ಬ್ಯೂಟಿ ಪಾರ್ಲರ್ ಗೆ ಹೋಗುತ್ತೀರಾ? ಹಾಗಾದರೆ ಇದನ್ನು ಓದಿ

ಬ್ಯೂಟಿ ಪಾರ್ಲರ್ ಗೆ ಹೋಗುತ್ತಿರಾ? ಮುಂಜಾಗ್ರತ ಕ್ರಮಗಳು

ಯಾವಾಗಲೂ ಒಳ್ಳೆಯ ಪಾರ್ಲರ್ ಎಕ್ಸ್ ಪರ್ಟ್ (ನುರಿತ) ಪಾರ್ಲರ್ ನವರ ಹತ್ತಿರ ಹೋಗಬೇಕು. ಸುಮ್ಮನೆ ಟ್ರೈನಿಗಳ ಹತ್ತಿರ ಹೋಗುವುದು ಅಷ್ಟು ಒಳ್ಳೆಯದಲ್ಲ.

ಸುಮ್ಮನೆ ಕಣ್ಣುಮುಚ್ಚಿಕೊಂಡು ಹೋದಂತೆ ಯಾವುದೋ ಒಂದು ಪಾರ್ಲರ್ ಗೆ ಹೋಗುವುದಲ್ಲ, ಅವರು ಆ ಕೆಲಸದಲ್ಲಿ ಎಷ್ಟು ಪರಿಣತಿ ಹೋಂದಿದ್ದಾರೋ? ನೋಡಬೇಕು, ಅವರು ಅನ್ವಯಿಸಬೇಕಾದ ಕ್ರಮಗಳೆಲ್ಲವನ್ನು ಸರಿಯಾಗಿ ಅನ್ವಯಿಸುತ್ತಾರೋ ಇಲ್ಲವೋ ನೋಡಬೇಕು.

 1. ಅವರು ಯಾವ ವಿಧವಾದ ಕ್ರೀಮ್, ಯಾವ ಕಂಪನಿಯ ಉತ್ಪನ್ನಗಳು, ಸ್ಟಾಕ್ ಎಂದಿನದು ಇವೆಲ್ಲ ಗಮನಿಸಬೇಕು.
 2. ನಾವು ಫೆಶೀಯಲ್ ಮಾಡಿಸಿಕೊಳ್ಳಲು ಅವರು ಕಣ್ಣಿಗೆ ಸೌತೆಕಾಯಿ ಇಲ್ಲ ಹತ್ತಿ ಯಾವುದನ್ನಾದರು ಇಡುತ್ತಾರೆ. ಅವರು ನಮ್ಮ ಮಖಕ್ಕೆ ಎಂತಹ ಕ್ರೀಂ ಹಾಕುತ್ತಾರೋ ಗೊತ್ತಿಲ್ಲ. ಆದ್ದರಿಂದ ಇಂತಹ ಕಾಸ್ ಮೆಟಿಕ್ಸ್ ವಿಷಯದಲ್ಲಿ ನಾವು ಗಮನವಹಿಸಿಕೊಂಡು ನಂತರ ಫೆಶಿಯಲ್ ಮಾಡಿಸಿಕೊಳ್ಳಬೇಕು.
 3. ಕಾಡಿಗೆ ಮಸ್ಕಾರಾ, ಲಿಪ್ ಸ್ಟಿಕ್ ಯಾರಿಗೋ ಬಳಸಿದ್ದು ಮತ್ತು ಅವು ಎಷ್ಟು ದಿನಗಳ ಹಿಂದಿನವೋ ಆದ್ದರಿಂದ ನಾವು ಒಳ್ಳೇ ಸ್ಟ್ಯಾಂಡರ್ಡ್​ ಕ್ವಾಲಿಟಿ ಉತ್ಪನ್ನಗಳನ್ನು ಬಳಸುವವರು ಸ್ವಚ್ಛತೆ ಕಾಪಾಡುವವರ ಹತ್ತಿರ ಹೋಗಬೇಕು.
 4. ನೀವು ಹೇರ್ ಟ್ರೀಟ್ ಮೆಂಟ್ ಗಾಗಿ ಹೋಗುವುದಾದರೆ, ಹೇರ್ಕಟ್ ಮಾಡಿಸುವಾಗ ಅವರು ತೊಳೆದ ಬಾಚಣಿಕೆ ಬಳಸುತ್ತಾರೋ ಎಂದು ನೋಡಿರಿ. ಏಕೆಂದರೆ ಡ್ಯಾಂಡ್ರಫ್ (ಹೊಟ್ಟು) ಎನ್ನುವುದು ಫಂಗಸ್. ಇದು ಒಬ್ಬರ ತಲೆ ಬಾಚಿ ಇನ್ನೊಬ್ಬರಿಗೆ ಬಾಚಿದಾಗ ಅದು ನಮಗೂ ಆಗುವ ಸಾಧ್ಯತೆಗಳಿವೆ.
 5. ಸಾಧ್ಯವಾದಷ್ಟು ನಮ್ಮದೇ ಆದಂತಹ ಬಾಚಣಿಕೆ ತೆಗೆದುಕೊಂಡು ಹೋಗುವುದು ಉತ್ತಮ.
 6. ಹರ್ಬಲ್ ಮಾಡುವವರಾದರೆ ಅವರು ನಿಮಗೆ ಫ್ರೆಶ್ ಟ್ರೀಟ್ ಮೆಂಟ್ ಕೊಡುವಂತೆ ನೋಡಿ ಹಳೇ  ಉತ್ನಗಳಿಂದ ಲಾಭ ಕಡಿಮೆ.
 7. ಸಾಧ್ಯವಾದಷ್ಟು ಫ್ರೂಟ್ ಫೇಶಿಯಲ್ ಮಾಡಿಸುವುದು ಒಳ್ಳೆಯದು.
 8. ನೀವು ಯಾವಾಗಲೂ ಪಾರ್ಲರ್ ಗೆ ಹೋಗುವವರಾದರೆ ಅವರು ಒಂದೇ ಕಂಪನಿಯ ಉತ್ಪನ್ನಗಳನ್ನು ನಿಮಗೆ ಉಪಯೋಗಿಸುವಂತೆ ನೋಡಿ, ಸಿಕ್ಕ ಸಿಕ್ಕ ಕ್ರೀಮ್, ಪ್ಯಾಕ್ ಹಾಕಿಸಿಕೊಂಡು ನಿಮ್ಮ ತ್ವಚೆಯ ಕೋಮಲತ್ವ ನಶಿಸದಂತೆ ನೋಡಿಕೊಳ್ಳಿ.
 9. ಯಾವಾಗಲೂ ಬ್ಲೀಚಿಂಗ್ ಅಷ್ಟು ಸೂಕ್ತವಲ್ಲ, ಪ್ರತಿ ಬ್ಲೀಚಿಂಗ್ ಗೆ 3 ತಿಂಗಳ ಅಂತರವಾದರೂ ಇರಬೇಕು.
 10. ಮೊಡವೆಗಳು ತುಂಬಾ ಜಾಸ್ತಿ ಇದ್ದಾಗ ಸ್ಟೀಮಿಂಗ್ ಬಹಳ ಮಾಡಿಸಬಾರದು. ಏಕೆಂದರೆ ಅವು ಜಾಸ್ತಿ ಹರಡುತ್ತವೆ.
 11. ಸಾಕಷ್ಟು ಜನ ಬ್ಯೂಟಿ ಪಾರ್ಲ ರ್ ಹೋಗುವುದೊಂದೆ ತಿಳಿದಿದ್ದಾರೆ. ಆದರೆ ಕೆಲವೊಂದು ಕಡೆ ಅದೆಷ್ಟು ಮೋಸ ನಡೆಯುತ್ತದೆ ಎಂದು ತಿಳಿಯಲಾರರು. ಹೇರ್ ಜೆಲ್, ಹೇರ್ ಕ್ರೀಮ್ ಇವುಗಳನ್ನು ಹೇರ್ ಸ್ಟೈಲ್ ಮಾಡಿಸಿಕೊಂಡಾಗ ಬಳಸುತ್ತಾರೆ. ಅವುಗಳ ಗುಣಮಟ್ಟದ ಬಗ್ಗೆ ತಿಳಿದುಕೊಳ್ಳಿ.

ಬ್ಯೂಟಿ ಪಾರ್ಲರ್ ಗೆ ಹೋಗುವಾಗ ಈ ಮೇಲ್ಕಂಡ ಅಂಶಗಳನ್ನು ಗಮನದಲ್ಲಿಟ್ಟುಕೊಂಡರೆ ನಿಮ್ಮ ಸೌಂದರ್ಯ ಮತ್ತು ಆರೋಗ್ಯ ಎರಡು ಉತ್ತಮವಾಗಿರುತ್ತಾದೆ

 

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!