ದಾವಣಗೆರೆ(ಕೊಟ್ಟೂರು) : ಇಲ್ಲಿಗೆ ಸಮೀಪದ ಕೆ.ಅಯ್ಯನಹಳ್ಳಿ ಗ್ರಾಮದ ಬಳಿ ಗುರುವಾರ ಖಾಸಗಿ ಶಾಲಾ ಬಸ್‌ಗೆ ಬೆಂಕಿ ಹತ್ತಿಕೊಂಡಿದ್ದು, ವಿದ್ಯಾರ್ಥಿಗಳು ಸುರಕ್ಷಿತರಾಗಿದ್ದಾರೆ.
ಬಸ್ ತರಳುಬಾಳು ವಿದ್ಯಾಸಂಸ್ಥೆಗೆ ಸೇರಿರುವ ಹುಣಸಿಕಟ್ಟೆ ಕ್ರಾಸ್‌ನ ತರಳಬಾಳು ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ಸೇರಿದ್ದಾಗಿತ್ತು. ಬಸ್‌ನಲ್ಲಿ 45 ಮಕ್ಕಳು ಸೇರಿದಂತೆ 3 ಜನ ಶಿಕ್ಷಕರು ಹಾಗೂ ಬಸ್ ಸಹಾಯಕ, ಚಾಲಕ ಒಳಗೊಂಡಂತೆ 50 ಜನರಿದ್ದರು.
ಹೊಗೆ ಕಾಣಿಸಿಕೊಂಡ ತಕ್ಷಣ ಚಾಲಕ ಮತ್ತು ಸಿಬ್ಬಂದಿ ವಿದ್ಯಾರ್ಥಿಗಳನ್ನು ಬಸ್‌ನಿಂದ ಕೆಳಕ್ಕೆ ಇಳಿಸಿದರು. ಹೀಗಾಗಿ ಯಾವುದೇ ಅಪಾಯವಾಗಲಿಲ್ಲ.
ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬಸ್‌ಗೆ ಬೆಂಕಿ ಹತ್ತಿಕೊಂಡಿರಬೇಕು ಎಂದು ಶಂಕಿಸಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು,, ಕೊಟ್ಟೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
