ದಾವಣಗೆರೆ: ನಗರದಲ್ಲಿ ಇತ್ತೀಚೆಗೆ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದ ಕಾಂಗ್ರೆಸ್ ಹಿರಿಯ ಮುಖಂಡ ಹೆಚ್. ಮಹಮ್ಮದ್ ಇಕ್ಬಾಲ್ ಸಾಬ್ ಅವರ ನಿವಾಸಕ್ಕೆ ಶುಕ್ರವಾರ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಸಾಬ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಅಬ್ದುಲ್ ಜಬ್ಬಾರ್ ಸಾಬ್ ಮಾತನಾಡಿ, ಯಾರಿಗೂ ಕೇಡು ಬಯಸದ ಇಕ್ಬಾಲ್ ಸಾಹೇಬರು ನನಗೆ ಬಹಳ ಆತ್ಮೀಯ ಸ್ನೇಹಿತರಾಗಿದ್ದರು. ಅವರ ಸಾವಿನ ಸುದ್ದಿ ಕೇಳಿ ಆಘಾತವಾಯಿತು. ಅವರಿಗೆ ಹೃದಯ ಸಂಬಂಧಿ ಕಾಯಿಲೆ ಇದ್ದರು ಪುಣ್ಯ ಸ್ಥಳಗಳಾದ ಪವಿತ್ರ ಮೆಕ್ಕಾ ಮದಿನಾ ಯಾತ್ರೆ ಮುಗಿಸಿದ ಅದೃಷ್ಟವಂತರು ಎಂದು ಹೇಳಿದರು.
ಇಕ್ಬಾಲ್ ಸಾಬ್ ಪುತ್ರರಾದ ಅಸೀಫ್ ಇಕ್ಬಾಲ್ ಹಾಗೂ ಫಾರೂಕ್ ಗೆ ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಸಿರಾಜ್ ಅಹ್ಮದ್, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಟಿ.ಅಸ್ಗರ್, ಬ್ಯಾಟರಿ ಜಬೀವುಲ್ಲಾ ಇತರರು ಉಪಸ್ಥಿತರಿದ್ದರು.
