ಆರೋಗ್ಯ : ಹೌದು, ಈ ಅಂಡರ್ ವೇರ್ ನಿಮಗೆ ಸಹಾಯಕವಾಗಬಹುದು. ಇಂದಿನ ಆಧುನಿಕ ಜೀವನದಲ್ಲಿ ಆರೋಗ್ಯದ ಒಂದು ಸಣ್ಣ ಏರುಪೇರುಗಳೂ ಸಹ ದೊಡ್ಡ ರೀತಿಯ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ನಿಮ್ಮ ಬಿಡುವಿಲ್ಲದ ಜೀವನ ಶೈಲಿ ನಿಮ್ಮನ್ನುಇದ್ದಕ್ಕಿದ್ದಂತೆ ಅನಾರೋಗ್ಯಕ್ಕೀಡು ಮಾಡುತ್ತದೆ.
ಅನಾರೋಗ್ಯದಿಂದ ಹಾಸಿಗೆ ಹಿಡಿದ ಪುರಷರಾಗಲಿ,ಮಹಿಳೆಯರಾಗಲಿ ಅಂಥವರನ್ನು ರಕ್ಷಿಸುವಲ್ಲಿ ಈ “ಸ್ಮಾರ್ಟ್ ಪ್ಯಾಂಟ್ಸ್” ಎನ್ನುವ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಈ ಅಂಡರ್ ವೇರ್ ನ್ನು ಧರಿಸಿದರೆ ಅದರಿಂದ ರಕ್ತದ ಒತ್ತಡವನ್ನು ಆಗಿಂದಾಗ್ಗೆ ನಮೂದು ಮಾಡಬಹುದು.
ಅಂಡರ್ ವೇರ್ ಬೆಲ್ಟ್ ನಲ್ಲಿ ಅಳವಡಿಸಿರುವ ರಬ್ಬರ್ ಎಲೆಕ್ಟ್ರೋಡ್, ಆಗಿಂದಾಗ್ಗೆ ಪ್ರಧಾನ ರಕ್ತನಾಳಗಳಲ್ಲಿ ಪ್ರವಹಿಸುವ ರಕ್ತದ ಒತ್ತಡವನ್ನು ಅಂಡರ್ ವೇರ್ ನಲ್ಲಿರುವ ಚಿಪ್ ನಲ್ಲಿ ನಮೂದಿಸಲ್ಪಡುತ್ತದೆ.
ಒಂದು ನಿರ್ದಿಷ್ಟ ಸಮಯದ ನಂತರ ಅಂಡರ್ ವೇರ್ ನಿಂದ ಆ ದಿನ ನಮೂದಾದ ಬಿಪಿ ತಿಳಿಯುತ್ತದೆ. ಆ ‘ಚಿಪ್’ ನಲ್ಲಿಅನೇಕ ದಿನಗಳಿಂದ ನಮೂದಾದ ಸಮಾಚಾರವನ್ನು ಡಾಕ್ಟರ್ ರ ಬಳಿ ತಿಳಿಸಿದರೆ ವ್ಯಕ್ತಿಯ ಆರೋಗ್ಯ ಸ್ಥಿತಿಯನ್ನು ಅಂದಾಜು ಮಾಡಲು ಸುಲಭವಾಗುತ್ತದೆ.
