ಸಿನಿಮಾ

ಸ್ಯಾಂಡಲ್ ವುಡ್ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸಾವು

ಬೆಂಗಳೂರು : ಸ್ಯಾಂಡಲ್ ವುಡ್ ನಟ ವಿಜಯ ರಾಘವೇಂದ್ರ ಅವರ ಪತ್ನಿ  ಥೈಲ್ಯಾಂಡ್ ನಲ್ಲಿ  ಸ್ಪಂದನ ರವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಸ್ಯಾಂಡಲ್ ವುಡ್  ಚಿನ್ನಾರಿ ಮುತ್ತಾ ನಟ ವಿಜಯ ರಾಘವೇಂದ್ರ ಅವರ ಪತ್ನಿ ವಿದೇಶ ಪ್ರವಾಸಕ್ಕೆಂದು ತೆರಳಿದ್ದ ವೇಳೆ ಅವರಿಗೆ ಹೃದಯಾಘಾತ ಸಂಭವಿಸಿದೆ. ಎಂದು ವರದಿಯಾಗಿದ್ದು, ಥೈಲಾಂಡ್ ನಲ್ಲಿ ಸ್ಪಂದನಾ ಅವರು ಪ್ರವಾಸಕ್ಕೆ ಹೋದ ವೇಳೆ  ಲೋ ಬಿ ಪಿ ಆಗಿ ಹೃದಯಾಘಾತವಾಗಿದೆ. ಈ ಮಾಹಿತಿ ತಿಳಿದ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೆ ಅವರು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.

ಮಾಜಿ ಪೋಲಿಸ್ ಅಧಿಕಾರಿಯಾದ ಬಿ.ಕೆ.ಶಿವರಾಂ ಅವರ ಪುತ್ರಿ ಸ್ಪಂದನ ಅವರು ನಟ ವಿಜಯ ರಾಘವೇಂದ್ರ ಅವರನ್ನು 2007 ರಲ್ಲಿ ಪ್ರೇಮ ವಿವಾಹವಾಗಿದ್ದರು. ಸ್ಪಂದನಾ ಅವರು 2016 ರಲ್ಲಿ ವಿ.ರವಿಚಂದ್ರನ್ ಜೊತೆಗೆ ಅಪೂರ್ವ ಚಿತ್ರದಲ್ಲಿ ನಟಿಸಿದ್ದರು. ಕುಟುಂಬದವರು ಇಂದು ಥೈಲ್ಯಾಂಡ್ ಗೆ ತೆರಳಲಿದ್ದು ನಾಳೆ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲಾಗುತ್ತದೆ ಎಂದು ತಿಳಿದು ಬಂದಿದೆ.

Click to comment

Leave a Reply

Your email address will not be published. Required fields are marked *

Most Popular

To Top