ಸಂಘಟಿತ ಪ್ರಯತ್ನದಿಂದ ಗುಣಾತ್ಮಕ ಅಭಿವೃದ್ಧಿ- ಕುಲಪತಿ ಪ್ರೊ.ಬಿ.ಡಿ.ಕುಂಬಾರ

ಸಂಘಟಿತ ಪ್ರಯತ್ನದಿಂದ ಗುಣಾತ್ಮಕ ಅಭಿವೃದ್ಧಿ-ಪ್ರೊ.ಕುಂಬಾರ

ದಾವಣಗೆರೆ: ಸಂಘಟಿತ ಪ್ರಯತ್ನ ಮತ್ತು ಪರಸ್ಪರ ಸಹಭಾಗಿತ್ವದಿಂದ ಸೌಹಾರ್ದಯುತವಾಗಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಿರೆ ಗುಣಾತ್ಮಕ ಅಭಿವೃದ್ಧಿ ಸಾಧ್ಯ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಹೇಳಿದರು.

ದಾವಣಗೆರೆ ವಿಶ್ವವಿದ್ಯಾನಿಲಯ ಯೋಜನೆ, ನಿರ್ವಹಣೆ ಮತ್ತು ಮೌಲ್ಯಮಾಪನ ಮಂಡಳಿ (ಪಿಎಂಇ) ಹಾಗೂ ಕರ್ನಾಟಕ ಅಸೋಸಿಯೇಷನ್ ಫಾರ್ ದಿ ಅಡ್ವಾನ್ಸ್ಮೆಂಟ್ ಆಫ್ ಸೈನ್ಸ್ (ಕೆಎಎಎಸ್) ವತಿಯಿಂದ ಹಮ್ಮಿಕೊಂಡಿದ್ದ ಮೂರು ದಿನಗಳ ಸಿಬ್ಬಂದಿಯ ಉತ್ಕೃಷ್ಟತೆಗೆ ಸಂವಾದಾತ್ಮಕ ಚಟುವಟಿಕೆ ಕುರಿತು ಮೂರು ದಿನಗಳ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಸಂಶೋಧನೆ, ಅಧ್ಯಯನ, ಕ್ರಿಯಾತ್ಮಕ ಕಾರ್ಯಚಟುವಟಿಕೆಗಳು ಶಿಕ್ಷಕರಿಗೆ ಅತ್ಯವಶ್ಯ. ಶೈಕ್ಷಣಿಕ ಅಭಿವೃದ್ಧಿಗೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವೆ ಆತ್ಮೀಯವಾದ ಸಂಬAಧ ಮುಖ್ಯ. ಬೋಧನೆ ಜೊತೆಗೆ ಭಾವನಾತ್ಮಕವಾಗಿ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಮುನ್ನಡೆಸಲು ಗಮನ ನೀಡಬೇಕು ಎಂದು ತಿಳಿಸಿದರು.
ಮೂರು ದಿನಗಳ ತರಬೇತಿ ಕಾರ್ಯಾಗಾರವು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ನಡುವೆ ಸೌಹಾರ್ದಯುತ ಸಂಬAಧ ಬೆಳೆಸುವ ಜೊತೆಗೆ ವಿಶ್ವವಿದ್ಯಾನಿಲಯದ ಉನ್ನತಿಗೂ ಸಹಕಾರಿ ಆಗಬೇಕು. ಆಗಲೇ ಕಾರ್ಯಾಗಾರದ ಉದ್ದೇಶವು ಈಡೇರಲಿದೆ ಎಂದರು. ಇದೇ ಸಂದರ್ಭದಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಮತ್ತು ಕಾಸ್ ಅಧ್ಯಕ್ಷ ಪ್ರೊ.ಕೆ.ಸಿದ್ದಪ್ಪ, ಸಂಪನ್ಮೂಲ ವ್ಯಕ್ತಿಗಳಾದ ಪ್ರೊ.ಶಂಕರ್, ಮುಕ್ತಾ ಕಾಗಲ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಪರೀಕ್ಷಾಂಗ ಕುಲಸಚಿವ ಡಾ.ಕೆ.ಶಿವಶಂಕರ ಉಪಸ್ಥಿತರಿದ್ದರು. ಪ್ರಾಧ್ಯಾಪಕರಾದ ಡಾ.ಎಸ್.ಎನ್.ಪ್ರಮೋದ, ಡಾ.ಕೆ.ವೆಂಕಟೇಶ, ಪ್ರೊ.ಜೆ.ಕೆ.ರಾಜು, ಉಪಕುಲಸಚಿವರಾದ ರಂಗಸ್ವಾಮಿ ಮತ್ತು ಶಾಂತಕುಮಾರ ಅವರು ಅಭಿಪ್ರಾಯ ಹಂಚಿಕೊAಡರು. ಪ್ರೊ.ಡಿ.ಜಿ. ಪ್ರಕಾಶ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಡಾ.ಅಶೋಕಕುಮಾರ ಪಾಳೇದ ವಂದಿಸಿದರು.

ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಏರ್ಪಡಿಸಿದ್ದ ಮೂರು ದಿನಗಳ ಸಂವಾದಾತ್ಮಕ ಚಟುವಟಿಕೆ ಕುರಿತ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಪ್ರೊ.ಶಂಕರ ಪ್ರೊ.ಕೆ.ಸಿದ್ದಪ್ಪ, ಶ್ರೀಮತಿ ಸಿದ್ದಪ್ಪ, ಮುಕ್ತಾ ಕಾಗಲ್ ಅವರನ್ನು ಸನ್ಮಾನಿಸಲಾಯಿತು. ಕುಲಸಚಿವ ಡಾ.ಕೆ.ಶಿವಶಂಕರ, ಕುಲಪತಿ ಪ್ರೊ.ಬಿ.ಡಿ.ಕುಂಬಾರ, ಪ್ರೊ.ಡಿ.ಜಿ.ಪ್ರಕಾಶ್ ಇದ್ದಾರೆ.

Leave a Reply

Your email address will not be published. Required fields are marked *

error: Content is protected !!