Unemployment; ಗ್ರಾಮೀಣ ನಿರುದ್ಯೋಗಿಗಳಿಗೆ ಉಚಿತ ತರಬೇತಿ
ದಾವಣಗೆರೆ, ಅ.11: ಪ್ರಸಕ್ತ ಸಾಲಿನಲ್ಲಿ ಗ್ರಾಮಾಂತರ ಕೈಗಾರಿಕಾ ವಿಭಾಗ ಕಚೇರಿಯ ಜಿಲ್ಲಾ ಉದ್ಯಮ ಕೇಂದ್ರ ಕಾರ್ಯಕ್ರಮದಡಿ ಗ್ರಾಮೀಣ ಪ್ರದೇಶದ ವಿದ್ಯಾವಂತ ನಿರುದ್ಯೋಗಿಗಳಿಗೆ ಕೌಶಲ್ಯಾಭಿವೃದ್ದಿ ಇಲಾಖೆಯ ಅನುಮೋದಿತ ತರಬೇತಿ ಸಂಸ್ಥೆಗಳ ಮೂಲಕ ನಿಗಧಿತ ಅವಧಿಗೆ ಉಚಿತ ತರಬೇತಿಯನ್ನು ಆಯೋಜಿಸಲಾಗಿದೆ.
ತರಬೇತಿ ವಿವರ: ಆರ್ಕ್ ಮತ್ತು ಗ್ಯಾಸ್ ವೆಲ್ಡಿಂಗ್, ಮೋಟಾರ್ ರೀವೈಡಿಂಗ್, ಬ್ಯೂಟಿ ಥೆರಫಿಸ್ಟ್, ಫೀಲ್ಡ್ ಟೆಕ್ನೀಷಿಯನ್ ಅಂಡ್ ಕಂಪ್ಯೂಟಿಂಗ್ ಪೆರಿಫೆರಲ್ಸ್, ಡೊಮೆಸ್ಟಿಕ್ ಎಲೆಕ್ಟ್ರಿಷಿಯನ್ ಮತ್ತು ಹೌಸ್ ವೈರಿಂಗ್, ಟಿ.ವಿ ರಿಪೇರಿ
Cycling; ರಾಜ್ಯ ಮಟ್ಟದ ಸೈಕ್ಲಿಂಗ್ ಸ್ಪರ್ಧೆ
ಆಸಕ್ತ ನಿರುದ್ಯೋಗಿಗಳು ತಮ್ಮ ಗ್ರಾಮ ಪಂಚಾಯಿತಿ ಅಥವಾ ಉಪನಿರ್ದೇಶಕರ ಕಚೇರಿ(ಖಾಗ್ರಾ), ಗ್ರಾಮೀಣ ಕೈಗಾರಿಕಾ ವಿಭಾಗ, ಪ್ಲಾಟ್ ನಂ76(ಪಿ1), ಕರೂರು ಕೈಗಾರಿಕಾ ಪ್ರದೇಶ, ಪಿ.ಬಿ.ರಸ್ತೆ, ದಾವಣಗೆರೆ ಕಚೇರಿಯಿಂದ ಅರ್ಜಿಯನ್ನು ಪಡೆದು ಅಗತ್ಯ ದಾಖಲೆಗಳೊಂದಿಗೆ ಅ.21 ರೊಳಗೆ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ: 9448929717 ನ್ನು ಸಂಪರ್ಕಿಸಲು ಗ್ರಾಮಾಂತರ ಕೈಗಾರಿಕಾ ವಿಭಾಗದ ಉಪನಿರ್ದೇಶಕರಾದ ಸುರೇಶ್.ಹೆಚ್ ತಿಳಿಸಿದ್ದಾರೆ.