ತಾಯಿ ಆಯ್ಕೆಗೆ ಮಗನ ಮತ ಬೇಟೆ

ದಾವಣಗೆರೆ : ಮುಂಜಾನೆಯ ಸಂತೆಯಲ್ಲಿ ಹೂವು ಹಣ್ಣು ಖರೀದಿಸಿ ದಾವಣಗೆರೆ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಹಾಗೂ ತಮ್ಮ ತಾಯಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಪರವಾಗಿ ಯುವ ನಾಯಕ ಸಮರ್ಥ್ ಶಾಮನೂರು ಮತ ಬೇಟೆ.


.
ಹೂವು ಹಣ್ಣು ಮಾರಾಟ ಮಾಡಲು ಪಕ್ಕದ ಹಳ್ಳಿಗಳಿಂದ ಬಂದಿದ್ದ ರೈತರ ವ್ಯಾಪಾರ ವಹಿವಾಟು ಹಾಗೂ ಪ್ರಯಾಣದ ಬಗ್ಗೆ ಸಂಭಾಷಣೆ ನಡೆಸಿ ಹಬ್ಬದ ಶುಭಾಶಯಗಳನ್ನು ತಿಳಿಸುತ್ತಾ, ಹೂವು ಹಣ್ಣುಗಳನ್ನು ಖರೀದಿಸಿ ತಮ್ಮ ತಾಯಿಯ ಪರ ಮತಯಾಚನೆ ಮಾಡಿದರು.


.
ಇದೇ ಸಂದರ್ಭದಲ್ಲಿ ಸಾರ್ವಜನಿಕರನ್ನು ಮಾತನಾಡಿಸಿ ಶುಭಕೋರಿ, ಲೋಕಸಭಾ ಚುನಾವಣೆಯಲ್ಲಿ ಅಭಿವೃದ್ಧಿಯ ಕಾರ್ಯಗಳಿಗೆ ಹಾಗೂ ಡಾ ಪ್ರಭಾ ಮಲ್ಲಿಕಾರ್ಜುನ್ ರವರ ವ್ಯಕ್ತಿತ್ವಕ್ಕೆ ಮತ ನೀಡಿ ಎಂದು ವಿನಂತಿಸಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!