ರಾಷ್ಟ್ರಧ್ವಜದ ಅಪಮಾನ ತಡೆಗೆ ಹಿಂದೂ ಜನಜಾಗೃತಿ ಸಮಿತಿಯಿಂದ ಡಿಸಿಗೆ ಮನವಿ

ದಾವಣಗೆರೆ– ರಾಷ್ಟ್ರೀಯ ಹಬ್ಬದ ಸಮಯದಲ್ಲಿ ರಾಷ್ಟ್ರಧ್ವಜದ ಅಪಮಾನವನ್ನು ತಡೆಗಟ್ಟಲು ನ್ಯಾಯಾಲಯದ ಆದೇಶದಂತೆ ಹಾಗೂ ಕೇಂದ್ರ ಸರ್ಕಾರದ ಪ್ಲಾಸ್ಟಿಕ್ ನಿಷೇದದ ನಿರ್ಧಾರದಂತೆ ಕ್ರಮಕೈಗೊಳ್ಳಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

ರಾಷ್ಟ್ರಧ್ವಜವು ರಾಷ್ಟ್ರದ ಭಾವೈಕ್ಯದ ಸಂಕೇತಾಗಿದ್ದು, ರಾಷ್ಟ್ರೀಯ ಹಬ್ಬಗಳಲ್ಲಿ ಹೆಮ್ಮೆಯಿಂದ ಪ್ರದರ್ಶಿಸಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಅಂಗಡಿಗಳಲ್ಲಿ ಮತ್ತು ಇ-ಕಾಮರ್ಸ್ ಜಾಲತಾಣಗಳಲ್ಲಿ (ವೆಬ್ ಸೈಟ್) ತ್ರಿವರ್ಣ ಮಾಸ್ಕ್ ಗಳನ್ನು ಮಾರಾಟ ಮಾಡುತ್ತಿರುವುದು ಕಂಡು ಬಂದಿದ್ದ, ತ್ರಿವರ್ಣ ಮಾಸ್ಕ್ ಬಳಕೆಯಿಂದ ರಾಷ್ಟ್ರಧ್ವಜದ ಪಾವಿತ್ರ್ಯತೆಗೆ ಧಕ್ಕೆಯಾಗುತ್ತದೆ. ತ್ರಿವರ್ಣ ಮಾಸ್ಕ್ ದೇಶಭಕ್ತಿಯ ಪ್ರದರ್ಶನದ ಮಾಧ್ಯಮವಲ್ಲ. ಅಲ್ಲದೇ ಧ್ವಜ ಸಂಹಿತೆಗನುಸಾರ ರಾಷ್ಟ್ರಧ್ವಜವನ್ನು ಈ ರೀತಿ ಬಳಸುವುದು ಧ್ವಜಕ್ಕೆ ಮಾಡಿದ ಅಪಮಾನವೇ ಆಗಿದೆ.ಇದು ರಾಷ್ಟ್ರೀಯ ಗೌರವದ ಮಾನನಷ್ಟ ತಡೆ ಕಾಯ್ದೆಯಡಿ ಅಪರಾಧವಾಗಿದೆ.

ಆದ್ದರಿಂದ ತ್ರಿವರ್ಣ ಮಾಸ್ಕ್ ಮಾರಾಟ ಮಾಡುವ ಮತ್ತು ಬಳಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ಒತ್ತಾಯಿಸಿದೆ. ನ್ಯಾಯಾಲಯದ ಆದೇಶದ ಪ್ರಕಾರ ರಾಷ್ಟ್ರಧ್ವಜದ ಅಪಾವಿತ್ರ್ಯವನ್ನು ತಡೆಯಲು ಸರ್ಕಾರ ಸಮಿತಿ ರಚಿಸಬೇಕು. ಅದರಲ್ಲಿ ಹಿಂದೂಜನಜಾಗೃತಿ ಸಮಿತಿಯನ್ನೂ ಸೇರಿಸಬೇಕು. ಸಮಿತಿಯು ದೇಶ ಸೇವೆಗೆ ಸಿದ್ಧವಾಗಿದೆ.
ಜಿಲ್ಲೆಯಲ್ಲಿ ಎಲ್ಲಿಯೂ ಪ್ಲಾಸ್ಟಿಕ್ ರಾಷ್ಟ್ರಧ್ವಜ ತಯಾರಿಸಿ ಮಾರಾಟ ಮಾಡಲಾಗುತ್ತಿದ್ದರೆ ಕೂಡಲೇ ಉತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳಬೇಕು.

ವಿದ್ಯಾಲಯಗಳಲ್ಲಿ ರಾಷ್ಟ್ರಧ್ವಜವನ್ನು ಗೌರವಿಸಿರಿ ವಿಷಯ ಕುರಿತು ಉಪನ್ಯಾಸ ಹಾಗೂ ರಸಪ್ರಶ್ನೆ ನಡೆಸಲು ಸಮಿತಿಗೆ ಅನುಮತಿ ನೀಡಬೇಕು. ನಾಗರಿಕರಲ್ಲಿ ಜಾಗೃತಿ ಮೂಡಿಸಲು ಸಮಿತಿಯು ರಾಷ್ಟ್ರಧ್ವಜವನ್ನು ಗೌರವಿರಿ ವಿಶೇಷ ವಿಡಿಯೋ ತೋರಿಸಲು ಕೇಬಲ್ ವಾಹಿನಿಗಳಿಗೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿ ಸಮಿತಿ ಮನವಿ ಸಲ್ಲಿಸಿದೆ.

ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಪ್ರಮುಖರಾದ ರಾಧಕ್ಕ. ಶ್ರೀಧರ್ ಹೆಗಡೆ. ಸುರೇಶಣ್ಣ. ನಾಗರಾಜ್. ನಾಗರಾಜ್. ಮಲ್ಲೇಶ್.ಅಶ್ವಿನಿ ಅಕ್ಕ, ಬಸಪ್ಪ, ಕರಿಬಸಪ್ಪ. ವಿನಾಯಕ್ ಮತ್ತು ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!