ss mallikarjun; ಎಸ್ ಎಸ್ ಮಲ್ಲಿಕಾರ್ಜುನ ರೇಣುಕಾಚಾರ್ಯ ಬೇಟಿ ವಿಚಾರ; ಸಚಿವರು ಹೇಳಿದ್ದೇನು.?
ದಾವಣಗೆರೆ : ಮಾಜಿ ಶಾಸಕ ರೇಣುಕಾಚಾರ್ಯ ಕೇವಲ ವಿಶ್ ಮಾಡೋದಕ್ಕೆ ಮಾತ್ರ ಬಂದಿದ್ದು, ss mallikarjun ಅದು ಬಿಟ್ಟರೇ ಅವರು ಕಾಂಗ್ರೆಸ್‌ಗೆ ಸೇರುತ್ತೇನೆ ಎಂದು ನನ್ನ ಬಳಿ ಬಂದಿರಲಿಲ್ಲ, ನಾವು ಕೂಡ ಅವರ ಬಳಿ ಕಾಂಗ್ರೆಸ್ ಸೇರುವ ಬಗ್ಗೆ ಚರ್ಚೆ ಮಾಡಿಲ್ಲ ಎಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ವರದಿಗಾರರ ಕೂಟದಿಂದ ಏರ್ಪಡಿಸಿದ್ದ ಮಾಧ್ಯಮ ದಿನಾಚರಣೆ, ಮಾಧ್ಯಮ ಪ್ರಶಸ್ತಿ ಪ್ರಧಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಾಜಿ ಶಾಸಕ ರೇಣುಕಾಚಾರ್ಯ ಕೇವಲ ಔಪಾಚಾರಿಕವಾಗಿ ಭೇಟಿ ನೀಡಿದ್ದರು, ನಮ್ಮ ತಂದೆ ಶಾಮನೂರು ಶಿವಶಂಕರಪ್ಪರನ್ನು ಕೂಡ ಭೇಟಿಯಾಗಿದ್ದರು, ಅವರಿಗೂ ವಿಶ್ ಮಾಡಿದರು, ನಂತರ ಅವರಿಗೆ ಟೀ ಕುಡ್ಸಿ ಸ್ವಲ್ಪ ಹೊತ್ತು ಬಳಿ ಮಾತನಾಡಿ ಕಳಿಸಿದ್ದೇನೆ. ಯಾವುದೇ ರಾಜಕೀಯವಾಗಿ ಚರ್ಚೆ ನಡೆದಿಲ್ಲ, ಕ್ಯಾಶುಯುಲ್ ಆಗಿ ಬಂದಿದ್ದರು, ಸಿಎಂ, ಡಿಸಿಎಂರನ್ನು ಕಂಡಿದ್ದರಂತೆ ಅಂತೆಯೇ ನನ್ನನ್ನು ಭೇಟಿಯಾದರು. ಪಾರ್ಟಿ ಬಗ್ಗೆ ನಾನು ಮಾತನಾಡಿಲ್ಲ, ಅವರು ಮಾತನಾಡಿಲ್ಲ. ಟೀ ಕುಡ್ಸಿ ಕಳಿಸುವ ಕೆಲಸ ನಮ್ಮದು ಟೀ ಕುಡ್ಸಿ ಕಳಿಸಿದ್ದೇವೆ. ಯಡಿಯೂರಪ್ಪ ಇದ್ದಾಗ ನಮ್ಮ ಪಾರ್ಟಿ ಅಂಗಿತ್ತು, ಹಿಂಗಿತ್ತು, ನಮಗೆ ಬಹಳ ಅನ್ಯಾಯ ಮಾಡಿದರು ಅಂತಾ ಹೇಳಿದ್ರು. ಮತ್ತೆ ಎಂಪಿ ಚುನಾವಣೆ ಏನು ಮಾಡುತ್ತೀಯಾ ಎಂದು ಕೇಳಿದೆ, ನಾನು ಕೂಡ ಬಿಜೆಪಿಯಿಂದ ಆಕಾಂಕ್ಷಿಯಾಗಿದ್ದೇನೆ ಎಂದ್ರು ರೇಣುಕಾಚಾರ್ಯ ಅಷ್ಟೇ.
ಮಾಜಿ ಶಾಸಕ ರೇಣುಕಚಾರ್ಯರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಡಿಸಿಎಂ ಶಿವಕುಮಾರ್ ನಿಮ್ಮನ್ನು ಸಂಪರ್ಕ ಮಾಡಿದ್ದರಲ್ಲ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಎಸ್‌ಎಸ್‌ಎಂ, ಈ ವಿಚಾರವಾಗಿ ನನ್ನ ಹತ್ತಿರ ಯಾರು ಮಾತನಾಡಿಲ್ಲ, ಯಾರು ಬಂದಿಲ್ಲ, ಕ್ಯಾಶುಯುಲ್ ಆಗಿ ಅಷ್ಟೇ ಮಾತನಾಡಿದ್ದಾರೆ. ಬಂದ್ರು ಹೋದ್ರು.
ಬಿಜೆಪಿಯಿಂದ ಯಾರು ಬರುತ್ತಾರೆ ಎಂದು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಎಸ್‌ಎಸ್‌ಎಂ ನಾವು ಯಾರನ್ನು ಕರೆದಿಲ್ಲ. ಆದರೆ ಬರೋರಿಗೆ ಬೇಡ ಅಂದಿಲ್ಲ. ಪಕ್ಷದ ತತ್ವ ಸಿದ್ದಾಂತ, ಕಾರ್ಯಕರ್ತರ ಅಭಿಪ್ರಾಯ ಪಡೆದು ಬರೋದಾದರೆ ಬರಲಿ, ನಮ್ಮ ಪಕ್ಷದ ಬಾಗಿಲು ಯಾವಾಗಲೂ ಓಪನ್ ಇರುತ್ತದೆ ಬರೋದಾದ್ರೆ ಬರಲಿ, ಆದರೆ ನಮ್ಮ ಕಾಂಗ್ರೆಸ್ ಕಾರ್ಯಕರ್ತರು ಯಾರಿಗೆ ಜೈ ಎನ್ನುತ್ತಾರೆ ಅವರಿಗೆ ನಾವು ಜೈ ಎನ್ನುತ್ತೇವೆ. ಬರದಿದ್ದೇರೆ ಬೇಡ ಎಂದು ಸಚಿವ ಎಸ್‌ಎಸ್‌ಎಂ ಹೇಳಿದರು.
ಇದನ್ನೂ ಓದಿ:- Siddaramaiah; ವಿಳಂಬವಾದರೆ ಜಿಲ್ಲಾಧಿಕಾರಿಗಳ ಮೇಲೆ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ
ಪತ್ನಿಗೆ ಲೋಕಸಭೆಗೆ ನಿಲ್ಲುತ್ತಾರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಎಸ್‌ಎಸ್ ಮಲ್ಲಿಕಾರ್ಜುನ್, ಜಗಳೂರಿನ ಶಾಸಕರು ಕುಟುಂಬ ಸಮೇತ ಬಂದು ಕರೆದಿರೋದಕ್ಕೆ ಪ್ರಭಾರವರು ಜಗಳೂರಿಗೆ ವರಮಹಾಲಕ್ಷ್ಮೀ ಕಾರ್ಯಕ್ರಮಕ್ಕೆ ಹೋಗಿದ್ದರು. ಪ್ರಭಾರವರು ಲೋಕಸಭೆ ನಿಲ್ಲುವ ಬಗ್ಗೆ ನಾನು ಯೋಚನೆ ಮಾಡಿಲ್ಲ. ಇಲ್ಲಸಲ್ಲದನ್ನು ನೀವು ಹುಟ್ಟಿಸಬೇಡಿ ಎಂದು ಸಚಿವರು ಹೇಳಿದರು. ಕಾಂಗ್ರೆಸ್ ಟಿಕೆಟ್ ನೀಡುವ ಬಗ್ಗೆ ಕಾರ್ಯಕರ್ತರೊಖದಿಗೆ ಚರ್ಚೆ ಮಾಡಲಾಗುವುದು. ಎಲ್ಲರೂ ಕುಳಿತು ಚರ್ಚಿಸುತ್ತೇವೆ ಅವರು ಹೇಳಿದವರಿಗೆ ಕಾಂಗ್ರೆಸ್ ಟಿಕೆಟ್ ಸಿಗುತ್ತದೆ ಎಂದರು,