school education department: ಆಯುಕ್ತರ ಕಚೇರಿಗೆ ನೂತನ ವೆಬ್ಸೈಟ್ ಪ್ರಾರಂಭ

ಬೆಂಗಳೂರು, ಅ.12: ಶಾಲಾ ಶಿಕ್ಷಣ ಇಲಾಖೆಯ (School Education) ಆಯುಕ್ತರ ಕಚೇರಿಯ ಹಳೆಯ ವೆಬ್’ಸೈಟ್ ಅನ್ನು ಶಾಂತಿನಗರದ ಇ-ಆಡಳಿತ ಕೇಂದ್ರದ ವೆಬ್ ಪೋರ್ಟಲ್ ವಿಭಾಗದ ಯೋಜನಾ ನಿರ್ದೇಶಕರ ಸಹಯೋಗದಲ್ಲಿ ನೂತನವಾಗಿ ಅಭಿವೃದ್ಧಿಪಡಿಸಲಾಗಿದೆ.

ಶಿಕ್ಷಣ ಆಯುಕ್ತರ ಕಚೇರಿಯ ಹಳೆಯ ವೆಬ್‌ಸೈಟ್ (URL-https://www.schooleducation.kar.nic.in/) ನಿಂದ ಹೊಸ ವೆಬ್‌ಸೈಟ್ (URL- https://schooleducation.karnataka.gov.in) ಗೆ ಬದಲಿಸಲಾಗಿದ್ದು, ಹಳೆಯ ವೆಬ್’ಸೈಟ್ ಅಲ್ಲಿಂದ 2005 ರಿಂದ ಈವರೆಗಿನ ದತ್ತಾಂಶವನ್ನು ಈಗಾಗಲೇ ಮೈಗ್ರೇಟ್‌ ಮಾಡಲಾಗಿದೆ.

application; ವಿವಿಧ ಅಭಿವೃದ್ಧಿ ನಿಗಮಗಳಿಂದ ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನ

ನೂತನ ವೆಬ್‌ಸೈಟ್ ಅನ್ನು ಅಕ್ಟೋಬರ್ 11 ರಿಂದ ಅಧಿಕೃತವಾಗಿ ಸಾರ್ವಜನಿಕರು ಹಾಗೂ ಶಿಕ್ಷಣ ಇಲಾಖೆಯ ಅಧೀನ ಕಚೇರಿಗಳು ಮುಕ್ತವಾಗಿ ಬಳಸಬಹುದಾಗಿದೆ. ಇನ್ನು ಮುಂದೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯ ವೆಬ್’ಸೈಟ್ Domain Name – https://schooleducation.karnataka.gov.in ಆಗಿದ್ದು, ಈ ಮೂಲಕವೇ ಇಲಾಖೆಗೆ ಸಂಬಂಧಿಸಿದ ಮಾಹಿತಿ, ಆದೇಶ, ಸುತ್ತೋಲೆಗಳನ್ನು ಪ್ರಕಟಿಸಲಾಗುವುದು.

ಹಾಗೂ ಇಲಾಖೆಯ ಎಲ್ಲಾ ಪ್ರಮುಖ ಹಾಗೂ ಅಧೀನ ಕಚೇರಿಗಳು ಕಡ್ಡಾಯವಾಗಿ ಹೊಸದಾಗಿ ವಿನ್ಯಾಸಗೊಳಿಸಿರುವ ಈ ವೆಬ್’ಸೈಟ್ ಅನ್ನು ಕಡ್ಡಾಯವಾಗಿ ಬಳಸಬೇಕು ಮತ್ತು ಕಚೇರಿಯ ಸೂಚನಾ ಫಲಕದಲ್ಲಿ ಹೊಸ ವೆಬ್’ಸೈಟ್ ನ ವಿಳಾಸವನ್ನು ಪ್ರಕಟಿಸುವುದರ ಮೂಲಕ ಸಾರ್ವಜನಿಕರ ಗಮನಕ್ಕೆ ತರಬೇಕೆಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತರಾದ ಬಿ.ಬಿ.ಕಾವೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!