ಹರಜಾತ್ರೆಗೆ ತೆರೆ – ದಣಿವರಿಯದೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ ವಚನಾನಂದ ಶ್ರೀ

ಹರಿಹರ – ನಗರದ ಹೊರ ವಲಯದಲ್ಲಿರುವ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದಲ್ಲಿ ಕಳೆದ ಎರಡು ದಿನಗಳ ಕಾಲ ಅದ್ದೂರಿಯಾಗಿ ನಡೆದ ಹರಜಾತ್ರಾ ಮಹೋತ್ಸವಕ್ಕೆ ತೆರೆ ಬಿದ್ದಿದ್ದು, ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಅವರು ಸೋಮವಾರ ಸಿಬ್ಬಂದಿಯೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.

ಕಳೆದ 14ರಂದು ಹರಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗಿತ್ತು. ಎರಡು ದಿನ ನಡೆದ ಹರಜಾತ್ರೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಸಚಿವರು, ಶಾಸಕರು, ವಿವಿಧ ಮಠಗಳ ಮಠಾಧೀಶರು ಭಾಗವಹಿಸಿದ್ದರು. ಇತ್ತ ಹರಿಹರ, ದಾವಣಗೆರೆ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಸ್ಥರು, ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಹರಜಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಹರಜಾತ್ರೆಗೂ ಮುನ್ನ ಜಾತ್ರಾ ತಯಾರಿ, ಗಣ್ಯರ ಆಹ್ವಾನ, ಪ್ರಸಾದ ಹೀಗೆ ನಾನಾ ಕಾರ್ಯಗಳಲ್ಲಿ ಬ್ಯೂಸಿಯಾಗಿದ್ದ ಶ್ರೀಗಳು ಇದೀಗ ಜಾತ್ರೆ ಮುಗಿಸಿದ ಮರು ದಿನವೇ ದಣಿವರಿಯದೆ ಸ್ವಚ್ಛತಾ ಕಾರ್ಯಗಳಲ್ಲಿ ಸ್ವತಃ ಪಾಲ್ಗೊಂಡು ಇತರರಿಗೆ ಮಾದರಿಯಾಗಿದ್ದಾರೆ.

ಹರ ಜಾತ್ರಾ ಸಮಯದಲ್ಲಿಯೇ ವಿಶ್ವದಾಖಲೆಯ ಯೋಗಥಾನ್ ಕಾರ್ಯಕ್ರಮದ ಅಂಗವಾಗಿ ದಾವಣಗೆರೆಯ ಜಿಲ್ಲಾ ಕ್ರೀಡಾಂಗಣದಲ್ಲಿ 8 ಸಾವಿರಕ್ಕೂ ಜನರು ಪಾಲ್ಗೊಂಡಿದ್ದ ಯೋಗ ಕಾರ್ಯಕ್ರಮವನ್ನೂ ಸಹ ವಚನಾನಂದ ಶ್ರೀಗಳು ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು. ಕಾರ್ಯಕ್ರಮದ ಮರುಕ್ಷಣವೇ ಮತ್ತೆ ಹರಿಹರಕ್ಕೆ ಆಗಮಿಸಿ ಹರಜಾತ್ರೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!