ಹೆಗಲೇರಿ ಕುಂತ ರಾಮನ ಬಂಟ ಹನುಮ – ವಾನರ ಸೈನ್ಯದ ಜೊತೆ ಕಾಲ ಕಳೆದ ಶ್ರೀರಾಮುಲು

ಕೊಪ್ಪಳ: ಕೊಪ್ಪಳದ ಪಂಪ ಸರೋವರಕ್ಕೆ ಭೇಟಿ ನೀಡಿದ ವೇಳೆ ಸಚಿವ ಶ್ರೀರಾಮುಲು ಅವರು ವಾನರ ಸೈನ್ಯಕ್ಕೆ ಬಾಳೆಹಣ್ಣು ನೀಡುವ ಜತೆಗೆ ಅವುಗಳ ಜತೆಗೆ ಸ್ವಲ್ಪ ಹೊತ್ತು ವ್ಯಯಿಸಿ ಸಂಭ್ರಮಿಸಿದ್ದಾರೆ.

ಈ ಬಗ್ಗೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಶ್ರೀರಾಮುಲು, ವಾನರ ಸೈನ್ಯದೊಂದಿಗೆ ಕೆಲ ಸಮಯ ಕಳೆದಿರುವುದು ತಮ್ಮ ಜೀವನದ ಅವಿಸ್ಮರಣೀಯ ಕ್ಷಣವಾಗಿದ್ದು, ಅವುಗಳು ಹೆಗಲ ಮೇಲೆ ಕುಳಿತು ಆಶೀರ್ವಾದ ಮಾಡಿರುವುದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಬರೆದುಕೊಂಡು ಸಂತಸ ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!