youth death; ಕೇಸರಿ ಬಾವುಟ ಕಟ್ಟಲು ಹೋಗಿ ಕೆಳಗಿ ಬಿದ್ದು ಸಾವು

ದಾವಣಗೆರೆ, ಅ.12: ಅಕ್ಟೋಬರ್ 14 ರಂದು ನಡೆಯಲಿರುವ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆ ಹಿನ್ನೆಲೆಯಲ್ಲಿ, ಕ್ರೇನ್ ಮೇಲೆ ನಿಂತುಕೊಂಡು ಕೇಸರಿ ಬಾವುಟ ಕಟ್ಟುತ್ತಿದ್ದ ಯುವಕ (youth death) ಕಾಲು ಜಾರಿ ಬಿದ್ದು, ಅದೇ ಕ್ರೇನ್ ಚಕ್ರಕ್ಕೆ ಸಿಲುಕಿ ಸಾವು ಕಂಡಿರುವ ಘಟನೆ ಬುಧವಾರ ಸಂಜೆ ದಾವಣಗೆರೆ ನಗರದ ರೈಲ್ವೆ ನಿಲ್ದಾಣ ಮುಂಭಾಗ ನಡೆದಿದೆ.

ಬಸವರಾಜಪೇಟೆಯ ಪೃಥ್ವಿ ರಾಜ್ (28) ಮೃತ ಯುವಕ, ರೈಲ್ವೇ ನಿಲ್ದಾಣ ಮುಂಭಾಗ ನಿರ್ಮಾಣ ಮಾಡಿರುವ ಮಹಾದ್ವಾರದ ಮೇಲೆ ಕೇಸರಿ ಬಾವುಟ ಕಟ್ಟುತ್ತಿದ್ದ ವೇಳೆ, ಆಯತಪ್ಪಿ ಕೆಳಗೆ ಬಿದ್ದ ಯುವಕನ ತಲೆಯ ಮೇಲೆ ಕ್ರೇನ್ ಹರಿದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದಾನೆ. ಸ್ಥಳದಲ್ಲಿದ್ದವರು ಆತನನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವು ಕಂಡಿದ್ದಾನೆ.

Job fair; ಅ.16 ರಂದು ಬೃಹತ್ ಉದ್ಯೋಗ ಮೇಳ

ಪೃಥ್ವಿ ಮೂಲತ: ಪ್ಲಂಬರ್ ಕೆಲಸಗಾರನಾಗಿದ್ದು, ಇಂದು ನಗರದ ಪಿಬಿ ರಸ್ತೆಯ ಉದ್ದಕ್ಕೂ ಕ್ರೇನ್ ಬಳಸಿಕೊಂಡು ಬಾವುಟ ಕಟ್ಟುವ ಕೆಲಸ ಮಾಡಲಾಗಿತ್ತು. ಆದರೆ ಸಂಜೆ ಈ ದುರಂತ ಸಂಭವಿಸಿದೆ. ಸುದ್ದಿ ತಿಳಿಯುತ್ತಿದ್ದಂತೆಯೆ ಪೃಥ್ವಿರಾಜ್‌ನ ಪೋಷಕರು ನಗರದ ಸರ್ಕಾರಿ ಆಸ್ಪತ್ರೆ ಮುಂದೆ ಜಮಾಯಿಸಿದ್ದು, ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿದ್ದಾರೆ.

ಕೆಲಸಕ್ಕೆ ನಾನಾಗಲಿ ನಮ್ಮ ವೇದಿಕೆಯಿಂದಾಗಲಿ ಯುವಕನನ್ನು ಕರೆತಂದಿಲ್ಲ. ಕ್ರೇನ್‌ನವರು ಆತನನ್ನು ಕರೆ ತಂದಿದ್ದಾರೆ ಎಂದು ವೇದಿಕೆ ಅಧ್ಯಕ್ಷ ಜೊಳ್ಳಿ ಗುರು ತಿಳಿಸುವ ಪ್ರಯತ್ನ ಮಾಡುತ್ತಿದ್ದು, ಇದಕ್ಕೆ ಸಂಬಂಧಿಕರು ಒಪ್ಪದ ಪರಿಣಾಮ ಮಾತಿನ ಚಕಮಕಿ ನಡೆಯಿತು.

Leave a Reply

Your email address will not be published. Required fields are marked *

error: Content is protected !!