ಬಿ ಇಡ್ ಹಾಗೂ ಪ್ಯಾರಮೆಡಿಕಲ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಹಾಸ್ಟೆಲ್ ನೀಡುವಂತೆ ಆಗ್ರಹಿಸಿ ಎಸ್ ಎಫ್ ಐ ಪ್ರತಿಭಟನೆ

ದಾವಣಗೆರೆ: ಇಂದು ಜಗಳೂರು ಪಟ್ಟಣದಲ್ಲಿ ಭಾರತ ವಿದ್ಯಾರ್ಥಿ ಫೇಡರೆಷನ್ ಎಸ್ ಎಫ್ ಐ ತಾಲೊಕು ಸಮಿತಿ ನೇತೃತ್ವದಲ್ಲಿ ಸಿದ್ದಾರ್ಥ ಬಿ ಇಡ್ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ಮಾಡಲಾಯಿತು ಈಗಾಗಲೆ ಕರೋನ ಮಹಾಮಾರಿ ಇಡಿ ದೇಶವನ್ನೆ ತತ್ತರಗೊಳಿಸಿದೆ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳು ಸಂಪೂರ್ಣ ಶಿಕ್ಷಣದಿಂದ ವಂಚಿತಗೊಳ್ಳುವಂತಹ ಸಂದರ್ಭ ನಿರ್ಮಾಣವಾಗುತ್ತಿರುವ ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಬೇಕಾದ ಸರ್ಕಾರಗಳು ವಿದ್ಯಾರ್ಥಿ ವಿರೋಧಿ ನೀತಿಯನ್ನು ಅನುಸರಿಸುತ್ತಿರುವುದು ದುರಂತ ಬಿ.ಇಡಿ ಹಾಗೂ ಪ್ಯಾರಾ ಮೆಡಿಕಲ್ ಗೆ ಸರ್ಕಾರಿ ಖೋಟದಲ್ಲಿ ಕಾಲೇಜಿನಲ್ಲಿ ಅವಕಾಶಸಿಗದ ವಿದ್ಯಾರ್ಥಿಗಳು ಖಾಸಗಿ ಖೋಟದಲ್ಲಿ ಕಾಲೇಜಿಗೆ ಪ್ರವೇಶವನ್ನ ಪಡೆದಿರುವ ವಿದ್ಯಾರ್ಥಿಗಳಿಗೆ ಸರ್ಕಾರ ವಿದ್ಯಾರ್ಥಿ ವೇತನವನ್ನು ನಿಲ್ಲಿಸಿರುವುದು ದುರಂತ ಖಾಸಗಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬರುವುದಿಲ್ಲ ಎಂಬುವ ನೆಪವನ್ನ ಇಟ್ಟುಕೊಂಡು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯವನ್ನ ಕೊಡುತ್ತಿಲ್ಲಾ ದೂರದೂರಿನಿಂದ ಪಟ್ಟಣಕ್ಕೆ ಬಂದು ಶಿಕ್ಷಣ ಕಲಿಯುವ ವಿದ್ಯಾರ್ಥಿಗಳಿಗೆ ತುಂಬ ತೊಂದರೆ ಆಗುತ್ತಿದೆ ಸರ್ಕಾರ ಈ ಕೂಡಲೆ ತನ್ನ ನೀತಿಯನ್ನು ಕೈಬಿಟ್ಟು ವಿದ್ಯಾರ್ಥಿಗಳ ಹಿತವನ್ನು ಕಾಪಾಡಬೇಕು ಇಲ್ಲಾವಾದರೆ ಕರೋನ ಇದ್ದರು ಸಹ ರಾಜ್ಯವ್ಯಾಪಿ ವೃತ್ತಿಪರ ಶಿಕ್ಷಣದ ವಿದ್ಯಾರ್ಥಿಗಳು ಬೃಹತ್ ಹೋರಾಟ ಮಾಡಲಾಗುವುದು ಎಂದು ಭಾರತ ವಿದ್ಯಾರ್ಥಿ ಪೆಡೆರೇಷನ್ ಎಸ್ ಎಪ್ ಐ ಸಂಘಟನೆ ಎಚ್ಚರಿಕೆಯನ್ನ ನೀಡುತ್ತದೆ ಎಂದು ಅನಂತರಾಜ ರವರು

ಮಹಾಲಿಂಗಪ್ಪ ಜೆ ಎಚ್ ಎಮ್ ಹೊಳೆ ಮಾತನಾಡಿ ಪ್ರಸುತ್ತ ಕೊರನ ಮಾರಕ ರೋಗ ಇಡಿ ವಿಶ್ವವನ್ನೆ ತಲ್ಲಣಗೊಳಿಸಿದೆ ರಾಜ್ಯದ ಜನರು ಆರ್ಥಿಕವಾಗಿ ತುಂಬ ಕೆಳಮಟ್ಟಕ್ಕೆ ಕುಸಿದಿದೆ ಇಂತಹ ಸಂದರ್ಭದಲ್ಲಿ ರಾಜ್ಯದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ ಉನ್ನತ ಶಿಕ್ಷಣಕ್ಕೆ ಪ್ರವೇಶವನ್ನ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ತುಂಬ ಇಳಿಮುಖವಾಗುತ್ತಿದೆ ಇದಕ್ಕೆ ಮುಖ್ಯ ಕಾರಣ ಸರ್ಕಾರಗಳ ವಿದ್ಯಾರ್ಥಿ ವಿರೋದಿ ನೀತಿಗಳು ಆದರಿಂದ ಸರ್ಕಾರಗಳು ಎಚ್ಚೆತ್ತುಕೊಂಡು ವಿದ್ಯಾರ್ಥಿ ವೇತನವನ್ನ ಪ್ರಾರಂಭ ಮಾಡಬೇಕು ಮತ್ತು ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯವನ್ನ ಒದಗಿಸಬೇಕು ಎಂದು ಒತ್ತಾಯಿಸಿದರು

ಈ ಸಂದರ್ಭದಲ್ಲಿ ಇಫ್ತಿಕರ್ ಅಹಮದ್ ಎಸ್ ಎಫ್ ಐ ಸಹ ಸಂಚಾಲಕರು ನಾಗರಾಜ ಎಸ್ ಪಿ ಕಾಟಲಿಂಗಪ್ಪ ವಿದ್ಯಾರ್ಥಿಗಳಾದ ಸಂಮ್ರಿನ್. ನಯನ .ಮಾನಸ. ಸುಪ್ರಿಯಾ ಜ್ಯೊತಿಕುಮಾರ್. ಲಿಂಗರಾಜಪ್ಪ ಇತ್ಯಾದಿ ಹಾಜರಿದ್ದರು

Leave a Reply

Your email address will not be published. Required fields are marked *

error: Content is protected !!