ದಾವಣಗೆರೆ ರೈಲ್ವೇ ನಿಲ್ದಾಣದಲ್ಲಿ ಮೂಲ ಸೌಕರ್ಯ ಹೆಚ್ಚಿಸಲು ಒತ್ತಾಯ

ದಾವಣಗೆರೆ ರೈಲ್ವೇ ನಿಲ್ದಾಣದಲ್ಲಿ ಮೂಲ ಸೌಕರ್ಯ ಹೆಚ್ಚಿಸಲು ಒತ್ತಾಯ

ದಾವಣಗೆರೆ: ದಾವಣಗೆರೆ ರೈಲು ನಿಲ್ದಾಣ ನೈಋತ್ಯ ರೈಲ್ವೆ ಮೈಸೂರು ವಿಭಾಗದಲ್ಲಿ 2ನೇ ಅತಿ ಹೆಚ್ಚು ಆದಾಯ (ತಿಂಗಳಿಗೆ ಸುಮಾರು 2.50 ಕೋಟಿ ರೂಪಾಯಿ ) ತಂದು ಕೊಡುವ ನಿಲ್ದಾಣವಾಗಿದೆ.

ದಾವಣಗೆರೆ ರೈಲು ನಿಲ್ದಾಣದಿಂದ ದಿನಕೆ ಸರಿ ಸುಮಾರು 25ಕ್ಕೂ ಹೆಚ್ಚು ಎಕ್ಸ್‌ಪ್ರೆಸ್ ರೈಲುಗಳು ಹಾಗು ಸುಮಾರು  15 ಗೂಡ್ಸ್  ರೈಲು ಗಾಡಿಗಳು ದಿನ ನಿತ್ಯ ಓಡುತಿವೆ.

ಆದರೆ ಪ್ರಯಾಣಿಕರ ದಟ್ಟನೆ ಅನಗುಣವಾಗಿ  ಹೆಚ್ಚಿನ ಸೌಕರ್ಯಗಳಿಲ್ಲ. ಟ್ರೋಲಿ ಪಾತ್ , ಅಂಗವಿಕಲರ ಹಾಗೆ ಸೀನಿಯರ್ ಸಿಟಿಜನ್ ರವರಿಗೆ ರೈಲು ನಿಲ್ದಾಣದಲ್ಲಿ ನಿಲ್ದಾಣದ ಮುಖ್ಯ ದ್ವಾರದಿಂದ ರೈಲಿನ ಕೋಚ್ ಮುಟ್ಟಲು ಅನುಕೂಲಕಾಗಿ ಬ್ಯಾಟರಿ ಚಾಲಿತ ಕಾರ್ ( ರೈಲು ನಿಲ್ದಾಣದಲ್ಲಿ ಪ್ಲಾಟ್ಫಾರ್ಮ್ ಮೇಲೆ ಅಂಗವಿಕಲರಿಗೆ  ರೈಲು ಕೋಚ್ ಮುಟ್ಟಲು  )  ಹಾಗು ಪ್ರಯಾಣಿಕರಿಗೆ ಕೈಗೆಟುಕುವ ಬೆಲೆಯಲ್ಲಿ ಶುಚಿ-ರುಚಿ ಊಟ ಹಾಗು ತಿಂಡಿ ಪೂರೈಸುವ ಸಸ್ಯಹಾರಿ ಕ್ಯಾಂಟೀನ್ (2nd Platform ) ಹೀಗೆ ಮುಂತಾದ ಸೌಲಭ್ಯಗಳನು ಕಲ್ಪಿಸಬೇಕು ಎಂದು ನೈರುತ್ಯ ರೈಲ್ವೆ ವಲಯ ಪ್ರಯಾಣಿಕರ ಸಂಘದ ಕಾರ್ಯದರ್ಶಿ ರೋಹಿತ್ ಎಸ್.ಜೈನ್ ಒತ್ತಾಯಿಸಿದ್ದಾರೆ.

ಬೆಳಿಗ್ಗೆ ಬೆಂಗಳೂರು ಕಡೆಗೆ ಹೋಗುವ ರೈಲಿನಲ್ಲಿ ಟಿಕೆಟ್ ಪಡೆಯಲು ಜನರು ಹರಹಾಸ ಪಡೆಯಬೇಕಾಗುತ್ತದೆ. ಆದ್ದರಿಂದ ಇಂಟರ್‌ಸಿಟಿ ಹಾಗು ಪ್ಯಾಸೆಂಜರ್ ರೈಲು ಬರುವ ಸಮಯದಲ್ಲಿ ಪ್ರಯಾಣಿಕರ ಅನುಕುಲಕಾಗಿ ಹೆಚ್ಚಿನನ ಕೌಂಟರ್‌ಳಲ್ಲಿ ಟಿಕೆಟ್ ನೀಡಬೇಕು.

ಎಕ್ಸ್‌ಪ್ರೆಸ್ ರೈಲು ನಿಲ್ಲುವ ಸಮಯವನ್ನು 5 ನಿಮಿಷಕ್ಕೆ ಹಾಗು ಪ್ಯಾಸೆಂಜರ್ ರೈಲುಗಳ ನಿಲ್ದಾಣ 10 ನಿಮಿಷಕ್ಕೆ ಹೆಚ್ಚಿಸಬೇಕು. ರೈಲ್ವೆ ಸ್ಟೇಷನ್ ನಲ್ಲಿ  ಪ್ರೀಪೇಯ್ಡ್ ಆಟೋ ಕೌಂಟರ್ ಇದ್ದು, ಆದನ್ನು ಆರಂಭಿಸಬೇಕು. ರಾತ್ರಿ ಸಮಯದಲ್ಲಿ ಪ್ರಯಾಣಿಕರ ಸುರಕ್ಷತೆಗೆ ಪೋಲಿಸ್ ಇಲಾಖೆ ಗಸ್ತು ಹೆಚ್ಚಿಸಬೇಕು ಎಂದು ರೋಹಿತ್ ಜೈನ್ ಮೈಸೂರು ವಿಭಾಗಕ್ಕೆ ಕೋರಿದ್ದಾರೆ.

Leave a Reply

Your email address will not be published. Required fields are marked *

error: Content is protected !!