ವಿದ್ಯಾರ್ಥಿ ಜೀವನದಲ್ಲಿ ಮುಂದೆ ಏನಾಗಬೇಕು ಎಂಬ ಸ್ಪಷ್ಟ ಗುರಿ ಅವಶ್ಯ – ಫ್ರೊ ವೆಂಕಟೇಶ್ ಬಾಬು

ದಾವಣಗೆರೆ: ಲಾಕಡೌನ್ ಸಮಯವನ್ನು ವಿದ್ಯಾರ್ಥಿಗಳು ನಕಾರಾತ್ಮಕವಾಗಿ ತೆಗೆದುಕೊಳ್ಳದೆ ಧನಾತ್ಮಕವಾಗಿ ತೆಗೆದುಕೊಂಡು ಈ ಸಮಯವನ್ನು ತಮ್ಮ ಗುರಿ ಸಾಧನೆಯ ಪ್ರಯತ್ನಕ್ಕೆ ಬಳಸಿಕೊಂಡರೆ ಏನಾದರೂ ಸಾಧನೆ ಮಾಡಲು ಸಾಧ್ಯ ಎಂದು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾದ ವೆಂಕಟೇಶ್ ಬಾಬು ಅವರು ಹೇಳಿದರು.

ಅವರು ಇಂದು ಭದ್ರಾ ಕಾಲೇಜಿನ ಸ್ನಾತಕೋತ್ತರ ವಿಭಾಗವತಿಯಿಂದ ಆಯೋಜಿಸಿದ್ದ ಯಶಸ್ಸು ನಿಮ್ಮದೇ ಆನ್ ಲೈನ್ ವೆಬಿನಾರ್ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಮುಂದೆ ತಾವೇನಾಗಬೇಕು ಎಂಬ ಸ್ಪಷ್ಟವಾದ ಗುರಿಯನ್ನು ಹೊಂದುವುದು ಬಹು ಅವಶ್ಯವಾಗಿದೆ. ಆ ಗುರಿಯನ್ನು ಸಾಧಿಸಲು ಸತತ ಪ್ರಯತ್ನದ ಅವಶ್ಯಕತೆಯಿದೆ ಯಾವುದೇ ವಿದ್ಯಾರ್ಥಿ ಮೊದಲ ಪ್ರಯತ್ನದ ನಂತರ ಮತ್ತೆ ಪ್ರಯತ್ನ ಪಡುತ್ತಿರುವುದು ಸೋಲು ಇದನ್ನು ಅರಿತುಕೊಂಡು ತಮ್ಮ ಗುರಿಯೆಡೆಗೆ ನಡೆಯಬೇಕೆಂದು ಹೇಳಿದರು.

ಬಹು ದೊಡ್ಡ ಗುರಿ ಸಾಧಿಸಲು ಸಾಕಷ್ಟು ಅವಮಾನಗಳು ಕಷ್ಟಗಳು ಬಂದರೂ ಅವುಗಳ ನಡುವೆ ಸ್ವಾಭಿಮಾನದಿಂದ ಓದಿ ಪ್ರಯತ್ನಪಟ್ಟು ಸಾಧನೆ ಮಾಡಬೇಕು. – ವೆಂಕಟೇಶ್ ಬಾಬು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾದ ವೆಂಕಟೇಶ್ ಬಾಬ

ಸಾಧನೆ ಮಾಡಿದ ವ್ಯಕ್ತಿಗಳ ಸಾಧನೆ ಅಷ್ಟೇ ನೋಡದೆ ಅದರ ಹಿಂದಿನ ಕಷ್ಟದ ದಾರಿಯನ್ನು ನೋಡಿ ಅದರಿಂದ ಪ್ರೇರಿತರಾಗಿ ಏನಾದರೂ ಸಾಧನೆ ಮಾಡಿ ಎಂದು ಹೇಳಿದರು. ಇನ್ ಕಾರ್ಯಕ್ರಮದ ಪ್ರಾಸ್ತಾವಿಕ ಅನ್ನು ಅಧ್ಯಾಪಕರಾದ ಮಲ್ಲಿಕಾರ್ಜುನ್ ಅವರು ನೆರವೇರಿಸಿದರುು.

ಕಾರ್ಯಕ್ರಮದಲ್ಲಿ ಭದ್ರ ಎಜುಕೇಷನ್ ಟ್ರಸ್ಟ್ ನ ಮುಖ್ಯಸ್ಥರಾದ ಪ್ರೊ ಸಿ ಎಚ್ ಮುರುಗೇಂದ್ರಪ್ಪ ನವ್ರು ಆಡಳಿತ ಮಂಡಳಿ ಸದಸ್ಯರಾದ ಸಂಕೇತ್ ರವರು ಕಾಲೇಜಿನ ಪ್ರಾಂಶುಪಾಲರಾದ ಮುರುಗೇಶ್ ರವರು. ಉಪಸ್ಥಿತರಿದ್ದರು. ಅಧ್ಯಾಪಕರಾದ ದೇವೇಂದ್ರ ಅವರು ತಾಂತ್ರಿಕ ಸಹಾಯವನ್ನು ನೆರವೇರಿಸಿಕೊಟ್ಟರು

Leave a Reply

Your email address will not be published. Required fields are marked *

error: Content is protected !!