ಪಾದಯಾತ್ರೆಯಲ್ಲಿ ಸುಸ್ತಾಗಿ ವಾಪಾಸಾದ ಸಿದ್ದರಾಮಯ್ಯ?
ರಾಮನಗರ: ವೀಕೆಂಡ್ ಕರ್ಫ್ಯೂ ನಡುವೆಯೂ ಮೇಕೆದಾಟು ಯೋಜನೆಗಾಗಿ ನಮ್ಮ ನೀರು, ನಮ್ಮ ಹಕ್ಕು ಎನ್ನುವ ಘೋಷಣೆ ಕೂಗುತ್ತಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಮ್ಮಿಕೊಂಡಿರುವ ಪಾದಯಾತ್ರೆಯಲ್ಲಿ ನಾಲ್ಕು ಕಿಲೋ ಮೀಟರ್ ನಡೆಯುತ್ತಲೇ 73 ವರ್ಷದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸುಸ್ತಾಗಿದ್ದಾರೆ.
ಕನಕಪುರ ತಾಲ್ಲೂಕಿನ ಕಾವೇರಿ ತಟ, ಸಂಗಮದಲ್ಲಿ ಚಾಲನೆ ದೊರೆತ ಪಾದಯಾತ್ರೆಯಲ್ಲಿ ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಸುಮಾರು ನಾಲ್ಕು ಕಿಲೋ ಮೀಟರ್ ದೂರ ಕ್ರಮಿಸಿದ್ದರು. ಆದರೆ ವಯೋಸಹಜದಿಂದಾಗಿ ಸಿದ್ದರಾಮಯ್ಯನವರು ಇಷ್ಟೊಂದು ನಡೆದು ಸುಸ್ತಾಗಿದ್ದಾರೆ.ಆದ್ದರಿಂದ ಅವರು ಕಾರೊಂದರಲ್ಲಿ ವಾಪಸಾಗಿರುವುದಾಗಿ ವರದಿಯಾಗಿದೆ.