ಮಾಯಕೊಂಡ ಕ್ಷೇತ್ರಕ್ಕೆ 15 ಅಪೇಕ್ಷಿತರು ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್

ಮಾಯಕೊಂಡ ಕ್ಷೇತ್ರಕ್ಕೆ 15 ಅಪೇಕ್ಷಿತರು ಬಿಜೆಪಿ

ದಾವಣಗೆರೆ: ಮಾಯಕೊಂಡ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಸ್ಪರ್ಧಿಸಲು 15 ಜನ ಅಪೇಕ್ಷಿತರು ತಮಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್ ತಿಳಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಿಹರ ಕ್ಷೇತ್ರದಲ್ಲಿ ಸ್ಪರ್ಧಿಸಲು 3 ಜನ, ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ 6 ಹಾಗೂ ಉತ್ತರಕ್ಕೆ 8 ಜನ ಜನ ಅಪೇಕ್ಷಿತರಿದ್ದಾರೆ. ಚನ್ನಗಿರಿ, ಹೊನ್ನಾಳಿ ಹಾಗೂ ಜಗಳೂರು ಕ್ಷೇತ್ರದಲ್ಲಿ ಶಾಸಕರುಗಳೇ ಇದ್ದು, ಬೇರೆಯವರು ಯಾರೂ ತಮಗೆ ಅರ್ಜಿ ನೀಡಿಲ್ಲ ಎಂದವರು ಹೇಳಿದರು. ಅಭ್ಯರ್ಥಿಗಳ ಆಯ್ಕೆ ಬಗ್ಗೆ ಪಕ್ಷದ ವರಿಷ್ಠರೇ ತೀರ್ಮಾನಿಸಲಿದ್ದಾರೆ ಎಂದವರು ಹೇಳಿದರು.

Leave a Reply

Your email address will not be published. Required fields are marked *

error: Content is protected !!