ಸರ್ಕಾರಿ (ಚಿಗಟೇರಿ) ಜನರಲ್ ಆಸ್ಪತ್ರೆ ನೌಕರರ ಸಹಕಾರ ಸಂಘ ನಿಯಮಿತ ಸಮಾಪನೆ: ದಾಖಲೆ ಸಲ್ಲಿಸಲು ಸೂಚನೆ

ದಾವಣಗೆರೆ: ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 72 ಹಾಗೂ 73 ರನ್ವಯ, ದಾವಣಗೆರೆಯ ಸರ್ಕಾರಿ (ಚಿಗಟೇರಿ) ಜನರಲ್ ಆಸ್ಪತ್ರೆ ನೌಕರರ ಸಹಕಾರ ಸಂಘ ನಿಯಮಿತ, ಈ ಸಹಕಾರ ಸಂಘವು ಸಮಾಪನೆಗೊಂಡಿದ್ದು, ಸಹಕಾರ ಸಂಘದ ಸಮಾಪನಾಧಿಕಾರಿಯಾಗಿ ಜ್ಯೋತಿ ಮಾಳಾಪುರ, ಮಾರಾಟಾಧಿಕಾರಿ, ಹಿರಿಯ ನಿರೀಕ್ಷಕರು, ಬಾಪೂಜಿ ಕೋ-ಆಪರೇಟಿವ್ ಬ್ಯಾಂಕ್ ಲಿ., ದಾವಣಗೆರೆ, ಇವರು ನೇಮಕಾತಿಗೊಂಡಿದ್ದು, 30 ದಿನಗಳೊಳಗಾಗಿ ಸಂಘಕ್ಕೆ ಸಂಬಂಧಿಸಿದಂತೆ ಯಾವುದಾದರೂ ಹಕ್ಕು, ಜವಾಬ್ದಾರಿಗಳು ಮತ್ತು ಇತರೆ ಯಾವುದೇ ದಾಖಲೆಗಳು ಇದ್ದಲ್ಲಿ ಸಂಬಂಧಪಟ್ಟವರು ದಾಖಲೆಗಳೊಂದಿಗೆ ಸಮಾಪನಾಧಿಕಾರಿಗಳನ್ನು ಭೇಟಿ ಮಾಡುವಂತೆ ಸೂಚನೆ ನೀಡಲಾಗಿದೆ.

ತಪ್ಪಿದಲ್ಲಿ ಯಾವುದೇ ಹಕ್ಕು ಜವಾಬ್ದಾರಿಗಳು ಇಲ್ಲವೆಂದು ತಿಳಿದು ಸಹಕಾರ ಸಂಘಗಳ ನೊಂದಣಿ ರದ್ದು ಮಾಡಲಾಗುವುದು ಹಾಗೂ ಮುಂದೆ ಬರುವ ಯಾವುದೇ ಹೊಣೆಗಾರಿಕೆಗಳಿಗೆ ಸಮಾಪನಾಧಿಕಾರಿಗಳು ಹೊಣೆಗಾರರಾಗಿರುವುದಿಲ್ಲವೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 

Leave a Reply

Your email address will not be published. Required fields are marked *

error: Content is protected !!