ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಸಾತ್ವಿಕ್ ರಕ್ಷಣೆ – ಸತತ 20 ಗಂಟೆಗಳ ಕಾರ್ಯಾಚರಣೆ ಯಶಸ್ವಿ..!

ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದ ತೋಟದಲ್ಲಿದ್ದ 20-22 ಅಡಿ ಆಳದಲ್ಲಿ ಬೋರ್ವೆಲ್ನಲ್ಲಿ ಸಿಲುಕಿದ್ದ 2 ವರ್ಷದ ಸಾತ್ವಿಕ್‌ನನ್ನು ರಕ್ಷಣೆ ಮಾಡುವಲ್ಲಿ ಎನ್‌ಡಿಆರ್‌ಎಫ್ ತಂಡವು ಯಶಸ್ವಿಯಾಗಿದೆ.
ಸತೀಶ್, ಪೂಜಾ ದಂಪತಿಯ ಮಗ ಸಾತ್ವಿಕ್ ಆಟವಾಡುತ್ತಾ ಆಯತಪ್ಪಿ 20 ಅಡಿ ಆಳದ ಕೊಳವೆ ಬಾವಿಗೆ ಬಿದ್ದು ಸಾವು ಬದುಕಿನ ಮಧ್ಯೆ ಹೋರಾಟ ಆರಂಭಿಸಿದ್ದ.
2 ವರ್ಷದ ಕಂದಮ್ಮ ಸಾತ್ವಿಕ್‌ನನ್ನು ಜೀವಂತ ಹೊರತೆಗೆಯುವಲ್ಲಿ ರಕ್ಷಣಾ ಕಾರ್ಯಾಚರಣೆ ತಂಡ ಯಶಸ್ವಿಯಾಗಿದೆ. ಸತತ 20 ಗಂಟೆಗಳ ಕಾರ್ಯಾಚರಣೆಯ ಬಳಿಕ ರಕ್ಷಣಾ ಸಿಬ್ಬಂದಿ ಸಾತ್ವಿಕ್‌ನನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.ಸಾತ್ವಿಕ್‌ನನ್ನು ತಕ್ಷಣವೇ ಆಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಇಂಡಿ ತಾಲೂಕ್ ಲಚ್ಯಾಣ ಗ್ರಾಮದಲ್ಲಿ ಎರಡು ವರ್ಷದ ಮಗು (ಬೋರ್ ವೆಲ್) ಕೊಳವೆ ಬಾವಿಗೆ ಬಿದ್ದ ನಂತರ ಮಗುವನ್ನು ಸುರಕ್ಷಿತವಾಗಿ ಹೊರಗೆ ತರುವಲ್ಲಿ ಎನ್ ಡಿ ಆರ್ ಎಫ್, ಎಸ್ ಡಿ ಆರ್ ಎಫ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ವರ್ಗದವರು ತಮ್ಮ ಜೀವವನ್ನೇ ಪಣಕ್ಕಿಟ್ಟು ಮಗುವನ್ನು ಸುರಕ್ಷಿತವಾಗಿ ಹೊರಗೆ ತಂದಿರುವುದು ನಿಜಕ್ಕೂ ಶ್ಲಾಘನೀಯ.
NDRF, SDRF, ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ವರ್ಗಕ್ಕೆ ನೈಜ ಹೋರಾಟಗಾರರ ವೇದಿಕೆಯು ತುಂಬು ಹೃದಯದ ಕೃತಜ್ಞತೆಯನ್ನು ಸಲ್ಲಿಸುತ್ತದೆ.
ಏನೇ ಆಗಲಿ ಒಳ್ಳೆಯದನ್ನೇ ಮಾಡಿ ಮಾಡುತ್ತಲೇ ಇರಿ
ಹೆಚ್ ಎಂ ವೆಂಕಟೇಶ್
ಹಿರಿಯ ಸಾಮಾಜಿಕ ಹೋರಾಟಗಾರರು
ಕುಣಿಗಲ್ ನರಸಿಂಹಮೂರ್ತಿ
ನೈಜ ಹೋರಾಟಗಾರರ ವೇದಿಕೆ ಪರವಾಗಿ