ದಾವಣಗೆರೆ: ನಗರದ ಪಿ.ಜೆ. ಬಡಾವಣೆಯ ಗುಡ್ ಫುಡ್ ಹೋಟೆಲ್‌ನಲ್ಲಿ ಕೊಟ್ಟ ಮಂಡಕ್ಕಿಯಲ್ಲಿ ಹಲ್ಲಿ ಬಿದ್ದಿದ್ದು, ಅದನ್ನು ತಿಂದು ಗ್ರಾಹಕರೊಬ್ಬರು ವಾಂತಿ ಮಾಡಿಕೊಂಡು, ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತೋಳಹುಣಸೆ ಗ್ರಾಮದ ಶೇಖರಪ್ಪ ಗುಡ್ ಫುಡ್ ಹೋಟೆಲ್‌ನಲ್ಲಿ ಮಂಡಕ್ಕಿ ತಿಂದಿದ್ದಾರೆ. ಹೊಟ್ಟೆ ತೊಳಸಿದಂತಾಗಿ ವಾಂತಿ ಮಾಡಿಕೊಂಡಿದ್ದಾರೆ. ನಂತರ ಕೊಟ್ಟ ಮಂಡಕ್ಕಿಯಲ್ಲಿ ಹಲ್ಲಿ ಬಿದ್ದಿರುವುದು ತಿಳಿದು, ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಹೋಟೆಲ್ ಮಾಲೀಕರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಅವರು ಇದೀಗ ದಾವಣಗೆರೆ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.
