ಬೆಂಗಳೂರು: ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ನಷ್ಟ ಉಂಟು ಮಾಡಿದ ಆರೋಪದ ಮೇಲೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಇಬ್ಬರು ಕಾರ್ಯನಿರ್ವಾಹಕ ಎಂಜಿನಿಯರ್‌ಗಳನ್ನು ರಾಜ್ಯ ಸರ್ಕಾರ ಅಮಾತನು ಮಾಡಿದೆ.
ತುಮಕೂರಿನ ಪಂಚಾಯತ್ ರಾಜ್ ಎಂಜಿನಿಯರ್ ವಿಭಾಗದಲ್ಲಿ ವಿಳಂಬ ಧೋರಣೆ ಹಾಗೂ ಕರ್ತವ್ಯ ನಿರ್ಲಕ್ಷದಿಂದ ಸುಮಾರು 2.76 ಕೋಟಿ ನಷ್ಟಕ್ಕೆ ಕಾರಣವಾಗಿದ್ದ ಆರೋಪದಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಎಸ್.ಆರ್ ಹರೀಶ್, ಯಾದಗಿರಿಯ ಪಂಚಾಯತ್ ರಾಜ್ ಎಂಜಿನಿಯರ್ ವಿಭಾಗದಲ್ಲಿ 41 ವಿವಿಧ ಕಾಮಗಾರಿಗಳಲ್ಲಿ 1.3 ಕೋಟಿ ನಷ್ಟ ಮಾಡಿದ್ದ ಆರೋಪದಲ್ಲಿ ಎಂಜಿನಿಯರ್ ಬಸವರಾಜ. ಕೆ. ಹಲಚೇರ ಅವರನ್ನು ಅಮಾನತು ಮಡಲಾಗಿದೆ.
