ವಿಕಲಚೇತನ ಕ್ರೀಡಾಪಟು ರೂಪಾ ಅವರಿಗೆ ಧನ ಸಹಾಯ ಮಾಡಲು ಮನವಿ

ವಿಕಲಚೇತನ ಕ್ರೀಡಾಪಟು ರೂಪಾ ಅವರಿಗೆ ಧನ ಸಹಾಯ ಮಾಡಲು ಮನವಿ

ದಾವಣಗೆರೆ: ಕರ್ನಾಟಕರಕ್ಷಣಾ ವೇದಿಕೆ ಹರಿಹರ ತಾಲ್ಲೂಕು ಘಟಕದ ಕಾರ್ಯದರ್ಶಿ ಶ್ರೀಮತಿ ರೂಪಾ ಎನ್. ಇವರು ವಿಕಲಚೇತನರು ಸಿಟಿಂಗ್ ವಾಲಿಬಾಲ್ ರಾಜ್ಯ, ರಾಷ್ಟ್ರಮಟ್ಟದಲ್ಲಿ ವಿಜೇತರಾಗಿ ಇದೀಗ ಅಂತರರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ವೇದಿಕೆಯ ನಗರ ಘಟಕದ ಅಧ್ಯಕ್ಷ ಪ್ರೀತಮ್ ಬಾಬು ತಿಳಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು, ರೂಪಾ ಅವರ ಕ್ರೀಡಾಸಕ್ತಿಯನ್ನು ಪ್ರೋತ್ಸಾಹಿಸಲು ವೇದಿಕೆಯಿಂದ 10 ಸಾವಿರ ರೂ.ಗಳ ಚೆಕ್ ವಿತರಿಸಲಾಗಿದೆ. ಅವರು ಮುಂದಿನ ದಿನಗಳಲ್ಲಿ ಕಜಕಿಸ್ಥಾನದಲ್ಲಿ ನಡೆಯಲಿರುವ ಏಷಿಯನ್ ವಲಯ ಪಂದ್ಯಾವಳಿಯಲ್ಲಿ ಭಾಗವಹಿಸಬೇಕಾಗಿದ್ದು, ಇದಕ್ಕೆ ಸುಮಾರು 2 ಲಕ್ಷ ರೂ. ಹಣ ಬೇಕಾಗಿದೆ.
ದಾನಿಗಳು, ಕ್ರೀಡಾಪ್ರೋತ್ಸಾಹಕರು ರೂಪಾ ಎನ್., ಸ್ಟೇಟ್ ಬ್ಯಾಂಕ್ ಇಂಡಿಯಾ ಹರಿಹರ ಶಾಖೆ, ಖಾತೆ ಸಂಖ್ಯೆ 31594501306, ಐಎಫ್‌ಎಸ್‌ಸಿ ಕೋಡ್ – SBIN0040111ಗೆ ಧನ ಸಹಾ ಮಾಡಲೂ ಮಾಹಿತಿಗಾಗಿ ಮೊ.9591503697ಗೆ ಸಂಪರ್ಕಿಸುವಂತೆ ಅವರು ಕೋರಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ವೈ.ರಮೇಶ್ ಯಾನೆ, ರೂಪಾ ಎನ್. ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!