ಪ್ರೇಕ್ಷಕರನ್ನು ಮಂತ್ರಮುಗ್ದಗೊಳಿಸಿದ ಸವಿತಕ್ಕಾರ ಉಧೋ ಉಧೋ ಎಲ್ಲವ್ವ : ಡಾ. ಮಂಜಮ್ಮ ಜೀವನಗಾಥೆಯ ಏಕಪಾತ್ರಾಭಿನಯ

ಪ್ರೇಕ್ಷಕರನ್ನು ಮಂತ್ರಮುಗ್ದಗೊಳಿಸಿದ ಸವಿತಕ್ಕಾರ ಉಧೋ ಉಧೋ ಎಲ್ಲವ್ವ : ಡಾ. ಮಂಜಮ್ಮ ಜೀವನಗಾಥೆಯ ಏಕಪಾತ್ರಾಭಿನಯ

ಹುಬ್ಬಳ್ಳಿ : ನಶಿಸುತ್ತಿರುವ ಭಾರತೀಯ ಸಂಸ್ಕೃತಿ ಮತ್ತು ಜಾನಪದ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಹುಬ್ಬಳ್ಳಿಯ ಪ್ರೇಮ್‍ಜಿ ಫೌಂಡೇಶನ್ ಮಹತ್ವದ ಪಾತ್ರನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು. ಶಿರಹಟ್ಟಿಯ ಭಾವೈಕ್ಯತೆ ಸಂಸ್ಥಾನಪೀಠದ ಜಗದ್ಗುರು ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿಗಳು ಬಣ್ಣಿಸಿದರು.

ಇಲ್ಲಿನ ದೇಶಪಾಂಡೆ ನಗರದಲ್ಲಿರುವ ಸವಾಯಿ ಗಂಧರ್ವ ಸಭಾಂಗಣದಲ್ಲಿ ಹುಬ್ಬಳ್ಳಿಯ ಪ್ರೇಮ್‍ಜಿ ಫೌಂಡೇಶನ್‍ನಿಂದ ಆಷಾಡ ಮಾಸದ ಕೊನೆಯ ಶುಕ್ರವಾರದ ನಿಮಿತ್ತ ಹಮ್ಮಿಕೊಂಡಿದ್ದ ಮಹಿಳೆಯರಿಗೆ ಉಡಿ ತುಂಬುವುದರ ಜೊತೆಗೆ  ಉಧೋ ಉಧೋ ಎಲ್ಲವ್ವ ದೇವಿ ಕುರಿತ ಜನಪದ ಹಾಡುಗಳು ಮತ್ತು ಪದ್ಮಶ್ರೀ ಪುರಸ್ಕೃತೆ ಡಾ. ಮಂಜಮ್ಮ ಜೋಗತಿ ಕುರಿತ ಏಕ ವ್ಯಕ್ತಿ ರಂಗ ಪ್ರಯೋಗ ಕಾರ್ಯಕ್ರಮದ ಸಾನಿಧ್ಯವಹಿಸಿ ,ಚಾಲನೆ ನೀಡಿ ಅವರು ಮಾತನಾಡಿದರು. ಮಾತೃ ಹೃದಯ ಇದ್ದವರಿಂದ ಮಾತ್ರ ಇಂತಹ ಕಾರ್ಯಕ್ರಮ ಆಯೋಜಿಸಲು ಸಾಧ್ಯ ,  ಮನಸ್ಸು ಚಂಚಲವಾದರೆ ಏನನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ. ಏಕನಿಷ್ಠೆ ಮನಸ್ಸಿನಿಂದ ಮಾತ್ರ ಯಾವುದನ್ನಾದರೂ ಸಾಧಿಸಬಹುದು. ಪ್ರತಿಯೊಂದು ಕ್ಷೇತ್ರದಲ್ಲಿ ಸಾಧನೆ ಮಾಡಿದವರ ಬಗ್ಗೆ ಗಮನಿಸಿದಾಗ ಏಕನಿಷ್ಠೆ ಮನಸ್ಸು ಇದಕ್ಕೆಲ್ಲ ಕಾರಣವಾಗಿರುತ್ತದೆ” ಎಂದರು .

ಪದ್ಮಶ್ರೀ ಪುರಸ್ಕೃತೆ ,  ಕರ್ನಾಟಕ ಜಾನಪದ ಅಕಾಡೆಮಿಯ ಮಾಜಿ ಅಧ್ಯಕ್ಷೆ ಡಾ. ಮಂಜಮ್ಮ ಜೋಗತಿ ಮಾತನಾಡಿ , ಮಕ್ಕಳ ಉಜ್ವಲ ಭವಿಷ್ಯ ಹಾಗೂ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರಿ ಕನ್ನಡ ಶಾಲೆಗೆ ಮಕ್ಕಳನ್ನು ಸೇರಿಸುವ ಮೂಲಕ ನಮ್ಮ ಭಾಷೆ ಬಗ್ಗೆ ಹೆಮ್ಮೆ ಮೂಡಿಸುವ ಕೆಲಸ ಮಾಡಬೇಕಾದ ಜವಾಬ್ದಾರಿಯನ್ನು ಕನ್ನಡಿಗರು ನಿಭಾಯಿಸಬೇಕು , ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ತಮ್ಮ ಮಾತೃ ಭಾಷೆ ಬಗ್ಗೆ ಅತೀವ ಅಭಿಮಾನ , ಹೆಮ್ಮೆ ಹೊಂದಿದ್ದಾರೆ. ಆದರೆ, ಇಲ್ಲಿನ ಕನ್ನಡಿಗರೇ ಕನ್ನಡದ ಬಗ್ಗೆ ಕೀಳರಿಮೆ ಹೊಂದಿದ್ದಾರೆ. ಮಾತೃ ಭಾಷೆಯನ್ನು ಗೌರವಿಸಬೇಕು, ಪ್ರೀತಿಸಬೇಕು. ಮಕ್ಕಳನ್ನು ಕನ್ನಡ ಶಾಲೆಯಲ್ಲಿ ಓದಿಸಬೇಕು. ಸಂಸ್ಕಾರ, ಸಂಸ್ಕೃತಿ ಕನ್ನಡ ಶಾಲೆಗಳಿಂದ ಬರಲು ಸಾಧ್ಯ ಎಂದರು.

ಪ್ರೇಕ್ಷಕರನ್ನು ಮಂತ್ರಮುಗ್ದಗೊಳಿಸಿದ ಸವಿತಕ್ಕಾರ ಉಧೋ ಉಧೋ ಎಲ್ಲವ್ವ : ಡಾ. ಮಂಜಮ್ಮ ಜೀವನಗಾಥೆಯ ಏಕಪಾತ್ರಾಭಿನಯ

ವ್ಯವಹಾರಿಕವಾಗಿ ಆಂಗ್ಲಭಾಷೆ ಮಾತ್ರ ಬಳಸಬೇಕು. ಮನೆಯಲ್ಲಿ ಕನ್ನಡ ಮಾತನಾಡಬೇಕು. ಕನ್ನಡ ಭಾಷೆಗೆ ಆದ್ಯತೆ ನೀಡಬೇಕು. ಸಮಾಜದಲ್ಲಿ ಎಲ್ಲರೂ ಸಮಾನರು. ನಾವು ಮಾಡುವ ಕರ್ತವ್ಯದಲ್ಲಿ ದೇವರಿದ್ದಾನೆ. ನಾವು ಮಾಡುವ ಕರ್ತವ್ಯವನ್ನು ಆರಾಧಿಸಬೇಕು. ಮಕ್ಕಳಲ್ಲಿ 7 ಸಮಯ ಪ್ರಜ್ಞೆ ಬೆಳೆಸಿ ಎಂದು ಕಿವಿ ಮಾತು ಹೇಳಿದರು.

ಮುಖ್ಯಅತಿಥಿಯಾಗಿ ಪಾಲ್ಗೊಂಡಿದ್ದ ಸ್ವರ್ಣಾ ಸಮೂಹ ಸಂಸ್ಥೆಯ ಮುಖ್ಯಸ್ಥ ಡಾ. ವಿ.ಎಸ್.ವಿ ಪ್ರಸಾದ ಮಾತನಾಡಿ, ಕಲೆಯಲ್ಲಿ ನಮ್ಮ ಸಂಸ್ಕೃತಿ ಅಡಗಿದೆ. ಜನಪದ ಹಾಡುಗಳಲ್ಲಿ ಇರುವ ಒಳತಿರುಳನ್ನು ಅರಿತುಕೊಂಡರೆ ನಮ್ಮ ಪೂರ್ವದ ವಿಷಯ ತಿಳಿಯುತ್ತದೆ. ಜಾನಪದ ಕಲೆ, ಹಾಡುಗಳಿಗೆ ಮತ್ತೊಂದು ಸಾಟಿಯಾಗಲಾರದು. ಆದರೆ ಅವುಗಳನ್ನು ಆಲಿಸುವವರ ಕೊರತೆಯಿಂದ ಮರೆಯಾಗುತ್ತಿವೆಯೇ ಹೊರತು ತಮ್ಮ ಅಸ್ತಿತ್ವ ಕಳೆದುಕೊಂಡಿಲ್ಲ , ಪ್ರೇಮ್‍ಜಿ ಫೌಂಡೇಶನ್ ಸಂಸ್ಥಾಪಕರಾದ ಗುರುರಾಜ ಹೂಗಾರ ಅವರು ಹುಬ್ಬಳ್ಳಿ-ಧಾರವಾಡ ಅವಳಿನಗರದ ಜನತೆಗೆ ಇಂತಹ ಒಳ್ಳೊಳ್ಳೆ ಕಾರ್ಯಕ್ರಮಗಳನ್ನು ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ಜಾನಪದ ಕಲಾವಿದೆ ಸವಿತಕ್ಕಾ  , ಡಾ. ಮಂಜಮ್ಮ ಜೋಗತಿ , ಹು-ಧಾ ಮಹಾನಗರ ಪಾಲಿಕೆ ಮಹಾಪೌರ ವೀಣಾ ಬರದ್ವಾಡ , ಸುಮಧುರ ಫೌಂಡೇಶನ್ ಅಧ್ಯಕ್ಷೆ ಪ್ರೇಮಾ ಹೂಗಾರ , ಡಾ. ವೀಣಾ ಕಾರಟಗಿ , ಭಾನುಮತಿ ಸೇರಿದಂತೆ ಕಾರ್ಯಕ್ರಮಕ್ಕೆ ಆಗಮಿಸಿದಂತ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕಲಾವಿದೆ ಸವಿತಕ್ಕ ಅವರ ಉಧೋ ಉಧೋ ಎಲ್ಲವ್ವ ದೇವಿಯ ಕುರಿತ ಜಾನಪದ ಹಾಡುಗಳ  ಹಬ್ಬ ಮತ್ತು ಪದ್ಮಶ್ರೀ ಪುರಸ್ಕøತ ಮಂಜಮ್ಮ ಜೋಗತಿ ಅವರ ಜೀವನಾಧರಿತ ಖ್ಯಾತ ಕಲಾವಿದ ಅರುಣ ಕುಮಾರ ಅಭಿನಯದ ‘ಮಾತಾ’ ಏಕವ್ಯಕ್ತಿ ರಂಗಪ್ರಯೋಗ ಪ್ರೇಕ್ಷಕರನ್ನು ಮಂತ್ರ ಮುಗ್ದರಾಗುವಂತೆ ಮಾಡಿತು.

ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಲೋಚನೇಶ ಹೂಗಾರ  ಅಧ್ಯಕ್ಷತೆ ವಹಿಸಿದ್ದರು. ಶ್ರೀ ಬಸವೇಶ್ವರ ರೂರಲ್ ಎಜ್ಯುಕೇಶನ್ ಆ್ಯಂಡ್ ಡೆವಲಪಮೆಂಟ್ ಟ್ರಸ್ಟ್ ಮುಖ್ಯಸ್ಥ ಡಾ. ಶರಣಪ್ಪ ಕೊಟಗಿ , ಮೇಯರ್ ವೀಣಾ ಬರದ್ವಾಡ , ಪ್ರೇಮಜಿ ಫೌಂಡೇಶನ್ ಸಂಸ್ಥಾಪಕ ಗುರುರಾಜ ಹೂಗಾರ, ಸರ್ವಧರ್ಮಗಳ ಸಮಾಜ ಸೇವಕ ರಮೇಶ ಮಹಾದೇವಪ್ಪನವರ, ಲಿಂಗರಾಜ ಪಾಟೀಲ,  ಡಾ. ರಾಮಚಂದ್ರ ಕಾರಟಗಿ, ಡಾ.ವಿಜಯ ಮಹಾಂತೇಶ ಪೂಜಾರ, ಈಶ್ವರಿ ಫೌಂಡೇಶನ್ ಸಂಸ್ಥಾಪಕ ಸಂತೋಷ ವೆರ್ಣೇಕರ, ಪೊಲೀಸ್ ಅಧಿಕಾರಿಗಳಾದ ಜೆ.ಎಂ ಖಾಲಿಮಿರ್ಚಿ,  ಮಲ್ಲಪ್ಪ ಹೂಗಾರ , ಖ್ಯಾತ ಜಾನಪದ ಗಾಯಕಿ ಸವಿತಕ್ಕಾ, ವಿ. ಎಂ.ಹಿರೇಮಠ, ಪ್ರೇಮಾ ಹೂಗಾರ,  ಆನಂದ ಗೋನಾಳ, ಎಚ್.ಎಸ್.ಕಿರಣ, ಡಾ. ರಾಮು ಮೂಲಗಿ , ಗದಿಗೆಯ್ಯ ಹಿರೇಮಠ ಸೇರಿದಂತೆ ಮತ್ತಿತರ ಗಣ್ಯರು ಈ ಸಂದರ್ಭದಲ್ಲಿದ್ದರು.

 

Leave a Reply

Your email address will not be published. Required fields are marked *

error: Content is protected !!