ನಳಿನಾ ಅಮಾನತ್ತು ಪ್ರಕರಣ ಸೂಕ್ತ ಪರಿಶೀಲನೆಗೆ ಸುವರ್ಣ‌ ಕರ್ನಾಟಕ ವೇದಿಕೆಯಿಂದ ಮನವಿ

ದಾವಣಗೆರೆ: ತುರ್ಚಘಟ್ಟ ನಿರಾಶ್ರಿತರ ಕೇಂದ್ರದ ಪ್ರಥಮ ದರ್ಜೆ ಸಹಾಯಕಿ ಕೆ. ನಳಿನಾ ಅವರನ್ನು ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಅಮಾನತ್ತು ಮಾಡಿರುವುದನ್ನು ಪರಿಶೀಲಿಸುವಂತೆ ಆಗ್ರಹಿಸಿ ಸುವರ್ಣ‌ ಕರ್ನಾಟಕ ವೇದಿಕೆಯಿಂದ ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್‌ ಅವರಿಗೆ ಮನವಿ ಸಲ್ಲಿಸಲಾಯಿತು.

ಇದೇ ವೇಳೆ ಮಾತನಾಡಿದ ಸಂಘಟನೆಯ ರಾಜ್ಯಾಧ್ಯಕ್ಷ ಸಂತೋಷಕುಮಾರ್, ಈ ಹಿಂದೆ ನಿರಾಶ್ರಿತರ ಕೇಂದ್ರದಲ್ಲಿ ಆಯೋಜಿಸಿದ್ದ ಕೆಲವು ಕಾರ್ಯಕ್ರಮಗಳಲ್ಲಿ ಜಿಲ್ಲಾಧಿಕಾರಿಗಳು ಭಾಗವಹಿಸಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿದ ನಳಿನಾ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದ್ದರು. ಹೀಗಿರುವಾಗ ಅವರನ್ನು ಅಮಾನತ್ತು ಮಾಡಿರುವುದು ಗಂಭಿರದ ವಿಷಯವೇ ಸರಿ ಎಂದರು.

ಹಿಂದೆ ನಳೀನಾ ಅವರ ಬಗ್ಗೆ ಕೆಲವು ಸಂಘಟನೆಗಳು ಮಾಹಿತಿ ಹಕ್ಕಿನಡಿಯಲ್ಲಿ ಮಾಹಿತಿಯನ್ನು ಕೇಳಿದ್ದು ಹಾಗೂ ಕೆಲವು ಸಿಬ್ಬಂದಿಗಳು ಕೂಡ ಈ ಘಟನೆಯಲ್ಲಿ ಇವರ ವಿರುದ್ದವಾಗಿ ಷಡ್ಯಂತ್ರ ರೂಪಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿರುವ ಕಾರಣ ನಳಿನಾ ಅಮಾನತ್ತು ಪ್ರಕರಣದ ಹಿನ್ನೆಲೆ ನಿರಾಶ್ರಿತರ ಕೇಂದ್ರದ ಸಿಬ್ಬಂದಿಗಳನ್ನು ಕೂಡ ವಿಚಾರಣೆಗೆ ಒಳಪಡಿಸಬೇಕು. ಪ್ರಕರಣವನ್ನು ಕುಲಂಕಶವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳುವ ಮೂಲಕ ನಿಷ್ಠೆಯಿಂದ ಕಾರ್ಯ ನಿರ್ವಹಿಸುವ ಅಧಿಕಾರಿಗಳಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಈ ಸಂದಂರ್ಭದಲ್ಲಿ ವೇದಿಕೆಯ ರಾಜ್ಯ ಉಪಾಧ್ಯಕ್ಷರು ಎಂ.ಪರಶುರಾಮ, ಜಿಲ್ಲಾಧ್ಯಕ್ಷ ಡಿ. ಶಿವಕುಮಾರ, ಬಿ.ಎಸ್ ಜಗದೀಶ್, ಮನು, ನಿತಿನ್, ಆದರ್ಶ ಮತ್ತಿರರು ಇದ್ದರು

Leave a Reply

Your email address will not be published. Required fields are marked *

error: Content is protected !!