ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಅಲ್ಪ ಸಂಖ್ಯಾತರ ಕಲ್ಯಾಣಕ್ಕೆ 10 ಸಾವಿರ‌ ಕೋಟಿ – ಸಿದ್ದರಾಮಯ್ಯ

ದಾವಣಗೆರೆ: ರಾಜ್ಯದಲ್ಲಿ ‌ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಲ್ಪ ಸಂಖ್ಯಾತರ ಕಲ್ಯಾಣಕ್ಕಾಗಿ 10 ಸಾವಿರ ಕೋಟಿ ರೂ ನೀಡುವುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ಸರ್ಕಾರಿ ‌ಹೈಸ್ಕೂಲ್‌ ಮೈದಾನದಲ್ಲಿ ‌ಗುರುವಾರ ಸಂಜೆ ಕೆಪಿಸಿಸಿಯಿಂದ ಹಮ್ಮಿಕೊಂಡಿದ್ದ “ಪ್ರಜಾಧ್ವನಿ ಯಾತ್ರೆ” ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಸರ್ಕಾರದ ಅವಧಿಯಲ್ಲಿ ಎಲ್ಲ ಅಭಿವೃದ್ಧಿ ‌ನಿಗಮಗಳ ಸಾಲ ಮನ್ನಾ ಮಾಡಲಾಗಿದೆ. ಬಿಜೆಪಿಯವರು ಒಂದು ಪೈಸೆ ಕೂಡ ಸಾಲ ಮನ್ನಾ ಮಾಡಿಲ್ಲ. ಅವರು ಮಾಡಿರೋದು ಶೇ.40 ಲೂಟಿ ಮಾತ್ರ.ಕೇಂದ್ರದ ನಮ್ಮ ಸರ್ಕಾರ ಇದ್ದಾಗ ಎಲ್ ಪಿಜಿ ಬೆಲೆ 400 ರೂ ಇತ್ತು. ಈಗ 1180 ರೂ ಆಗಿದೆ.ಇಸನ್ನೆ ಅಚ್ಷೆದಿನ್ ಅನ್ನಬೇಕಾ? ಇಷ್ಟಾದರೂ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರಬೇಕಾ ಎಂದು‌ ಪ್ರಶ್ನಿಸಿದ ಸಿದ್ದರಾಮಯ್ಯ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮುಂದಿನ 90 ದಿನ ಮಾತ್ರ ಅಧಿಕಾರದಲ್ಲಿ ಇರುತ್ತದೆ. ‌ಈಗಾಗಲೇ ಈ ಬಗ್ಗೆ ‌ಜನ ತೀರ್ಮಾನ ಮಾಡಿದ್ದರೆ. ಈ ಹಿನ್ನೆಲೆಯಲ್ಲಿ ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಪ್ರತಿ ಮನೆಯ ಗೃಹಿಣಿಗೆ ಮಾಸಿಕ 2 ಸಾವಿರ ರೂ ನೀಡುವ ಯೋಜನೆ ಜಾರಿಗೆ ತರಲಾಗುವುದು ಎಂದರು.

ಈಗ ವಾಲ್ಮೀಕಿ ಮತ್ತು ಪಂಚಮಸಾಲಿ ಸಮಾಜಕ್ಕೆ ಬೊಮ್ಮಾಯಿ ಸರ್ಕಾರ ಟೋಪಿ ಹಾಕಿದೆ.‌ಎರಡೂ ಸಮಾಜಕ್ಕೂ ಮೀಸಲಾತಿ ನೀಡುವುದಾಗಿ ಮೂಗಿನ ಬದಲಿಗೆ ನೆತ್ತಿಗೆ ತುಪ್ಪ ಹಚ್ಚಲಾಗಿದೆ. ಕೆಲವೊಮ್ಮೆ ಮೂಗು ಉದ್ದವಾಗಿ ಅದನ್ನು ನೆಕ್ಕಿ ಬಿಟ್ಟಾರು ಎಂದು ನೆತ್ತಿಗೆ ತುಪ್ಪ ಹಚ್ಚಿದ್ದಾರೆ. ಮೀಸಲಾತಿ ‌ಹೆಚ್ಚಳದ ಕಾನೂನು ಮಾಡಿದರೆ ಸಾಲದು ಸಂವಿಧಾನ ತಿದ್ದುಪಡಿ ‌ಆಗಿ ಶೆಡ್ಯೂಲ್‌9 ರಲ್ಲಿ ಸೇರ್ಪಡೆಯಾಗಬೇಕೆಂದರು.

ಚುನಾವಣೆ ಹತ್ತಿರ ಬಂದಿರುವುದರಿಂದ‌ ಮೋದಿ‌ ರಾಜ್ಯಕ್ಕೆ ‌ಪ್ರತಿವಾರ ಬರುತ್ತಿದ್ದಾರೆ. ನಿನ್ನೆ ಕೂಡ ಲಂಬಾಣಿ ಜನರಿಗೆ ಹಕ್ಕು ಪತ್ರ ನೀಡಲು ಬಂದಿದ್ದರು.‌ಇದಕ್ಕೆ ಕಾನೂನು ಮಾಡಿದವರು ನಾವು. ಆದರೆ ಹಕ್ಕು ಪತ್ರ ನೀಡುತ್ತಿರುವುದು ಈ ಡೋಂಗಿ ಜನ.‌ಇಂಥವರಿಗೆ ಓಟ ಕೊಡಬೇಕಾ‌ ಎಂದು ಪ್ರಶ್ನಿಸಿದರು.

ಬಿಜೆಪಿಯಂಥಹ ಕಡುಭ್ರಷ್ಟ, ಜನರ ರಕ್ತ ಹೀರುವ ಸರಕಾರವನ್ನು ನನ್ನ ನಲವತ್ತು ವರ್ಷಗಳ ರಾಜಕೀಯ ‌ಜೀವನದಲ್ಲಿ ನೋಡಲಿಲ್ಲ.‌ಇಂಥಹ ಸರ್ಕಾರದ ವಿರುದ್ದ ಪಕ್ಷದ ಕಾರ್ಯಕರ್ತರು ಮನೆ ಮನೆಗೆ ಹೋಗಿ ತಿಳಿಸಬೇಕು.‌ಮಹಿಳೆತರು, ಕೃಷಿಕರು ಎಚ್ಚೆತ್ತುಕೊಂಡು 2023 ರ ಚುನಾವಣೆಯಲ್ಲಿ ಕಾಂಗ್ರೆಸ್ ಸರಕಾರವನ್ನು ಅಧಿಕಾರಕ್ಕೆ ತರಲು ಶಪಥ ಮಾಡಬೇಕೆಂದು ಕರೆ ನೀಡಿದರು.

ಪ್ರತಿದಿನ ಬಿಜೆಪಿಯವರ ಕರ್ಮಕಾಂಡಗಳನ್ನು ರಾಜ್ಯದ ಜನ ನೋಡುತ್ತಿದ್ದಾರೆ. ಇದರಿಂದ ಈ ಸರ್ಕಾರದ ಪಾಪದಕೊಡ ತುಂಬಿದೆ..ಈ ಸರ್ಕಾರ ಮನೆಗೆ ಹೋಗಲೇ ಬೇಕು.ಈ ಸರ್ಕಾರ ಇನ್ನು ಮೂರು ತಿಂಗಳು ಮಾತ್ರ ಅಧಿಕಾರದಲ್ಲಿ ಇರುತ್ತದೆ. ನಂತರ ರಾಜ್ಯದ ಜನ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಪ್ರಯತ್ನ ಮಾಡಲಿದ್ದಾರೆ ಎಂದರು.

2018 ರಲ್ಲಿ ನಾವು ತಪ್ಪು ಮಾಡಿದೆವು ಎಂದು ರಾಜ್ಯದ ಜನ ಚರ್ಚೆ ಮಾಡುತ್ತಿದ್ದಾರೆ.ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ನಾವು ಆಶೀರ್ವಾದ ಮಾಡಲಿಲ್ಲ ಎಂದು ಜನ ಪರಿತಪಿಸುತ್ತಿದ್ದಾರೆ.ನಮ್ಮ ಸರ್ಕಾರ ನುಡಿದಂತೆ ನಡೆದಿತ್ತು. ‌ಕೊಟ್ಟ ಮಾತಿನಂತೆ ನಡೆದುಕೊಂಡಿತ್ತು. ಪರಿ‌ಶಿಷ್ಟ ಜಾತಿ ವರ್ಗಗಳ ಜನರಿಗೆ ನಮ್ಮ ಸರಕಾರ ನೀಡಿದಷ್ಡು ಅನುದಾನ ಯಾವ ಸರ್ಕಾರ ‌ಕೂಡ‌ ನೀಡಿಲ್ಲ ಎಂದು ಹೇಳಿದರು.

ಎಐಸಿಸಿ ಕಾರ್ಯದರ್ಶಿ ಮಯೂರ್ ಜಯಕುಮಾರ್,ಪರಿಷತ್ತು ವಿರೋಧ ಪಕ್ಷದ ನಾಯಕ‌ ಬಿ.ಕೆ.ಹರಿಪ್ರಸಾದ್ ಇದ್ದರು

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!