ಮತದಾನ ಕೇಂದ್ರ ಮತ್ತು ಮತದಾರರ ಮಾಹಿತಿ  :

ಮತದಾನ ಕೇಂದ್ರ ಮತ್ತು ಮತದಾರರ ಮಾಹಿತಿ  :

ದಾವಣಗೆರೆ: ಜಿಲ್ಲೆಯಲ್ಲಿ 7 ವಿಧಾನ ಸಭಾ ಕ್ಷೆತ್ರ ವ್ಯಾಪ್ತಿಯಲ್ಲಿ  1683 ಮುಖ್ಯ  ಮತದಾನ ಕೇಂದ್ರ ಹಾಗೂ 2 ಹೆಚ್ಚುವರಿ ಮತದಾನ ಕೇದ್ರಗಳು ಒಳಗೊಂಡಂತೆ 1685 ಮತದಾನ ಕೇಂದ್ರಗಳನ್ನು ಗುರುತಿಸಲಾಗಿದೆ. 2023 ಮಾಚ್ ್  16 ದಿನಾಂಕಕ್ಕೆ ಜಿಲ್ಲೆಯಲ್ಲಿ  713136, ಪುರುಷ, 709950 ಮಹಿಳೆಯರು ,  117 ಇತರೆ ಹಾಗೂ 471 ಸೇವಾ ಮತದಾರರು ಒಳಗೊಂಡಂತೆ  ಒಟ್ಟಾರೆಯಾಗಿ  14,23,674 ಅರ್ಹ ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು.
18 ರಿಂದ 19 ವರ್ಷ ವಯೋಮಾನದ 28.639  ಮತದಾರರು, 20 ರಿಂದ 29 ವರ್ಷ ವಯೋಮಾನದ 28,0639 ಮತದಾರರು, 30 ರಿಂದ 39 ವರ್ಷ ವಯೋಮಾನದ 34,0286 ಮತದಾರರು, 40 ರಿಂದ 49 ವರ್ಷ ವಯೋಮಾನದ 30,4932 ಮತದಾರರು, 50 ರಿಂದ 59 ವರ್ಷ ವಯೋಮಾನದ 22,7026 ಮತದಾರರು, 60 ರಿಂದ 69 ವರ್ಷ ವಯೋಮಾನದ 143303 ಮತದಾರರು, 70 ರಿಂದ 79 ವರ್ಷ ವಯೋಮಾನದ 71,421 ಮತದಾರರು, 80 ರಿಂದ 89 ವರ್ಷ ವಯೋಮಾನದ 23,353 ಮತದಾರರು, 90 ರಿಂದ 99 ವರ್ಷ ವಯೋಮಾನದ 4,007 ಮತದಾರರು ಹಾಗೂ 100 ವರ್ಷ ಮೇಲ್ಪಟ್ಟ 213 ಮತದಾರರು ಇದ್ದಾರೆ, 80 ವರ್ಷಕ್ಕಿಂತ ಮೇಲ್ಪಟ್ಟ ವಯೋಮಾನದ 27,573 ಮತದಾರರಿದ್ದಾರೆ  ಎಂದರು.
ವಿಶೇಷ ಚೇತನ ಮತದಾರರ ವಿವರ :
ಜಿಲ್ಲೆಯಲ್ಲಿ 11,256 ಪುರುಷ  7959 ಮಹಿಳೆಯರು ಒಳಗೊಂಡಂತೆ 19,215 ವಿಶೇಷ ಚೇತನ ಮತದಾರರಿದ್ದಾರೆ ಹಾಗೂ ಶಾಸಕರು, ಸಂಸದರು ಒಳಗೊಂಡಂತೆ  1,112 ಜನರನ್ನು  ವಿ.ಐ.ಪಿ  ಮತದಾರರನ್ನು  ಗುರುತಿಸಲಾಗಿದೆ. ಎಂದರು.
ಪಾರದರ್ಶಕ ಚುನಾವಣೆಗೆ ನಿಗಾ ತಂಡಗಳ  ರಚನೆ  : ಜಿಲ್ಲೆಯಲ್ಲಿ  ಪಾರದರ್ಶಕ ಹಾಗೂ  ಶಾಂತಿಯುತ ಚುನಾವಣೆಗೆ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳು ಒಳಗೊಂಡಂತೆ 164 ಸೆಕ್ಟರ್ , 63 ಫೆಯಿಂಗ್ ಸ್ಕ್ವಾಡ್ , 123 ಎಸ್.ಎಸ್.ಟಿ ತಂಡಗಳು,  15 ವಿಡಿಯೋ ಸರ್ವಲೆನ್ಸ ತಂಡ , 7 ವಿವಿಟಿ ಟೀಮ್,  7  ಎ.ಇ.ಓ ಹಾಗೂ ಲೆಕ್ಕ ಪರಿಶೀಲನಾ  ತಂಡಗಳನ್ನು ರಚಿಸಲಾಗಿದೆ ಶೀಘ್ರದಲ್ಲೇ ಚೆಕ್ ಪೋಸ್ಟ್ ಗಳನ್ನು ಆರಂಭಿಸಲಾಗುವುದು ಎಂದರು.

Leave a Reply

Your email address will not be published. Required fields are marked *

error: Content is protected !!