ಸ್ಪಂದನಾಳಿಗೆ “ವಿಶ್ವಕಲಾರತ್ನ” ರಾಜ್ಯ ಪ್ರಶಸ್ತಿ
ದಾವಣಗೆರೆ: ಬೆಂಗಳೂರಿನ ವಿಶ್ವ ಕನ್ನಡ ಕಲಾ ಸಂಸ್ಥೆಯಿಂದ ಪ್ರಥಮ ವಿಶ್ವ ಕನ್ನಡ ಕಲಾ ಸಮ್ಮೇಳನದಲ್ಲಿ ಖ್ಯಾತ ಹಿರಿಯ ಚಲನಚಿತ್ರ ನಟ ಕೀರ್ತಿಶೇಷ ಲೋಕೇಶ್‌ರವರ ಸ್ಮರಣಾರ್ಥ ದಾವಣಗೆರೆಯ ಎಲೆಬೇತೂರಿನ ಭರತನಾಟ್ಯ ಸೇರಿದಂತೆ ಹತ್ತು ಹಲವು ಕಲಾ ಪ್ರಕಾರಗಳಲ್ಲಿ ಸಾಧನೆ ಮಾಡಿದ ಕುಮಾರಿ ಸ್ಪಂದನಾ ಕೆ.ಪಿ.ಯವರಿಗೆ “ವಿಶ್ವಕಲಾರತ್ನ” ರಾಜ್ಯ ಪ್ರಶಸ್ತಿ ವಿತರಿಸಲಾಗುತ್ತದೆ ಎಂದು ಸಂಸ್ಥೆಯ ಸಂಸ್ಥಾಪಕರಾದ ಡಾ. ಈ. ರವೀಶ ತಿಳಿಸಿದ್ದಾರೆ.
ಆಗಸ್ಟ್ ೨೦ ರಂದು ಭಾನುವಾರ ಬೆಂಗಳೂರಿನ ಅಲುಮ್ನಿ ಅಸೋಸಿಯೇಷನ್ ಸಭಾಂಗಣದಲ್ಲಿ ನಾಡಿನ ಪ್ರಖ್ಯಾತ ಹಿರಿಯ ಚಲನಚಿತ್ರ ನಟ, ನಟಿಯರ, ನಿರ್ಮಾಪಕರ, ನಿರ್ದೇಶಕರುಗಳ ಉಪಸ್ಥಿತಿಯಲ್ಲಿ ಈ ಪ್ರಶಸ್ತಿ ಸ್ವೀಕರಿಸುತ್ತಿರುವ ಕಲಾಕುಂಚ ಎಲೆಬೇತೂರು ಶಾಖೆಯ ಪ್ರಧಾನ ಕಾರ್ಯದರ್ಶಿ, ಶ್ರೀ ವಿನಾಯಕ ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಲತಾ ಪರಮೇಶ್ವರ ದಂಪತಿಗಳ ಸುಪುತ್ರಿ ಸ್ಪಂದನಾಳಿಗೆ ಕಲಾಕುಂಚ ಸರ್ವ ಸದಸ್ಯರು, ಪದಾಧಿಕಾರಿಗಳು, ಅಭಿನಂದನೆ ಸಲ್ಲಿಸಿ ಶುಭ ಕೋರಿದ್ದಾರೆ.