ಸಮರ್ಪಕವಾಗಿ ಕುಡಿಯುವ ನೀರನ್ನು ಪೂರೈಸಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ, ಪಾಲಿಕೆ ಸದಸ್ಯರ ನಿಯೋಗ.

ಕುಡಿಯುವ ನೀರು

ದಾವಣಗೆರೆ: ದಾವಣಗೆರೆ ನಗರದಲ್ಲಿ ಕಳೆದ ೧೫
ದಿನಗಳಿಂದ ನಗರದ ಜನತೆಗೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಕೆಲವು
ವಾರ್ಡ್ಗಳಲ್ಲಿ ೭-೮ ದಿನಗಳಿಗೆ ಒಮ್ಮೆ ಪೂರೈಸಿದರೆ, ಇನ್ನೂ ಕೆಲವು ವಾರ್ಡ್ಗಳಲ್ಲಿ ೧೦-೧೧
ದಿನಗಳಾದರೂ ನೀರಿನ ಪೂರೈಕೆಯಾಗದಿರುವುದು, ಸಾರ್ವಜನಿಕರಿಗೆ ತೊಂದರೆಯಾಗಿದೆ.

ಬಾತಿಯಲ್ಲಿರುವ ಪಂಪ್‌ಹೌಸ್‌ನಲ್ಲಿ ನಿರಂತರ ವಿದ್ಯುತ್ ಸರಬರಾಜಾಗದಿರುವುದು ಸಹ
ಸಮಸ್ಯೆಗಳನ್ನು ಉಲ್ಭಣಗೊಳಿಸಿದೆ. ದಿನದಲ್ಲಿ ಹಲವು ಬಾರಿ ಪವರ್ ಕಟ್‌ನ್ನು ಈ ಪಂಪ್‌ಹೌಸ್
ಎದುರಿಸಬೇಕಾಗಿದೆ. ಈ ಕುರಿತು ಕೂಡಲೇ ಬೆಸ್ಕಾಂ ಇಲಾಖೆಯ ಗಮನಕ್ಕೆ ತಂದು ನಿರಂತರ
ವಿದ್ಯುತ್ ನೀಡಲು ನಿರ್ದೇಶಿಸಬೇಕು ಮತ್ತು ಮುಂದಿನ ದಿನಗಳಲ್ಲಿ ಬೇಸಿಗೆ ಹೆಚ್ಚಾಗುವುದರಿಂದ
ಮಹಾನಗರ ಪಾಲಿಕೆಯಿಂದ ಸಮರ್ಪಕ ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲು
ಸೂಚಿಸಬೇಕು. ಈ ಸಂದರ್ಭದಲ್ಲಿ ಮಾತನಾಡಿದ ಪಾಲಿಕೆ ವಿರೋಧ ಪಕ್ಷದ ನಾಯಕ ಪ್ರಸನ್ನ ಕುಮಾರ್, ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಈ ಹಿಂದೆ ಕಾರ್ಯಾದೇಶ ನೀಡಿದ ಹರಿಹರದ ವಿದ್ಯಾನಗರದ ಸಬ್ ಸ್ಟೇಷನ್‌ನಿಂದ ಬಾತಿ
ಪಂಪ್‌ಹೌಸ್ ವರೆಗೆ ಮತ್ತು ಕೋಡಿಹಾಲ್-ಹೊಸಪೇಟೆಯಿಂದ ರಾಜನಹಳ್ಳಿ ಪಂಪ್‌ಹೌಸ್ ವರೆಗೆ
ಎಕ್ಸ್ಪ್ರೆಸ್ ಫೀಡರ್ ಅಳವಡಿಸುವ ಕಾಮಗಾರಿ ನಿಂತು ಹೋಗಿದ್ದು, Right of way
ಸಮಸ್ಯೆಯನ್ನು ತಾವುಗಳು ಆದ್ಯತೆ ಮೇರೆಗೆ ಪರಿಹರಿಸಬೇಕೆಂದು ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಮೇಯರ್ S T ವೀರೇಶ್, ಪಾಲಿಕೆ ಸದಸ್ಯರಾದ ಅರ್ ಶಿವಾನಂದ್, ಸೋಗಿ ಶಾಂತ ಕುಮಾರ್, ಶಿವಪ್ರಕಾಶ್, ಮುಖಂಡರಾದ ಯೋಗೀಶ್, ಜಯಪ್ರಕಾಶ್, ಶ್ರೀನಿವಾಸ್, ಸಂತೋಷ್ ಜಾದವ್, ಯುವ ಮುಖಂಡರಾದ ವಿನಯ್ ದಿಳ್ಯಪ್ಪ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!