ತಂಬಾಕು ನಿಯಂತ್ರಣ ಕಾಯ್ದೆ ಉಲ್ಲಂಘನೆ : 25 ಪ್ರಕರಣ ದಾಖಲು
ದಾವಣಗೆರೆ : ಹರಿಹರ ನಗರದಲ್ಲಿ ತಂಬಾಕು ನಿಯಂತ್ರಣ ಕಾಯ್ದೆ ಉಲ್ಲಂಘಿಸಿ À ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದ ಮಳಿಗೆಗಳ ಮೇಲೆ ದಾಳಿ ನಡೆಸಿ ಕಾಯ್ದೆ ಉಲ್ಲಂಘನೆಯ 25 ಪ್ರಕರಣಗಳನ್ನು ದಾಖಲಿಸಿ, 3700 ರೂ. ದಂಡ ವಿಧಿಸಲಾಗಿದೆ.
ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್ ಅವರ ಮಾರ್ಗಸೂಚಿಯಂತೆ ಅಧಿಕಾರಿಗಳ ತಂಡ ಮಂಗಳವಾರ(ಜ.17) ಬೆಳಿಗ್ಗೆ ವಿವಿಧ ಹೋಟೆಲ್, ಬೇಕರಿ, ರೆಸ್ಟೋರೆಂಟ್ ಮೇಲೆ ದಾಳಿ ನಡೆಸಿ ನಿಯಮ ಉಲ್ಲಂಘಿಸಿದವರ ಪ್ರಕರಣ ದಾಖಲಿಸಿದೆ. ಕೋಟ್ಪಾ ಕಾಯ್ದೆ-2003 ಕಾಯ್ದೆಯ ಸೆಕ್ಷನ್ 04 ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ನಿಷೇಧ ಎಂಬ ನಾಮಫಲಕವನ್ನು ಕಡ್ಡಾಯವಾಗಿ ಅಳವಡಿಸುವಂತೆ ಹೋಟೆಲ್ ಬೇಕರಿ ಮಾಲೀಕರಿಗೆ ಅಧಿಕಾರಿಗಳ ತಂಡ ಸೂಚನೆ ನೀಡಿದೆ.
ದಾಳಿಯಲ್ಲಿ ಹರಿಹರ ತಹಶೀಲ್ದಾರ್ ಅಶ್ವತ್.ಎಂ.ಬಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಮೊಹನ್, ಆಹಾರ ಸುರಕ್ಷತಾ ಅಧಿಕಾರಿ ಕೊಟ್ರೇಶಪ್ಪ.ಹೆಚ್, ಸಮಾಜ ಕಾರ್ಯಕರ್ತ ದೇವರಾಜ.ಕೆ.ಪಿ., ಎನ್‍ಟಿಸಿಪಿ ಸಮಾಜ ಕಾರ್ಯಕರ್ತ ಎಂ.ವಿ ಹೊರಕೇರಿ, ಆರೋಗ್ಯ ಮೇಲ್ವಿಚಾರಕರಾದ ಬಿ.ಹೆಚ್ ಈ ಓ ನಾಗರಾಜ್, ಉಮಣ್ಣ.ಎಂ , ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸಂತೋಷ್, ಆರೋಗ್ಯ ನಿರೀಕ್ಷಕ, ನಗರಸಭೆಯ ಪೊಲೀಸ್ ಸಿಬ್ಬಂದಿ ಹನುಮಂತರಾಯ ಹಾಜರಿದ್ದರು.