ಮಂಜೂರಾದ ಭೂಮಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಸ್ಕೇಚ್ ಹಾಕುತಿದ್ದಂತೆ ಸ್ಟಾಪ್.! ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗೋಳಿನ ಕಥೆ – ವ್ಯಥೆ
ದಾವಣಗೆರೆ: ಅದೇನೋ ಗೊತ್ತಿಲ್ಲ ದಾವಣಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿಗೆ ಅಡೆತಡೆಗಳು ಮೇಲಿಂದ ಮೇಲೆ ಬರುತ್ತಿದೆ. ಕಾಲೇಜು ಅಭಿವೃದ್ಧಿಗಾಗಿ ಸರ್ಕಾರ ಕಾಲೇಜಿನ ಹಿಂಭಾಗದ ಡಿಆರ್ ಆರ್ ಪಾಲಿಟೆಕ್ನಿಕ್ ಕಾಲೇಜಿಗೆ ಸೇರಿದ ಶಿಥೀಲಾವಸ್ಥೆಯ ಹಾಸ್ಟೇಲ್ ಸೇರಿ ಮೂರು ಎಕರೆ ಭೂಮಿ ಮಂಜೂರು ಮಾಡಿತ್ತು. ಎರಡು ಕಾಲೇಜಿನ ಪ್ರಾಂಶುಪಾಲರು ಉನ್ನತ ಶಿಕ್ಷಣ ಸಚಿವಾಲಯದ ಅಧಿಕಾರಿಗಳ ಬಳಿ ಒಡಬಡಿಕೆ ಮಾಡಿ ಭೂಮಿ ಹಂಚಿಕೆ ವಿಚಾರ ಮುಗಿಸಿದ್ದರು. ಸರ್ಕಾರದ ಆದೇಶದ ಅನ್ವಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನವರು ಮಂಜೂರಾದ ಭೂಮಿಯಲ್ಲಿ ಕಟ್ಟಡ ಕಟ್ಟಲು ಮುಂದಾಗಿದ್ದರು ಬಳಿಕ ಶುರುವಾದ ಕಾಮಗಾರಿಗೆ ಕಾಣದ ಕೈಗಳು ತಡೆ ಹಾಕಿದವು. ಶನಿವಾರ ಸರ್ಕಾರದ ಆದೇಶದ ಅನ್ವಯ ಇಂದು ಅಧಿಕಾರಿಗಳು ಮತ್ತೆ ಸ್ಕೇಚ್ ಹಾಕಲು ಬಂದಿದ್ದನ್ನು ಕಂಡವರು ಮತ್ತೆ ಕಾಮಗಾರಿಯನ್ನು ತಡೆ ಹಿಡಿದಿದ್ದಾರೆ. ಸರ್ಕಾರಿ ಕಾಲೇಜಿನ ಅಭಿವೃದ್ಧಿ ಸಹಿಸದೇ ಈ ಕೃತ್ಯ ಎಸಗಲಾಗಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಳೇ ವಿದ್ಯಾರ್ಥಿಗಳ ಆರೋಪವಾಗಿದೆ.
ಇಂದು ಸರ್ಕಾರಿ ಆದೇಶದ ಅನ್ವಯ ಕಾಮಗಾರಿ ಪ್ರಾರಂಭಿಸಲಾಗಿತ್ತು. ಆದರೆ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರ ಪಿಎ ಒಬ್ಬರು ಕಾಮಗಾರಿ ತಡೆಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಸ್ವತಃ ಶಾಸಕರೇ ಮಂಜೂರಾದ ಭೂಮಿಯಲ್ಲಿ ಕಟ್ಟದ ನಿರ್ಮಾಣಕ್ಕೆ ಸಹಕರಿಸಿದ್ದಾರೆ ಆದರೇ ಈ ರೀತಿ ಅಡ್ಡಿ ಪಡಿಸುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಮೂಡಿದೆ. ಶೀಘ್ರದಲ್ಲೆ ಶಾಸಕರು ಈ ಸಮಸ್ಯೆ ಸರಿಪಡಿಸಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಂಘ ಆಗ್ರಹಿಸಿದೆ.