ಫೋನ್ ಪೇ ಮೂಲಕ 50 ಸಾವಿರ ಲಂಚ ಹಣ ಪಡೆದ ಸಬ್ ಇನ್ಸಪೆಕ್ಟರ್ ಹಾಗೂ ಪೇದೆ ಟ್ರ್ಯಾಪ್

ದಾವಣಗೆರೆ: ದಾವಣಗೆರೆ ಜಿಲ್ಲೆಯ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ಪಿ ಎಸ್ ಐ ಶಿವನಗೌಡ ಹಾಗೂ ಲಿಂಗರಾಜ ನಾಯ್ಕ ಸಿಪಿಸಿ-289 ಲಂಚದ ಹಣವನ್ನ ಪೋನ್ ಪೇ ಮೂಲಕ ಸ್ವೀಕರಿಸಿ ಲೋಕಾಯುಕ್ತರಿಂದ ಬಂಧನವಾಗಿದ್ದಾರೆ.
ರಂಗಸ್ವಾಮಿ ತಂದೆ ಲೇಟ್ ಕೃಷ್ಣಮೂರ್ತಿ ವಾಸ.ತಾಳೆ ಕಟ್ಟೆ ಗ್ರಾಮ, ತಾ|| ಹೊಳಲ್ಕೆರೆ ಜಿ|| ಚಿತ್ರದುರ್ಗ ಇವರಿಗೆ ಮಹಿಳೆ ಕಾಣೆ ಪ್ರಕರಣದಲ್ಲಿ ಸಹಾಯ ಮಾಡಿ ಕಾಣೆಯಾದ ಮಹಿಳೆಯನ್ನು ದೂರುದಾರನ ಜೊತೆಗೆ ಕಳಿಸಿಕೊಡಲು ರೂ.50,000/- ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ.
ನಮ್ಮ ವಾಟ್ಸ್ ಆಪ್ ಗ್ರೂಪ್ ಸೇರಲು ಕ್ಲಿಕ್ ಮಾಡಿ
https://chat.whatsapp.com/KKoKihnFdmWGVs3kl4BVty
ಸದರಿ ಶ್ರೀ ಕೆ.ರಂಗಸ್ವಾಮಿ ತಂದೆ ಲೇಟ್ ಕೃಷ್ಣಮೂರ್ತಿ ರವರು ಲಂಚದ ಹಣ ನೀಡಲಾಗದೆ ದಾವಣಗೆರೆ ಲೋಕಾಯುಕ್ತ ಪೊಲೀಸರನ್ನು ಸಂಪರ್ಕಿಸಿ ಲಂಚದ ಹಣವನ್ನು ನೀಡಲು ಇಷ್ಟ ಇಲ್ಲದೆ ಇದ್ದುದರಿಂದ ದಾವಣಗೆರೆ ಲೊಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತಾರೆ ನಂತರ ಆರೋಪಿತರು. ಲಂಚದ ಹಣವನ್ನು ಸ್ವೀಕರಿಸದೇ ಫೊನ್ ಪೇ ಮಾಡುವಂತೆ ಹೇಳಿ ತನ್ನ ಮೋಬೈಲ್ ನಂಬರ ಕೊಟ್ಟು ಈ ನಂಬರ್‌ಗೆ ಪೋನ್ ಪೇ ಮಾಡುವಂತೆ ಹೇಳಿದ್ದಾರೆ. ದೂರುದಾರ ನನ್ನ ಹತ್ತಿರ ಫೋನ್ ಫೇ ಇಲ್ಲ ನಮ್ಮ ಸಾಹುಕಾರ ಕಡೆಯಿಂದ ಪೋನ್ ಫೇ ಮಾಡಿಸುತ್ತೇನೆ ಅಂತಾ ಹೇಳಿ ಇಂದು ದಿನಾಂಕ :- 22/04/2023 ರಂದು ಬೆಳಿಗ್ಗೆ ಇಬ್ಬರಿಗೂ ಫೋನ್ ಪೇ ಮಾಡಿದ್ದು ಅದನ್ನು ಇಬ್ಬರೂ ಸ್ವೀಕರಿಸಿದ್ದಾರೆ. ಫೋನ್ ಪೇ ಮೂಲಕ 50,000/- ಲಂಚದ ಹಣ ಪಡೆದಿದ್ದು ಈ ಬಗ್ಗೆ ಇಬ್ಬರನ್ನೂ ವಶಕ್ಕೆ ಪಡೆಯಲಾಗಿದ್ದು ತನಿಖೆ ಮುಂದುವರೆದಿದೆ ಎಂದು ಲೋಕಾಯುಕ್ತ ಪೋಲಿಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.