ಅಕಾಡೆಮಿಯ ಕಾರ್ಯಕಾರಿ ಸಮಿತಿಯವರು, ಪೋಷಕರು, ವಿದ್ಯಾರ್ಥಿಗಳು, ಪ್ರೋತ್ಸಾಹಕರು ಹಾಗೂ ಹಿತೈಷಿಗಳು ಹಾರೈಸಿದ್ದಾರೆ.