venkatesh mv; ಸಂಪನ್ಮೂಲ ಕೇಂದ್ರವಾಗಿ ಸಂಯೋಜಿತ ಪ್ರಾದೇಶಿಕ ಕೇಂದ್ರ

ದಾವಣಗೆರೆ, ಅ. 13: ಕೌಶಲ್ಯಾಭಿವೃದ್ಧಿ, ಪುನರ್ವಸತಿ ಮತ್ತು ವಿಕಲಾಂಗ ವ್ಯಕ್ತಿಗಳ ಸಬಲೀಕರಣಕ್ಕಾಗಿ ಸಂಯೋಜಿತ ಪ್ರಾದೇಶಿಕ ಕೇಂದ್ರವು ಅಂಗವಿಕಲರ ಸಂಪನ್ಮೂಲ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ (venkatesh mv) ತಿಳಿಸಿದರು.

ನಗರದ ದೇವರಾಜ ಅರಸು ಬಡಾವಣೆಯಲ್ಲಿರುವ ಕೌಶಲ್ಯಾಭಿವೃದ್ಧಿ, ಪುನರ್ವಸತಿ ಮತ್ತು ವಿಕಲಾಂಗ ವ್ಯಕ್ತಿಗಳ ಸಬಲೀಕರಣಕ್ಕಾಗಿ ಸಂಯೋಜಿತ ಪ್ರಾದೇಶಿಕ ಕೇಂದ್ರದಲ್ಲಿ ನಡೆದ ಅಂಗವಿಕಲ ಗ್ರಾಹಕರಿಗೆ ಬೋಧನಾ ಮತ್ತು ಕಲಿಕಾ ಸಾಮಾಗ್ರಿ ಹಾಗೂ ಅಗತ್ಯ ಸಾಧನಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಈ ಕಾರ್ಯಕ್ರಮವು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಂಗವಿಕಲರ ಸಬಲೀಕರಣ ಇಲಾಖೆ (ದಿವ್ಯಾಂಗಜನ) ಅಂಗವಿಕಲರಿಗಾಗಿ ಆರಂಭಿಸಿರುವ ಒಂದು ಸೇವಾ ವಿಧಾನವಾಗಿದೆ. ವಿಕಲಚೇತನದ ಸಂಯೋಜಿತ ಪ್ರಾದೇಶಿಕ ಕೇಂದ್ರ(ಸಿ.ಆರ್.ಸಿ)ವು ಸಂಪನ್ಮೂಲ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದ್ದು, ವಿಕಲಚೇತನರಿಗೆ ಫಿಸಿಯೋಥೆರಪಿ, ಕ್ಲಿನಿಕಲ್ ಸೈಕಾಲಜಿ, ಆಕ್ಯುಪೇಷನಲ್ ಥೆರಪಿ,  ಸ್ಪೀಚ್ ಥೆರಪಿಯಂತಹ ಪುನರ್ವಸತಿ, ವಿಶೇಷ ಶಿಕ್ಷಣ ಸೇವೆಗಳನ್ನು ಒದಗಿಸುತ್ತಿದೆ ಎಂದರು.

electricity; ಆಕಸ್ಮಿಕ‌ ಸಂದರ್ಭಕ್ಕೆ ಅಗತ್ಯ ಸಿದ್ದತೆ ಏಕೆ ಮಾಡಿಕೊಂಡಿಲ್ಲ: ಖಾರವಾಗಿ ಪ್ರಶ್ನಿಸಿದ ಮುಖ್ಯಮಂತ್ರಿ

ಕಿಟ್ ವಿತರಣೆ: ಕೌಶಲ್ಯಾಭಿವೃದ್ಧಿ, ಪುನರ್ವಸತಿ ಮತ್ತು ವಿಕಲಾಂಗ ವ್ಯಕ್ತಿಗಳ ಸಬಲೀಕರಣಕ್ಕಾಗಿ ಸಂಯೋಜಿತ ಪ್ರಾದೇಶಿಕ ಕೇಂದ್ರದಲ್ಲಿ ನೋಂದಾಯಿತರಾದ, ದೃಷ್ಟಿಹೀನತೆ ಹೊಂದಿರುವ 20 ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಫೋನ್ ಗಳು, ಸ್ಮಾರ್ಟ್ ಕೇನ್‍ಗಳು ಮತ್ತು ಬ್ರೈಲ್ ಕಿಟ್, ಬೌದ್ಧಿಕ ಬೆಳವಣೆಗೆ  ಹೊಂದಿರುವ 10 ಮಕ್ಕಳಿಗೆ ಬೋಧನೆ ಮತ್ತು ಕಲಿಕಾ ಸಾಮಗ್ರಿ ಕಿಟ್‍ಗಳು ಹಾಗೂ ಶ್ರವಣ ದೋಷವಿರುವ 15 ವ್ಯಕ್ತಿಗಳಿಗೆ ಇಯರ್ ಇಯರ್‍ರಿಂಗ್‍ಗಳನ್ನು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ವಿತರಿಸಿಲಾಯಿತು.

ಶ್ರವಣ ಸಾಧನವನ್ನು ಬಳಸಲು ಫಿಟ್ಟಿಂಗ್ ಮತ್ತು ತರಬೇತಿಯನ್ನು ವಿಶೇಷ ಶಿಕ್ಷಣತಜ್ಞ ಡಾ. ವಿಜಯ್ ರಾಜ್ ಬೊಳ್ಳಪಲ್ಲಿ ನೀಡಿದರು. ಟಿ.ಎಲ್.ಎಂ ಕಿಟ್ ಬಳಸುವ ದೃಷ್ಟಿಕೋನವನ್ನು ಕ್ಲಿನಿಕಲ್ ಅಸಿಸ್ಟೆಂಟ್ ರಾಜು ಟಿ ಹಾಗೂ ನರ್ಸ್. ಸಹಾಯಕ ಉಜ್ಜಪ್ಪ ಎನ್.ಎಂ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!