ದಾವಣಗೆರೆ ತಾಲ್ಲೂಕು ಹವಾಮಾನ ಆಧಾರಿತ ಬೆಳೆವಿಮೆ
ದಾವಣಗೆರೆ : 2022-23ನೇ ಸಾಲಿನ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಡಿ ದಾವಣಗೆರೆ ತಾಲ್ಲೂಕಿಗೆ ಅಡಿಕೆ, ದಾಳಿಂಬೆ, ಕೊಯ್ಲು ಹಂತದ ವೀಳ್ಯದೆಲೆ ಬೆಳೆಗಳು ಅಧಿಸೂಚನೆಯಾಗಿದ್ದು ತಾಲ್ಲೂಕಿನ ರೈತರಿಗೆ ವಿಮೆ ಮಾಡಿಸಲು ಅವಕಾಶವಿದೆ ಹವಾಮಾನ ವೈಪರೀತ್ಯ/ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಈ ಮೇಲಿನ ಬೆಳೆಗಳಿಗೆ ವಿಮೆ ಮೂಲಕ ಪರಿಹಾರ ಪಡೆಯಬಹುದಾಗಿದ್ದು, ತಾಲ್ಲೂಕಿನ ಎಲ್ಲಾ ರೈತ ಬಾಂಧವರು ಈ ಕೂಡಲೇ ತಮ್ಮ ಹತ್ತಿರದ ಬ್ಯಾಂಕ್ ಶಾಖೆ, ರೈತ ಸಂಪರ್ಕ ಕೇಂದ್ರ ಅಥವಾ ಸೇವಾ ಕೇಂದ್ರಗಳಲ್ಲಿ ವಿಮೆಯ ಪ್ರಿಮಿಯಮ್ ಪಾವತಿಸಿ ವಿಮದಾರರಾಗಬಹುದು.
ರೈತರು ತೋಟಗಾರಿಕೆ ಬೆಳೆಗಳಾದ ಅಡಿಕೆ ಬೆಳೆಗೆ ಪ್ರತಿ ಹೆಕ್ಟೇರ್‌ಗೆ ರೂ.1,28,000 ವಿಮಾ ಮೊತ್ತಕ್ಕೆ 6400.ರೂ, ದಾಳಿಂಬೆ ಬೆಳೆಗೆ ಪ್ರತಿ ಹೆಕ್ಟೇರ್‌ಗೆ ರೂ.1,27,000 ವಿಮಾ ಮೊತ್ತಕ್ಕೆ 6350.ರೂ, ವಿಳ್ಯದೆಲೆ ಬೆಳೆಗೆ ಪ್ರತಿ ಹೆಕ್ಟೇರ್‌ಗೆ ರೂ.1,17,000 ವಿಮಾ ಮೊತ್ತಕ್ಕೆ 5850.ರೂ, ಪಾವತಿಸಬೇಕಾಗಿರುತ್ತದೆ. ವಿಮೆ ಮೊತ್ತ ಪಾವತಿಸಲು ಜೂ.30 ಕೊನೆಯ ದಿನವಾಗಿದ್ದು, ರೈತರು ಬೆಳೆಗಳ ವಿಮೆ ಕಂತನ್ನು ಎಸ್.ಬಿ.ಐ ಜನರಲ್ ಇನ್ಸುರೆನ್ಸ್ ಕಂಪನಿಯನ್ನು ವಿಮಾ ಸಂಸ್ಥೆಯನ್ನಾಗಿ ನಿಗಧಿಪಡಿಸಲಾಗಿದೆ.
ಅಗತ್ಯ ದಾಖಲಾತಿ: ಪ್ರಸಕ್ತ ಸಾಲಿನ ಪಹಣಿ (RTC), ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಹಾಗೂ ಹೆಚ್ಚಿನ ಮಾಹಿತಿಗಾಗಿ ಹೋಬಳಿವಾರು ಸಹಾಯಕ ತೋಟಗಾರಿಕೆ ಅಧಿಕಾರಿಗಳು, ರೈತ ಸಂಪರ್ಕ ಕೇಂದ್ರದವರನ್ನು ಸಂಪರ್ಕಿಸಬಹುದಾಗಿದೆ. ಪವನ್‌ಕುಮಾರ್ ಹೆಚ್.ಎಸ್. ಕಸಬಾ ಹೋಬಳಿ, ಮೊ,ಸಂಖ್ಯೆ 7022244152, ರವಿ ನಾಗಪ್ಪ ದಾಳೇರ, ಆನಗೋಡು ಹೋಬಳಿ ಮೊ. ಸಂಖ್ಯೆ 7019819101, ಏಕಾಂತ, ಮಾಯಕೊಂಡ- 1 ಹೋಬಳಿ ಮೊ.ಸಂಖ್ಯೆ:7899445111 ಯನ್ನು ಸಂಪರ್ಕಿಸಬಹುದಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ