ವಿಪ್ರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ದಾವಣಗೆರೆ: ತಾಲ್ಲೂಕು ಬ್ರಾಹ್ಮಣ ಸಮಾಜ ಸೇವಾ ಸಂಘದ ವತಿಯಿಂದ ಇತ್ತೀಚಿಗೆ ವಿಪ್ರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನಗರದ ಶ್ರೀ ಶಂಕರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮೈಸೂರಿನ ಬ್ಯುಸಿನೆಸ್‌ ಬೈ ಬ್ರಾಹ್ಮನ್ಸ್‌ನ ಅಧ್ಯಕ್ಷ ಅನಂತ ನಾಗರಾಜ್ ಮತ್ತು ನಿರ್ದೇಶಕ ನರಸಿಂಹ ಪ್ರಸಾದ್ ಭಾಗವಹಿಸಿ 2022-23ನೇ ಶೈಕ್ಷಣಿಕ ವರ್ಷದಲ್ಲಿ ಎಸ್‌.ಎಸ್.ಎಲ್.ಸಿ. ದ್ವಿತೀಯ ಪಿಯುಸಿ ಮತ್ತು ಇಂಜಿನಿಯರಿಂಗ್‌ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕಗನ್ನು ಗಳಿಸಿ ತೇರ್ಗಡೆ ಹೊಂದಿದ, ಮತ್ತು ಕ್ರೀಡಾ ವಿಭಾಗದಲ್ಲಿ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿಪ್ರ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ, ಸ್ಮರಣಿಕೆ, ನಗದು ಬಹುಮಾನವನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಡಾ. ಎಂ.ಸಿ. ಶಶಿಕಾಂತ್ ಮಾತನಾಡಿ, ವಿದ್ಯಾರ್ಥಿಗಳು ಗುರಿ ಇಟ್ಟು ಸಾಧನೆ ಮಾಡಿ ಸಮಾಜದ ಗೌರವ ಹೆಚ್ಚಿಸಿ, ಹೆಣ್ಣುಮಕ್ಕಳು ಲವ್‌ ಜಿಹಾದ್‌ ಇತ್ಯಾದಿ ಕುತಂತ್ರಗಳಿಗೆ ಬಲಿಯಾಗದೆ ಭವಿಷ್ಯದ ಕಡೆ ಗಮನ ಇರಲಿ. ತಂದೆ ತಾಯಿಗಳನ್ನು ಮರೆಯದೆ, ಅವರು ವೃದ್ಧಾಶ್ರಮಗಳಿಗೆ ಎಂದೂ ಸೇರುವ ಪರಿಸ್ಥಿತಿ ಬರದಂತೆ ಚೆನ್ನಾಗಿ ನೋಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.ವಿಪ್ರ ಬ್ಯುಸಿನೆಸ್ ದಾರರ ಕೈಪಿಡಿ ಹೊರತರುವ ಉದ್ದೇಶವಿದ್ದು, ಅದಕ್ಕಾಗಿ ವ್ಯಾಪಾರ, ವ್ಯವಹಾರ, ಸ್ವಯಂ ಉದ್ಯೋಗಸ್ಥರು ನಿಗದಿತ ನಮೂನೆಯಲ್ಲಿ ವಿವರಗಳನ್ನು ಸಲ್ಲಿಸಲು ತಿಳಿಸಿದರು.

ಕಾರ್ಯಕ್ರಮದಲ್ಲಿ ಸತ್ಯನಾರಾಯಣ ರಾವ್, ಮೋತಿ, ಆರ್. ಸುಬ್ರಮಣ್ಯ, ಉಮಾಕಾಂತ್, ದೀಕ್ಷಿತ್, ಪಿ. ಜಿ ರಂಜನ್‌, ಬಾಲಕೃಷ್ಣ ವೈದ್ಯ, ಶೇಷಾಚಲ, ರಾಮಚಂದ್ರರಾವ್, ಉಮೇಶ್ ಕುಲಕರ್ಣಿ, ಹರಿಹರದ ಉದ್ಯಮಿಗಳಾದ ಸತ್ಯನಾರಾಯಣ, ಡಾ. ಸುರೇಶ್ ಬಾಬು ಭಾಗವಹಿಸಿದ್ದರು.ಸಭಾ ಕಾರ್ಯಕ್ರಮವನ್ನು ಸಮಾಜದ ಕಾರ್ಯದರ್ಶಿ ಗೋಪಾಲ್ ದಾಸ್ ನಿರೂಪಿಸಿದರು. ಸಿಎ ಗಿರೀಶ್ ನಾಡಿಗ್ ಸ್ವಾಗತಿಸಿದರು. ಭಾಸ್ಕರ್ ಭಟ್ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!