ದಾವಣಗೆರೆ: ನಗರದ ಗುರುಭವನದಲ್ಲಿ ಕಾನಿಪ ಧ್ವನಿ ದಾವಣಗೆರೆ ಜಿಲ್ಲಾ ಹಾಗೂ ತಾಲೂಕು ಘಟಕಗಳಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಹಾಗೂ ಸಾಧಕರ ಸನ್ಮಾನ ಸಮಾರಂಭದ ಉಧ್ಘಾಟನೆಯನ್ನು ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕರು ಹಾಗೂ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷರಾದ ಶ್ಯಾಮನೂರು ಶಿವಶಂಕಪ್ಪ ನವರು ಉಧ್ಘಾಟಿಸಿ, ರಾಜ್ಯದ ನೊಂದಾಯಿತ ಪತ್ರಕರ್ತರ ಪರ ಧ್ವನಿ ಎತ್ತಿ ಸಾಗುತ್ತಿರುವ ಕಾನಿಪ ಧ್ವನಿ ಯಿಂದ ಸದಾ ನಾನು ಇರುತ್ತೇನೆ ಜೊತೆಗೆ ಪತ್ರಕರ್ತರರೆಲ್ಲರೂ ಪತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಿ ವರದಿ ಮಾಡಬೇಕು. ನೊಂದ ಜನತೆಗೆ ಸದಾ ಬೆಳಕು ಮೂಡಿಸುವಂತಹ ಕಾರ್ಯದ ಮುಖಾಂತರ ಸಾಗಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾನಿಪ ಧ್ವನಿ ರಾಜ್ಯ ಉಪಾಧ್ಯಕ್ಷರಾದ ಡಾ.ವಾಸುದೇವ ರವರು ವಹಿಸಿದ್ದರು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಮಾಯಕೊಂಡ ಕ್ಷೇತ್ರದ ಶಾಸಕರಾದ ಮಾನ್ಯ ಬಸವಂತಪ್ಪ ನವರು ಮಾತನಾಡಿ ನಮ್ಮ ಸರ್ಕಾರ ೫ ಗ್ಯಾರೆಂಟಿಗಳನ್ನು ಜನತೆಗೆ ಕೊಟ್ಟಂತ ಬೇಡಿಕೆಗಳ ಈಡೇರಿಸುವಂತ ಕಾರ್ಯದಲ್ಲಿ ಈಗಾಗಲೇ ಸಾಗಿದ್ದು ನುಡಿದಂತೆ ನಡೆಯುತ್ತಿದ್ದೇವೆ.
ಪತ್ರಕರ್ತರುಗಳಿಗೆ ಸದಾ ನಾನು ಬೆನ್ನೆಲುಬಾಗಿರುತ್ತೇನೆ ಜೊತೆಗೆ ಯಾವುದೇ ಕಷ್ಟ ಸುಖಗಳಿಗೆ ನಾನು ಸ್ಪಂಧಿಸುತ್ತೇನೆ ಎಂಬ ನುಡಿಗಳಿಗೆ ಕಾನಿಪ ಧ್ವನಿ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ರವರು ಪ್ರತಿಕ್ರಿಯಿಸಿ, ತಮ್ಮ ಭಾಷಣದಲ್ಲಿ ಈ ಹಿಂದೆ ಇದ್ದ ಬೊಮ್ಮಾಯಿ ಸರ್ಕಾರ ರಾಜ್ಯದ ಪತ್ರಕರ್ತರಿಗೆ ದೊಡ್ಡ ಚೊಂಬನ್ನು ನೀಡಿದ್ದು, ಈಗಿರುವ ಕಾಂಗ್ರೆಸ್ ಸಿದ್ದರಾಮಣ್ಣನ ಸರ್ಕಾರ ಪತ್ರಕರ್ತರ ತುಟಿಗೆ ತುಪ್ಪವನ್ನು ಸವರಿದಂತೆ, ನಿವೃತ್ತ ಸಂಕಷ್ಟದಲ್ಲಿರುವ ಪತ್ರಕರ್ತರ ಮಾಸಾಶನವನ್ನು ಎರಡು ಸಾವಿರ ರೂ.ಗಳಿಗೆ ಹೆಚ್ಚಿಸಿದ್ದು ಬಿಟ್ಟರೆ, ಪ್ರಮುಖ ಬೇಡಿಕೆಗಳಾದ ಪತ್ರಕರ್ತರ ರಕ್ಷಣಾ ಕಾಯ್ದೆ, ಜೀವವಿಮಾ, ಆರ್ಥಿಕ ಭದ್ರತೆಗೆ ಗಮನವನ್ನೇ ಕೊಟ್ಟಿಲ್ಲ.
ದೇಶಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷ ಕಳೆಯುತ್ತಾ ಬಂದಿದ್ದರೂ ಕರ್ನಾಟಕದಲ್ಲಿ ಪತ್ರಕರ್ತರಿಗೆ ಮಾತ್ರ ಸ್ವಾತಂತ್ರ್ಯ ಇಂದಿಗೂ ಸಿಗದಿರುವುದು ವಿಷಾದನೀಯ. ಹಲವಾರು ವರ್ಷಗಳಿಂದ ಬಸ್ ಪಾಸ್ ಗಾಗಿ ಹೋರಾಟ ಮಾಡುತ್ತಾ ಬಂದಿದ್ದರೂ ಪ್ರಯೋಜನವಾಗಿಲ್ಲ. ಮಂಗಳಮುಖಿಯರ ಮೇಲಿರುವ ಕಾಳಜಿ ಪತ್ರಕರ್ತರ ಮೇಲೆ ಸಿದ್ದರಾಮಣ್ಣನ ಸರ್ಕಾರಕ್ಕೆ ಖಂಡಿತವಾಗಿಯೂ ಇಲ್ಲ. ಬೆಂಗಳೂರಿನಲ್ಲಿ ಇರುವಂತ ನಾನ್ ಅಕ್ರಿಡೇಟ್ ಜರ್ನಲಿಸ್ಟ್ ಗಳೆಲ್ಲರಿಗೂ ೬೦೦ ರೂಗಳು ಬಿ.ಎಂ.ಟಿ.ಸಿ. ಗೆ ಪಾವತಿಸಿದರೆ ವರ್ಷಪೂರ್ತಿ ಆರ್.ಎನ್.ಐ. ಹೊಂದಿರುವ ಪತ್ರಕರ್ತರು ಪ್ರಯಾಣಿಸುವ ಅವಕಾಶದ ಆದೇಶವನ್ನು ಸರ್ಕಾರ ಒದಗಿಸಿದೆ.
ಬಸ್ ಪಾಸ್ ಸೌಲಭ್ಯ ನೀಡುವ ಭರವಸೆ : ರಾಜ್ಯದ ಇನ್ನಿತರ ಜಿಲ್ಲೆಗಳಿಗೆ ಈ ಸೌಲಭ್ಯ ಯಾಕೆ ಇಲ್ಲ ಎಂಬ ಪ್ರಶ್ನೆಯ ಜೊತೆಗೆ ಸರ್ಕಾರ ಒಂದು ಜಿಲ್ಲೆಗೆ ಬೆಣ್ಣೆ ಕೆಲ ಜಿಲ್ಲೆಗಳಿಗೆ ಸುಣ್ಣ ಎನ್ನುವಂತ ನೀತಿ ಅನುಸರಿಸಿದ ಕ್ರಮ ಸರಿ ಇಲ್ಲದ ಕಾರಣ ಮಾನ್ಯ ಕಾಂಗ್ರೆಸ್ ಶಾಸಕರಾದ ಬಸವಂತಪ್ಪ ನವರು ಪತ್ರಕರ್ತರಿಗೆ ಸದಾ ಬೆಂಬಲವಾಗಿರುತ್ತೇವೆ ಎಂಬ ನುಡಿಗಳಿಗೆ, ಬಸ್ ಪಾಸ್ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರದ ಪತ್ರಕರ್ತರಿಗೆ ನೀಡಿರುವಂತ ಬಸ್ ಪಾಸ್ ಸೌಲಭ್ಯವನ್ನು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಹಾಗೂ ಸಾರಿಗೆ ಸಚಿವರಾದ ರಾಮಲಿಂಗರೆಡ್ಡಿಯವರ ಗಮನಕ್ಕೆ ತಂದು ಮನವೊಲಿಸಿ ಸೌಲಭ್ಯ ಒದಗಿಸಿದ್ದೇ ಆದರೆ ಮಾನ್ಯ ಶಾಸಕರಾದ ಬಸವಂತಪ್ಪ ರವರಿಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅದ್ದೂರಿ ಸನ್ಮಾನವನ್ನು ಸಮಸ್ತ ಪತ್ರಕರ್ತರ ಸಮಕ್ಷಮದಲ್ಲಿ ಕಾನಿಪ ಧ್ವನಿ ಸಂಘಟನೆ ಮಾಡಲಿದೆ ಎಂಬ ಬಂಗ್ಲೆ ಮಲ್ಲಿಕಾರ್ಜುನ ರವರ ಸವಾಲಿಗೆ ಶಾಸಕರು ಕೊನೆಯಲ್ಲಿ ಒಪ್ಪಿ ಭಗೀರಥ ಪ್ರಯತ್ನದೊಂದಿಗೆ ಬಸ್ ಪಾಸ್ ಸೌಲಭ್ಯವನ್ನು ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರೊಂದಿಗೆ ಮಾತು ಕತೆ ನಡೆಸಿ ಒದಗಿಸಿ ಕೊಡುತ್ತೇನೆ ಎಂದು ಸಮಾರಂಭದಲ್ಲಿ ನೆರೆದಿದ್ದ ಪತ್ರಕರ್ತರಿಗೆ ಮಾತು ನೀಡಿದ್ದು ಸಮಾರಂಭದ ವಿಶೇಷವಾಗಿತ್ತು.
ಸಮಾರಂಭದಲ್ಲಿ ಅತಿಹೆಚ್ಚು ಅಂಕ ಪಡೆದಂತ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಕನ್ನಡ ಪ್ರಭ ಪತ್ರಿಕೆ ವರದಿಗಾರ ನಾಗರಾಜ್ ಬಡದಾಳ್, ಶುಭಾಷಿತ ಪತ್ರಿಕೆ ಸಂಪಾದಕರಾದ ಕೆ.ಜೈಮುನಿ, ಮಂಜು ಮುದ್ರಣ ನಾಗರಾಜ್ ರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಪ್ರಾರ್ಥನೆಯನ್ನು ಅಣ್ಣಪ್ಪ ನವರು ಹಾಡಿನ ಮುಖಾಂತರ ಗಮನ ಸೆಳೆದರು. ಕೊನೆಯಲ್ಲಿ ಜಿಲ್ಲಾಧ್ಯಕ್ಷರಾದ ನಾಗರಾಜ್ ಭಜರಂಗಿ ವಂದನಾರ್ಪಣೆ ಮಾಡಿದರು. ಸುಕನ್ಯ ಕಾರ್ಯಕ್ರಮ ನಿರೂಪಿಸಿದರು.
ಮುಖ್ಯ ಅತಿಥಿಗಳಾಗಿ ಕನ್ನಡ ಪರ ಹೋರಾಟಗಾರ ಟಾರ್ಗೆಟ್ ಅಸ್ಲಂ, ತಂಜೀಮುಲ್ ಮುಸ್ಲಿಂಮೀನ್ ಫಂಡ್ ಅಸೋ ಸಿಯೇಷನ್ ಅಧ್ಯಕ್ಷ ದಾದುಶೇಟ್, ಪಾಲಿಕೆ ಸದಸ್ಯರಾದ ಕೆ. ಚಮನ್ಸಾಬ್, ಎ. ನಾಗರಾಜ್, ಗೌರವ ಸಲಹೆಗಾರ ಅಬ್ದುಲ್ ಮಜೀದ್, ಜಿಲ್ಲಾಧ್ಯಕ್ಷ ಜಿ.ಹೆಚ್. ನಾಗರಾಜ್ ಆವರಗೆರೆ, ಡಿಎಸ್‌ಎಸ್ ಮಲ್ಲೇಶ್, ಗುರುಕುಲ ಶಾಲೆಯ ಮುಖ್ಯಸ್ಥ ಅಬ್ದುಲ್, ಎ.ಎಂ. ಕೊಟ್ರಯ್ಯ, ಸಂತೋಷ್ ದೊಡ್ಡಮನಿ,ಬಿ.ಅಲ್ಲಾಭಕ್ಷಿ ಮತ್ತಿತರರು ಇದ್ದರು.
