ಶಾಮನೂರು ಅಂಡರ್‌ಪಾಸ್ ಬಳಿ ಒತ್ತುವರಿ ತೆರವು, ಮನೆಯ ಕಾಂಪೌಂಡ್‌ಗೆ ಮಾರ್ಕಿಂಗ್ ಮಾಡಿದ ಅಧಿಕಾರಿಗಳು

ಅಂಡರ್‌ಪಾಸ್

ದಾವಣಗೆರೆ: ದಾವಣಗೆರೆ ನಗರದ ಹೊರ ವಲಯದ ಶಾಮನೂರು ಅಂಡರ್‌ ಪಾಸ್‌ ಬಳಿ ರಾಷ್ಟೀಯ ಹೆದ್ದಾರಿ ಸರ್ವಿಸ್‌ ರಸ್ತೆಗೆ ಹೊಂದಿಕೊಂಡಂತೆ ಇದ್ದ ಮನೆಯ ಕೌಂಪೌಂಡ್‌ ಗೆ ಇಂದು ಪಾಲಿಕೆ ಅಧಿಕಾರಿಗಳು ಮಾರ್ಕಿಂಗ್‌ ಮಾಡಿದರು.
2003ರಲ್ಲಿ ಈ ಸರ್ವೆ ನಂ 275/3ಎ ರ ಮಾಲೀಕರಿಗೆ ನಾಲ್ಕು ಪಥದ ರಸ್ತೆಗೆ ನಿರ್ಮಾಣ ಮಾಡಲು ಭೂಸ್ವಾಧೀನ ಪಡಿಸಿಕೊಂಡ ನಂತರ ಅವರಿಗೆ ಹಣ ಪಾವತಿಯಾದರೂ ಸಹ ಸುಮಾರು 4 ಗುಂಟೆ ಜಾಗವನ್ನು ಬಿಟ್ಟಿರಲಿಲ್ಲ.
ಈ ಭಾಗದಲ್ಲಿ ಸಂಚಾರ ದಟ್ಟನೆ ಹೆಚ್ಚಾಗಿರುವ ಕಾರಣ, ಸಾರ್ವಜನಿಕರ ರಸ್ತೆಯ ಒತ್ತುವರಿ ತೆರವಿಗೆ ಪಾಲಿಕೆ ಮುಂದಾಗಿದೆ.
ಇದೇ ತಿಂಗಳಲ್ಲಿ ಶಾಮನೂರು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ರಥೋತ್ಸವವೂ ಸಹ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಸ್ತೆ ಅಗಲವಾದರೆ ಶಾಮನೂರು, ನಾಗನೂರು, ಡಾಲರ್ಸ್‌ ಕಾಲೋನಿ, ದೇವರಬೆಳಕೆರೆ ಹೋಗುವ ಮಾರ್ಗದಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಿ ಸವಾರರಿಗೆ ಅನುಕೂಲವಾಗಲಿದೆ.

ಅಂಡರ್‌ಪಾಸ್

Leave a Reply

Your email address will not be published. Required fields are marked *

error: Content is protected !!