Tagaru Palya; ಟಗರು ಪಲ್ಯ ಬಗ್ಗೆ ಡಾಲಿಗೆ ಪಾಠ ಮಾಡ್ತಿದ್ದಾರೆ ತಾತ….ನೋಡಿ!

ಡಾಲಿ ಪಿಚ್ಚರ್ ಅಡಿಯಲ್ಲಿ ನಿರ್ಮಾಣ ಆಗಿರುವಂತಹ ಟಗರುಪಲ್ಯ (Tagaru Palya) ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ.. ಟಗರುಪಲ್ಯ ಸಿನಿಮಾದಲ್ಲಿ ನಾಗಭೂಷಣ್ ನಾಯಕನಾಗಿ ಅಭಿನಯ ಮಾಡಿದ್ದು ಅಮೃತ ಪ್ರೇಮ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಸಿನಿಮಾ ಈಗಾಗಲೇ ಟ್ರೈಲರ್ ಹಾಗೂ ಹಾಡುಗಳ ಮೂಲಕ ಸದ್ದು ಮಾಡುತ್ತಿದೆ… ಟಗರುಪಲ್ಯ ಸಿನಿಮಾ ಈಗಾಗಲೇ ಮನೆಮನೆಗೂ ತಲುಪಿದೆ.. ಇದೆ ಅಕ್ಟೋಬರ್ 27ರಂದು ಸಿನಿಮಾ ತೆರೆಗೆ ಬರುತ್ತಿದ್ದು ಈ ಬಗ್ಗೆ ಜನರು ಮಾತನಾಡುತ್ತಿದ್ದಾರೆ.

first look; ಗೌರಿಶಂಕರ್ ‘ಕೆರೆಬೇಟೆ’ ಚಿತ್ರದ ಫಸ್ಟ್‌ಲುಕ್ ಪೋಸ್ಟರ್ ರಿಲೀಸ್

ಇತ್ತೀಚಿಗಷ್ಟೇ ನಟ ಡಾಲಿ ಧನಂಜಯ್ ಚಿತ್ರೀಕರಣದಲ್ಲಿ ಬಿಸಿಯಾಗಿದ್ದಾಗ ಹಿರಿಯರು ಒಬ್ಬರು ಡಾಲಿಯನ್ನ ಭೇಟಿ ಮಾಡಿ ಟಗರುಪಲ್ಯ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.. ಟಗರುಪಲ್ಯ ಸಿನಿಮಾ ಬಗ್ಗೆ ಡಾಲಿ ಹೇಳಲು ಹೊರಟಾಗ ಅವರೇ ಟಗರುಪಲ್ಯ ಸಿನಿಮಾ ಬರ್ತಾ ಇದೆ ನನಗೆ ಗೊತ್ತಿದೆ ನಾವು ನೋಡುತ್ತೇವೆ ಎಂದು ಹೇಳಿ ಡಾಲಿ ಧನಂಜಯ್ ಅವರಿಗೆ ಹಾಗೂ ಅವರ ಸಿನಿಮಾಗೆ ಆಶೀರ್ವಾದ ಮಾಡಿದ್ದಾರೆ.

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿತ್ತು ಇದೇ ವಾರ ತೆರೆಗೆ ಬರುತ್ತಿರುವಂತಹ ಟಗರುಪಲ್ಲಿ ಸಿನಿಮಾ ನೋಡಲು ಪ್ರೇಕ್ಷಕರು ಕೂಡ ಕಾತುರದಿಂದ ಕಾದಿದ್ದಾರೆ

Leave a Reply

Your email address will not be published. Required fields are marked *

error: Content is protected !!