ಚಿತ್ರದುರ್ಗ ಜಿಲ್ಲೆಯ ಯೋಗಿ ನಾರಾಯಣ ಟ್ರಸ್ಟ್ ಗೆ 100 ಲಕ್ಷಗಳ ಅನುದಾನ ಮಂಜೂರು !
ದಾವಣಗೆರೆ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿವಿಧ ಸಮುದಾಯಗಳ ಅಭಿವೃದ್ದಿ ಕಾರ್ಯಕ್ರಮದಡಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಯೋಗಿ ನಾರಾಯಣ ಟ್ರಸ್ಟ್ ಗೆ 100 ಲಕ್ಷಗಳ ಅನುದಾನ ಬಿಡುಗಡೆ ಮಾಡಿ ಆದೇಶಿಸಲಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿವಿಧ ಸಮುದಾಯಗಳ ಅಭಿವೃದ್ದಿ ಕಾರ್ಯಕ್ರಮದಡಿ ಸಮುದಾಯ ಭವನ, ವಿದ್ಯಾರ್ಥಿನಿಲಯ ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿ ರಾಜ್ಯ ಸರ್ಕಾರ ಜೂನ್ 13ರ 2022ರಂದು ಆದೇಶ ಹೊರಡಿಸಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿವಿಧ ಸಮುದಾಯಗಳ ಅಭಿವೃದ್ದಿ ಕಾರ್ಯಕ್ರಮದಡಿ ಸಮುದಾಯ ಭವನ, ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣಕ್ಕಾಗಿ ಪಟ್ಟಣ ಪಂಚಾಯ್ತಿ, ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ರೂ. 10 ಲಕ್ಷ, ತಾಲೂಕು ಕೇಂದ್ರ ಸ್ಥಾನ ರೂ. 25 ಲಕ್ಷ ಹಾಗೂ ಜಿಲ್ಲಾ ಕೇಂದ್ರ ಸ್ಥಾನ ರೂ. 50 ಲಕ್ಷಗಳಂತೆ ಗರಿಷ್ಠ ಮಿತಿಗೊಳಪಟ್ಟು ಪ್ರವರ್ಗ-1,2ಎ,3ಎ ಮತ್ತು ಪ್ರವರ್ಗ-3ಬಿಗೆ ಸೇರಿದ ಜಾತಿಗಳ ನೋಂದಾಯಿತ ಸಂಘ, ಸ್ವಯಂ ಸೇವಾ ಸಂಸ್ಥೆ, ಟ್ರಸ್ಟ್ ಗಳಿಗೆ ಸಹಾಯ ಧನವನ್ನು ಮಂಜೂರು ಮಾಡಲಾಗುತ್ತಿದೆ. ಅಷ್ಟೇಅಲ್ಲದೆ ಅನುದಾನದ ಮಿತಿಯನ್ನು ಅಗತ್ಯ ಸಂಧರ್ಭಗಳಲ್ಲಿ ಸಡಿಲಗೊಳಿಸಿ ವಿಶೇಷ ಪ್ರಕರಣವೆಂದು ಪರಿಗಣಿಸಿ ಹೆಚ್ಚುವರಿಯಾಗಿ ಮಂಜೂರು ಅವಕಾಶ ಕಲ್ಪಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
garudavoice21@gmail.com 9740365719