ರಾಮೇಶ್ವರಂ ಕೆಫೆ ಸ್ಫೋಟದ ಬಾಂಬರ್ ಮತ್ತು ಮಾಸ್ಟರ್ ಮೈಂಡ್ ಪಶ್ಚಿಮ ಬಂಗಾಳದಲ್ಲಿ ಬಂಧಿಸಿದ ಎನ್‍ಐಎ
ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟು ಪಶ್ಚಿಮ ಬಂಗಾಳದಲ್ಲಿ ತಲೆಮರೆಸಿಕೊಂಡಿದ್ದ ಬಾಂಬರ್ ಹಾಗೂ ಮತ್ತೊಬ್ಬ ಪ್ರಮುಖ ಆರೋಪಿಯನ್ನು ರಾಷ್ಟ್ರೀಯ ತನಿಖಾ ದಳ (NIA) ಬಂಧಿಸಿದೆ.
ಬೆಂಗಳೂರಿನಲ್ಲಿ ಕೃತ್ಯ ಎಸಗಿ ಮುಸಾವೀರ್ ಹುಸೇನ್ ತಲೆಮರೆಸಿಕೊಂಡಿದ್ದು, ಕೋಲ್ಕತ್ತಾಕ್ಕೆ ಹಾರಿ ಅಡಗಿದ್ದ. ಕೋಲ್ಕತ್ತಾದ ಪೂರ್ವ ಮಿಡ್ನಾಪುರ ದಿಘಾ ಮನೆಯಲ್ಲಿ ಅಡಗಿದ್ದ ಬಾಂಬರ್ ಮುಸಾವೀರ್ ನನ್ನು ಇದೀಗ ಬಂಧಿಸಲಾಗಿದೆ. ಈತನ ಜೊತೆಗೆ ಅಡಗಿದ್ದ ಅಬ್ದುಲ್ ಮತೀನ್ ನನ್ನು ಕೂಡ ಅರೆಸ್ಟ್ ಮಾಡಲಾಗಿದೆ. ಈತ ಮುಸಾವೀರ್ ಗೆ ಸಂಚು ನಡೆಸಲು ನೆರವು ನೀಡಿದ್ದ.
ಯಾರಿಗೂ ಗುರುತು ಸಿಗದಂತೆ ತಲೆಮರೆಸಿಕೊಂಡಿದ್ದ ಇವರಿಬ್ಬರು ನಕಲಿ ದಾಖಲೆ ನೀಡಿ ಕೋಲ್ಕತ್ತಾದಲ್ಲಿ ವಾಸ್ತವ್ಯ ಹೂಡಿದ್ದರು. ಮನೆಯಲ್ಲಿ ವಾಸ್ತವ್ಯ ಮುನ್ನ ಚೀಪ್ ರೇಟ್ ಲಾಡ್ಜ್ ಗಳಲ್ಲಿ ಉಳಿದುಕೊಳ್ಳುತ್ತಿದ್ದರು. ಖಚಿತ ಮಾಹಿತಿಯನ್ನಾಧರಿಸಿ ಎನ್‍ಐಎ ನಸುಕಿನ ಜಾವ 2.30 ರ ವೇಳೆಗೆ ದಾಳಿ ನಡೆಸಿ ಇಬ್ಬರು ಉಗ್ರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ