ದಾವಣಗೆರೆ ಕ್ಷೇತ್ರದ ಕಾಂಗ್ರೆಸ್ ಬಂಡಾಯ ಶಮನ ಇನ್ನೂ ಅಂತಿಮವಿಲ್ಲ. ಅಡ್ಡಗೊಡೆ ಮೇಲೆ ದೀಪ ಇಟ್ಟಂತೆ ಹೇಳಿಕೆ ನೀಡಿದ ವಿನಯ್ ಕುಮಾರ್
ಕಾಗಿನೆಲೆ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಶ್ರೀ ನಿರಂಜನಾನಂದಪುರಿ ಸ್ವಾಮಿಗಳು, ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್, ದಾವಣಗೆರೆ ಲೋಕಸಭಾ ಕ್ಷೇತ್ರದ ಬಂಡಾಯ ಕಾಂಗ್ರೆಸ್ ಅಭ್ಯರ್ಥಿ ಆಕಾಂಕ್ಷಿ ವಿನಯ್, ಹರಿಹರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಅವರು ಒಟ್ಟಾಗಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದರು.
ವಿನಯ್‌ರವರು ಅಂತಿಮ ತೀರ್ಮಾನವನ್ನು ಪತ್ರಿಕಾಗೋಷ್ಠಿಯಲ್ಲಿ ತಿಳಿಸುತ್ತೇನೆ ಹಾಗೂ ಸಿಎಂ ಸಿದ್ದರಾಮಯ್ಯ ಜೊತೆ ಸೌಜನ್ಯಯುತವಾಗಿ ಭೇಟಿಯಾಗಿದ್ದೇನೆ ಎಂದಿದ್ದಾರೆ.
ಭೇಟಿಯಾದ ಸಂದಂರ್ಭದಲ್ಲಿ ಸಿಎಂರವರು ನಿನಗೆ ಮುಂದೆ ಭವಿಷ್ಯದಲ್ಲಿ ಉತ್ತಮ ಸ್ಥಾನ ನೀಡ್ತೇವೆ ,ನಿನ್ನನ್ನು ಬೆಳೆಸುತ್ತೆವೆ ಎಂದು ವಿನಯ್‌ಗೆ ಹೇಳದ್ದಾರೆ
.ಪಕ್ಷೇತರ ನಿಂತರೆ ಗೆಲ್ಲುತ್ತೆನೆ ಎಂದು ಸಿಎಂಗೆ ಮನವಿ ಮಾಡಿದ್ದು,
ಇನ್ನೂ ಎರಡು ಕ್ಷೇತ್ರದಲ್ಲಿ ಅಭಿಪ್ರಾಯ ಸಂಗ್ರಹ ಬಾಕಿಯಿದೆ.ಎಂದು ಅಡ್ಡಗೊಡೆ ಮೇಲೆ ದೀಪ ಇಟ್ಟಂತೆ ವಿನಯ್ ಕುಮಾರ್ ಹೇಳಿಕೆ ನೀಡಿದ್ದಾರೆ.
ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ದತೆ ನಡೆಸಿದ್ದ ವಿನಯಕುಮಾರ್ ಅವರ ಮನವೊಲಿಕೆ ಆಗಿಲ್ಲವೆ.?
ಕಾಗಿನೆಲೆ ಶ್ರೀಗಳ ಸಾರಥ್ಯದಲ್ಲಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ನೇತೃತ್ವದಲ್ಲಿ ವಿನಯಕುಮಾರ್ ಭೇಟಿ ಫಲಪ್ರದವಾಗಿಲ್ಲವೆ ಎಂಬುದು ಯಕ್ಷಪ್ರಶ್ನೆಯಾಗಿ ಉಳಿದಿದೆ.