ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ
ಹುಬ್ಬಳ್ಳಿ : ಏಳಿ ಎದ್ದೇಳಿ ಜಾಗೃತರಾಗಿ ಗುರಿ ಮುಟ್ಟುವವರೆಗೆ ನಿಲ್ಲದಿರಿ ಎಂದು ಸ್ವಾಮಿ ವಿವೇಕಾನಂದರ ವಾಣಿಯನ್ನು ಹೇಳುತ್ತಲೇ 26ನೇ ರಾಷ್ಟ್ರೀಯ ಯುವ ಜನೋತ್ಸವದಲ್ಲಿ ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ, ಈ ಪುಣ್ಯಭೂಮಿಗೆ ನನ್ನ ನಮಸ್ಕಾರಗಳು, ಸಿದ್ಧಾರೂಢ ಮಠ, ಮೂರು ಸಾವಿರ ಮಠ, ರಾಣಿ ಚೆನ್ನಮ್ಮರ ನಾಡು, ಸಂಗೊಳ್ಳಿ ರಾಯಣ್ಣರ ಬೀಡು ಈ ಪುಣ್ಯನಾಡಿಗೆ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲೇ ಮಾತನಾಡಿದರು.
ರಾಜ್ಯದ ಪರಂಪರೆ, ಸಂಸ್ಕAತಿ, ಜ್ಞಾನಕ್ಕಾಗಿ ಪ್ರಸಿದ್ದಿ, ಇಲ್ಲಿನೆ ಅನೇಕರಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿವೆ. ದೊಡ್ಡ ಸಂಗೀತಕಾರರು ಇಲ್ಲಿ ಇದ್ದರು. ಈ ದೇಶದ ಶಕ್ತಿ ಯುವಕರು ಎಂದು ವಿವೇಕಾನಂದರು ನಂಬಿದ್ದರು. ವಿವೇಕಾನಂದರ ಚರಣಕ್ಕೆ ನಮಿಸುತ್ತೇನೆ ಎನ್ನುತ್ತಾ ನಾಡಿನ ಮಹಾನ್ ಸಂತರು, ಸಾಧಕರನ್ನ ಸ್ಮರಿಸಿದರು.
ಕೆಲ ದಿನಗಳ ಹಿಂದೆ ಕರ್ನಾಟಕದ ಮಣ್ಣಲ್ಲಿ ಮಹಾನ್ ಸಂತ ಸಿದ್ದೇಶ್ವರ ಸ್ವಾಮೀಜಿಯವರ ದೇಹಾಂತ್ಯವಾಗಿದೆ. ಸಿದ್ದೇಶ್ವರ ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಕಿತ್ತೂರು ರಾಣಿ ಚೆನ್ನಮ್ಮ ದೇಶದ ಅಗ್ರ ಸ್ವತಂತ್ರ ಹೋರಾಟಗಾರರಾಗಿದ್ದರು.ಸಂಗೊಳ್ಳಿ ರಾಯಣ್ಣ ಅವರಂತಹ ಮಹಾನ್ ವೀರರ ಹೋರಾಟ ಬ್ರಿಟಿಷರನ್ನು ನಡಗಿಸಿತ್ತು. ಹೀಗೆ ಕರ್ನಾಟಕದ ಭೂಮಿಯು ಮಹಾನ್ ವ್ಯಕ್ತಿಗಳನ್ನು ದೇಶಕ್ಕೆ ಕೊಟ್ಟಿದೆ ಎಂದು ಸ್ಮರಿಸಿದರು.